ಯಾದಗಿರಿ:ಜೂನ್ ೦೭ ರಂದು ವಡಗೇರಾ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಯಕ್ಷಿಂತಿ ಗ್ರಾಮದ ಲಕ್ಷ್ಮಿಭಾಯಿ ಗಂ ನಿಂಗಪ್ಪ ಎನ್ನುವವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಹಾನಿ ಸಂಭವಿಸಿದೆ ಮಧ್ಯಾಹ್ನ ವೇಳೆ ಮಳೆ ಬಂದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ೧೫ ವರ್ಷದಿಂದ ಗಂಡನ ಕಳೆದುಕೊಂಡು ಜೀವನ ಸಾಗಿಸುತ್ತಿದ್ದ ಲಕ್ಷ್ಮಿಬಾಯಿ ಒಬ್ಬ ಮಗ ಸೊಸೆ ಇದ್ದು ಮಹಾರಾಷ್ಟ್ರಕ್ಕೆ ದುಡಿಯಲು ವಲಸೆ ಹೋಗಿದ್ದಾರೆ ಗ್ರಾಮದಲ್ಲಿ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಲಕ್ಷ್ಮಿಬಾಯಿ ಈಗ ವರುಣನ ಆರ್ಭಟಕ್ಕೆ ಮನೆಯ ಮೇಲ್ಚಾವಣಿ ಕುಸಿದು ಗೋಡೆ ಬೀಳುವ ಹಂತದಲ್ಲಿದೆ ಲಕ್ಷ್ಮಿಬಾಯಿಗೆ ಜೀವನ ನಡೆಸಲು ಸೂರು ಇಲ್ಲದಂತಾಗಿದೆ ತಕ್ಷಣ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಂದು ವೀಕ್ಷಿಸಿ ಪರಿಶೀಲಿಸಿ ಲಕ್ಷ್ಮಿಬಾಯಿ ಅವರಿಗೆ ವಸತಿ ಕಲ್ಪಿಸಿಕೊಡಬೇಕೆಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ನಿಂಗಣ್ಣ ಕರಡಿ ಆಗ್ರಹಿಸಿದ್ದಾರೆ.
ವರದಿ:ಶಿವರಾಜ ಸಾಹುಕಾರ್ ವಡಗೇರಾ