ಶಿವಮೊಗ್ಗ:2024-25 ನೇ ಸಾಲಿನ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಸಂಸ್ಥೆ,ಶಿವಮೊಗ್ಗ ಇಲ್ಲಿ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್‍ಗಳಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ,
02 ವರ್ಷಗಳ ಐಟಿಐ/ದ್ವಿತೀಯ ಪಿಯುಸಿ(ವಿಜ್ಞಾನ/ದ್ವಿತೀಯ ಪಿಯುಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್‍ಗಳಿಗೆ ಪ್ರವೇಶ ಸೀಟುಗಳನ್ನು ಭರ್ತಿ ಮಾಡಲು ಪ್ರಾಂಶುಪಾಲರ ಹಂತದಲ್ಲಿಯೇ ಮೆರಿಟ್ ಆಧಾರಿತವಾಗಿ ಆಫ್‍ಲೈನ್ ಮೂಲಕ ದಿ: 10-06-2024 ರಿಂದ 25-06-2024 ರವರೆಗೆ ಅರ್ಜಿ ಸ್ವೀಕರಿಸಲಾಗುವುದು ಹಾಗೂ ದಿ: 27-06-2024 ರಿಂದ 28-06-2024 ರವರೆಗೆ ಸೀಟು ಹಂಚಿಕೆ ಮಾಡಲಾಗುವುದು.
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟಿಸ್(ಕನ್ನಡ),ಕಮರ್ಷಿಯಲ್ ಪ್ರಾಕ್ಟಿಸ್(ಇಂಗ್ಲೀಷ್),ಆಪರೇಲ್ ಡಿಸೈನ್ & ಫ್ಯಾಬ್ರಿಕೇಷನ್ ಟೆಕ್ನಾಲಜಿ ಕೋರ್ಸುಗಳು ಲಭ್ಯವಿದೆ.
ಆಸಕ್ತ ಅಭ್ಯರ್ಥಿಗಳು ಐಟಿಐ/ಪಿಯುಸಿ ಪರೀಕ್ಷೆಯಲ್ಲಿ ಶೇ.35 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಮೂಲ ವರ್ಗಾವಣೆ ಪ್ರಮಾಣ ಪತ್ರ/ಎನ್‍ಓಸಿ,5 ವರ್ಷದ ವ್ಯಾಸಂಗ ಪ್ರಮಾಣ ಪತ್ರ,ಜಾತಿ ಮತ್ತು ಆಧಾರಯ ಪ್ರಮಾಣ ಪತ್ರ,ಆಧಾರ್,04 ಭಾವಚಿತ್ರಗಳನ್ನು ಸಲ್ಲಿಸಬೇಕು.
ಜೂನ್ 25 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು ಹೆಚ್ಚಿನ ವಿವರಗಳಿಗೆ :
ರವಿನಾಯಕ್ ಡಿ, ಪ್ರಾಂಶುಪಾಲರು ಮೊ.ಸಂ:9886610245 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ