ಹಾವೇರಿ/ಶಿಗ್ಗಾಂವ:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದುಂಡಶಿ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಆಯುಶ್ಮಾನ ಆರೋಗ್ಯ ಕೇಂದ್ರ ದುಂಡಶಿ ಇವರ ಸಂಯುಕ್ತ ಆಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರಾದ ಶ್ರೀಮತಿ ವಿ ಸಿ ಪಾಟೀಲ್ ರವರು ಮಾತನಾಡಿ ಅರಣ್ಯವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಗಿಡ ಮರಗಳು ಹೆಚ್ಚಾಗಿ ಬೆಳೆಸಿದರೆ ಮಳೆ ಚೆನ್ನಾಗಿ ಬಂದು ಪರಿಸರ ಸಮತೋಲನ ಇರುತ್ತದೆ ಎಂದರು.
ಈ ಸಮಯದಲ್ಲಿ ದುಂಡಶಿ ವಲಯ ಅರಣ್ಯಾಧಿಕಾರಿಗಳಾದ ಶ್ರೀ ರವಿಕುಮಾರ್ ಪುರಾಣಿಕಮಠ ರವರು ಮಾತನಾಡಿ ಎಲ್ಲಾ ಸಾರ್ವಜನಿಕರು ನಮ್ಮ ಪರಿಸರ ಉಳಿಸಿ ಬೆಳೆಸಲು ಕೈಜೋಡಿಸಿ ಜೊತೆಗೆ ನಾವು ಕೋಟಿ ವೃಕ್ಷ ಆಂದೋಲನವನ್ನು ಹಮ್ಮಿಕೊಂಡಿದ್ದು ಪರಿಸರ ದಿನಾಚರಣೆ ಯಶಸ್ವಿಯಾಗಲು ಶ್ರಮಿಸಬೇಕು ಎಂದರು. ಈ ಸಮಯದಲ್ಲಿ ದುಂಡಶಿ ಗ್ರಾಮದ ಶ್ರೀಮತಿ ಖುತೇಜಾ ಖಾದರಗೌಸ ಜಮಾದಾರ್,ಶ್ರೀ ದಾಮಲೆಪ್ಪ ರಾಠೋಡ,ರೈತ ಸಂಘದ ಮುಖಂಡರಾದ ಶ್ರೀ ಈರಣ್ಣ ಸಮಗೊಂಡ ದುಂಡಶಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀ ಪಂಚಾಕ್ಷರಪ್ಪ ತೆಗ್ಗಿ ಹಳ್ಳಿ ಉಪವಲಯ ಅರಣ್ಯಾಧಿಕಾರಿಗಳು ದುಂಡಶಿ ಗಸ್ತು ಅರಣ್ಯ ಪಾಲಕರಾದ ಮೋಹನ ಶಾಮನೂರ,ಭೀಮೇಶ ಕೆಳಗಿನಮನಿ ಆರೋಗ್ಯ ಇಲಾಖೆ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಮತ್ತು ದುಂಡಶಿ ಗ್ರಾಮದ ನಾಗರೀಕರು ಉಪಸ್ಥಿತರಿದ್ದರು.
ವರದಿಗಾರರು ಮಂಜುನಾಥ ಪಾಟೀಲ