ಯಾದಗಿರಿ:ತಾಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.
ಸಾರ್ವಜನಿಕ ಕುಂದು ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು,ಜಂಟಿಯಾಗಿ ತಾಲೂಕ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಒಟ್ಟು ಮನವಿ, ಕೋರಿಕೆಗಳ ಮೇಲೆ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸಲು ಸೂಚಿಸಿರುತ್ತಾರೆ.
ತಾಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿರುವುದರಿಂದ ಸದರಿ ದಿನಾಂಕಗಳಂದು ಸೂಚಿಸಿದ ಸ್ಥಳಗಳಲ್ಲಿ ಸರಿಯಾದ ಸಮಯಕ್ಕೆ ಹಾಜರಾಗಿ ಸಾರ್ವಜನಿಕರಿಂದ ಸ್ವೀಕೃತವಾದ ಒಟ್ಟು ಮನವಿ, ಕೋರಿಕೆಗಳ ಮೇಲೆ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಹುಣಸಗಿ ತಾಲೂಕ ಕೇಂದ್ರ ಹುಣಸಗಿ ಕೆ.ಬಿ.ಜೆ.ಎನ್.ಎಲ್ ಕಲ್ಯಾಣ ಮಂಟಪದಲ್ಲಿ 2024ರ ಜೂನ್ 19 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಇದ್ದು, ಸುರಪುರ ತಾಲೂಕು ಕೇಂದ್ರ ಸುರಪುರ ತಹಸೀಲ್ದಾರ ಕಾರ್ಯಾಲಯ ಆವರಣದಲ್ಲಿ 2024ರ ಜೂನ್ 19 ರಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯ ವರೆಗೆ ಇದ್ದು, ವಡಗೇರಾ ತಾಲೂಕು ಕೇಂದ್ರ ವಡಗೇರಾ ತಹಸೀಲ್ದಾರ ಕಾರ್ಯಾಲಯದಲ್ಲಿ 2024ರ ಜೂನ್ 21 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಹ್ವಾನ ಸ್ವೀಕರಿಸಲಿದೆ.
ಶಹಾಪೂರ ತಾಲೂಕ ಕೇಂದ್ರ ಶಹಾಪೂರ ತಾಲೂಕ ಪಂಚಾಯತ್ ಕಾರ್ಯಾಲಯ ಆವರಣದಲ್ಲಿ 2024ರ ಜೂನ್ 21 ರಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯ ವರೆಗೆ ಇದ್ದು, ಗುರುಮಠಕಲ್ ತಾಲೂಕ ಕೇಂದ್ರ ಗುರಮಠಕಲ್ ತಹಸೀಲ್ದಾರ ಕಾರ್ಯಾಲಯ ಆವರಣದಲ್ಲಿ 2024ರ ಜೂನ್ 25 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಇದ್ದು, ಯಾದಗಿರಿ ತಾಲೂಕ ಕೇಂದ್ರ ಯಾದಗಿರಿ ಬಾಬು ಜಗಜೀವನರಾವ್ ಭವನದಲ್ಲಿ 2024ರ ಜೂನ್ 25 ರಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯ ವರೆಗೆ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಆಹ್ವಾನ ಸ್ವೀಕರಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಶಿವರಾಜ ಸಾಹುಕಾರ್ ವಡಗೇರಾ