ಹನೂರು : ಕ್ಷೇತ್ರ ವ್ಯಾಪ್ತಿಯ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀ ಯುತ ಕಲಾವತಿ ಮಾದೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹನೂರು ತಾಲ್ಲೋಕಿನ ಚಿಕ್ಕಮಾಲಾಪುರ
ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನಂಜುಂಡಸ್ವಾಮಿ ರವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಇಂದು ಅಧ್ಯಕ್ಷರ ಚುನಾವಣೆ ನಡೆಯಿತು. ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ 10, ಪಕ್ಷೇತರ ಇಬ್ಬರು ಹಾಗೂ ಬಿಜೆಪಿ ಬೆಂಬಲಿತ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಅಧಿಕಾರದ ಅವಧಿಯಲ್ಲಿ
30 ತಿಂಗಳ ಅಧ್ಯಕ್ಷಗಾದಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರ ಸಮ್ಮತಿಯ ಮೇರೆಗೆ ಮೊದಲ 10 ತಿಂಗಳಿಗೆ ಚಿಕ್ಕಮಾಲಾಪುರ ಗ್ರಾಮದಿಂದ ಆಯ್ಕೆಯಾಗಿದ್ದ ಅಶೋಕ್, ನಂತರದ ಹತ್ತು ತಿಂಗಳಿಗೆ ಬೆಳತ್ತೂರು ಗ್ರಾಮದ ನಂಜುಂಡಸ್ವಾಮಿ ಆಯ್ಕೆಯಾಗಿದ್ದರು ಇದೀಗ ಕೊನೆಯ10 ತಿಂಗಳಿಗೆ ಕಂಡಯ್ಯನ ಪಾಳ್ಯ ಗ್ರಾಮದ ಸದಸ್ಯರಾದ ಕಲಾವತಿ ಮಾದೇಶ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಲಾವತಿ ಮಾದೇಶ್ ಹೊರತು ಪಡಿಸಿ ಬೆರ್ಯಾರು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಂಗಾದರ್ ರವರು ಸರ್ಕಾರದ ನೀತಿನಿಯಮದಂತೆ ಕಲಾವತಿ ಮಾದೇಶ ರವರನ್ನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.
ಇದೇ ಸಮಯದಲ್ಲಿ
ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾರ ತುರಾಯಿಗಳನ್ನು ಹಾಕಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಮಹದೇವಮ್ಮ, ಸದಸ್ಯರುಗಳಾದ ಪುಷ್ಪಾವತಿ,ರಾಜಮಣಿ ,ನಾಗಣ್ಣ, ಪ್ರಭುಸ್ವಾಮಿ, ರಾಜಿ ಬಾಯಿ, ಚೆನ್ನಪ್ಪ, ಮಲ್ಲೇಶ್, ನಂಜುಂಡಸ್ವಾಮಿ, ಅಶೋಕ್, ಮುಖಂಡರುಗಳಾದ ವೆಂಕಟೇಶ್, ನಂಜುಂಡ ಶೆಟ್ಟಿ, ಕಂಡಯ್ಯನ ಪಾಳ್ಯ ಮಾದೇಶ್, ಉದ್ದನೂರು ಸಿದ್ದರಾಜು, ರುದ್ರಪ್ಪ, ಶಿವಣ್ಣ,ವೇಲು ಸ್ವಾಮಿ, ಮಲ್ಲು ಸ್ವಾಮಿ, ಅಂಕರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು. ವರದಿ ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.