ಇಂಡಿ:ವೈದ್ಯನಾಥನ್ ವರದಿಯ ಯಥಾವತ್ತಾಗಿ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಟಿ.ಎಸ್.ಆಲಗೂರ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
‘ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವುದು.ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಕಲ್ಪಿಸಬೇಕು.ಮುಖ್ಯ ಶಿಕ್ಷಕರ ಮುಂಬಡ್ತಿ ನೀಡಬೇಕು. ಈ ಹಿಂದೆ ಸರ್ಕಾರ ನೇಮಿಸಿದ ಎಲ್.ಆರ್.ವೈದ್ಯನಾಥನ್ ಸಮಿತಿಯ ಶಿಫಾರಸ್ಸು ಯಥಾವತ್ತಾಗಿ ಜಾರಿಗೆ ತರಬೇಕು.ಇಲ್ಲದಿದ್ದರೆ ಪ್ರಸಕ್ತ ಸಾಲಿನ ಎಲ್ಲಾ ಕ್ರೀಡಾಕೂಟಗಳನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ’ಎಂದು ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಶ್ರೀ ಎಚ್.ಎಮ್.ಬಿಳವಾರ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಟಿ. ಎಸ್.ಹೊಸಮನಿ ಹೇಳಿದರು.
ಹಲವು ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಭರವಸೆ ಈಡೇರಿಸುವ ಮಾತುಗಳನ್ನು ಕೇಳಿಬರುತ್ತವೆ.ಇಲಾಖೆಯ ಕ್ರೀಡಾಕೂಟಗಳು ಮುಗಿದರೆ, ಭರವಸೆ ಮಾತುಗಳನ್ನು ಮರೆತು ಬಿಡುತ್ತಾರೆ.ಈ ಬಾರಿ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗಿದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶ್ರೀ ಎಮ್. ಎಮ್.ಮಡಿವಾಳರ, ವ್ಹಿ.ಎಸ್.ಜಾಧವ,ಪ್ರಕಾಶ ಐರೋಡಗಿ,ಜೆ.ಎಮ್.ಕಡಣಿ, ಸೂರ್ಯಕಾಂತ ಸಿನಖೇಡ,ದಶರಥ ಕೋರಿ, ಆರ್.ಎಸ್.ದೇವಣಗಾಂವ,ಎಸ್.ಟಿ.ಜೇವೂರ,ಅಶೋಕ ಜಂಬಗಿ,ಆರ್.ಕೆ.ಹಳ್ಳಿ,ಎ.ಎನ್. ಕಂಬಾರ, ಎಸ್.ಎಸ್.ರಾಂಪುರ,ಎಸ್.ಎ.ಅಂಬಾರೆ,ಎಸ್.ಬಿ.ಓಂಕಾರಿ ಹಾಗೂ ಶ್ರೀಮತಿ ಶೈಲಾ ಬಿರಾದಾರ,ಎಸ್.ಎಮ್.ಕಾರಕಲ್ ಹಾಗೂ ಎಲ್.ಬಿ.ತೋಟದ ಇತರರು ಹಾಜರಿದ್ದರು.
