ಕಲಬುರಗಿ:ಗಾಣಿಗ ಸಮಾಜ ಯುವ ಘಟಕ ಯಡ್ರಾಮಿ ತಾಲೂಕು ಹಾಗೂ ಜೇವರ್ಗಿ ಘಟಕದಿಂದ 2023 /24 ನೆ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಡ್ರಾಮಿ ತಾಲೂಕ ಗಾಣಿಗ ಸಮಾಜದ ಅಧ್ಯಕ್ಷರಾದ ಸಿದ್ದನಗೌಡ ಎಂ ಪಾಟೀಲ್ ಮಾಗಣಗೇರಿ ತಿಳಿಸಿದರು.
ಯಡ್ರಾಮಿ ತಾಲೂಕು ಮತ್ತು ಜೇವರ್ಗಿ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಾಧನೆಗೈದ ಸಮಾಜ ಸಾಧಕರಿಗೆ ಯಡ್ರಾಮಿ ತಾಲೂಕಿನ ಗಾಣಿಗ ಸಮಾಜ ಯುವ ಘಟಕ ಉದ್ಘಾಟನೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿ ಸೂಚನೆ:ಎಸ್ ಎಸ್ ಎಲ್ ಸಿ 85ಕ್ಕಿಂತ ಮೇಲ್ಪಟ್ಟ ಮತ್ತು ಪಿಯುಸಿ 90 ಶೇ ಮೇಲ್ಪಟ್ಟ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜೂನ್ 19 ರ ಒಳಗಾಗಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ತಮ್ಮ ಹೆಸರು ಪೂರ್ಣ ವಿಳಾಸ ದೊಂದಿಗೆ ಒಂದು ಫೋಟೋ,ನಕಲು ಪ್ರತಿ ಅಂಕಪಟ್ಟಿ, ಆಧಾರ್ ಕಾರ್ಡ್ ಸಲ್ಲಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9008307762
9900197272
9901393143.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್(ಜೇವರ್ಗಿ)