ಗದಗ ಜಿಲ್ಲಾ ರೋಣ ತಾಲೂಕ ಬೆಳವಣಿಕಿ ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಸುತ್ತಮುತ್ತಲಿನ ಗ್ರಾಮಗಳಾದ ಬೆಳವಣಿಕಿ, ಕೌಜಗೇರಿ, ಮಲ್ಲಾಪೂರ, ಯಾವಗಲ್ಲ, ಯಾ.ಸ.ಹಡಗಲಿ, ದಾಟನಾಳ ಇತರೆ ಗ್ರಾಮಗಳಿಗೆ ಶಾಖೆ ಹೊಂದಿದ್ದು, ಬ್ಯಾಂಕ್‌ನ ಸಿಬ್ಬಂದಿಗಳಾದ ಫೀಲ್ಡ್ ಆಫೀಸರ್, ಅಸಿಸ್ಟಂಟ್ ಮ್ಯಾನೇಜರ್ ಗಳ ಕೊರತೆಯಿದ್ದು ರೈತರಿಗೆ ಕೃಷಿಸಾಲ ಪಡೆದುಕೊಳ್ಳಲು ಹಾಗೂ ಮರುಪಾವತಿ ಮಾಡಲು ರೈತರಿಗೆ ತುಂಭಾ ತೊಂದರೆಯಾಗಿದ್ದು ಶಾಖೆಯಲ್ಲಿ ವಿಚಾರಣೆ ಮಾಡಿದರೆ ಸುಮಾರು 1 ತಿಂಗಳಿನಿಂದ ವರ್ಗಾವಣೆಯಿಂದ ಖಾಲಿಯಾಗಿರುವ ಹುದ್ದೆಯನ್ನು ಇನ್ನೂ ಭರ್ತಿ ಮಾಡಿಲ್ಲ ಎಂದು ಶಾಖಾಧಿಕಾರಿಗಳು ಉತ್ತರಿಸುತ್ತಿದ್ದಾರೆ.ಸಿಬ್ಬಂದಿ ಇರದೇ ಇರದ ಕಾರಣ ಸಾಲ ಮರುಪಾವತಿಯಾಗದೆ ಸಾಲದ ಬಡ್ಡಿ ಮೊತ್ತವು ಹೆಚ್ಚಾಗಿ ರೈತರಿಗೆ ತೊಂದರೆ ಉಂಟಾಗುತ್ತಿದೆ ಎಂದು ರೈತರು ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಿದ್ದಾರೆ ಹಾಗೂ ಮುಂಗಾರು ಬಿತ್ತನೆ ಪ್ರಾರಂಭಗೊಂಡಿದ್ದು ರೈತರಿಗೆ ಬಿತ್ತನೆ ಮಾಡಲು ಬೀಜ, ಗೊಬ್ಬರ, ಔಷಧಿ ಸಲುವಾಗಿ ನೀಡುವ ಕೃಷಿ ಸಾಲವನ್ನು ರೈತರು ಕೇಳಿದರೆ ಸದ್ಯ ಶಾಖೆಯಲ್ಲಿ ಫೀಲ್ಡ್ ಆಫೀಸರ್ ಕೊರತೆಯಿದ್ದು ಆಫೀಸರ್ ಬಂದ ನಂತರ ನೀಡುವುದಾಗಿ ತಿಳಿಸುತ್ತಿದ್ದಾರೆ ರೈತರು ಶಾಖೆಗೆ ಫೀಲ್ಡ್ ಆಫೀಸರ್ ರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕೆನರಾ ಬ್ಯಾಂಕ್ ರೀಜನಲ್ ಆಫೀಸರ್ ಗೆ ಮನವಿ ಪತ್ರ ಮೂಲಕ ಮೇಲಾಧಿಕಾರಿಗಳಿಗೆ ರವಾನಿಸಿ ಮಾಹಿತಿ ನೀಡಿ ತಮ್ಮ ಮನವಿಯನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಕುರಿತು ರೈತರಾದ ಶರಣಪ್ಪ ವಡ್ಡಟ್ಟಿ, ನಿಂಗರಾಜ ತಾಳಿ, ಪ್ರವೀಣ ಜಕನೂರ, ಆನಂದಸ್ವಾಮಿ ಹಿರೇಮಠ, ಸಂತೋಷ ತಟ್ಟಿ, ಸಂಗಪ್ಪ ಬಳಿಗೇರ, ಉಮೇಶ ಹುಳ್ಳಿ, ಧರ್ಮಣ್ಣ ಮಾಡಳ್ಳಿ, ಭೀಮಪ್ಪ ಕೊಪ್ಪದ, ಮಹಾಂತೇಶ ಶಿರೋಳ, ಪಿ.ಎಸ್.ಉಗಲಾಟ, ಬಿ ಎಚ್ ಕಿತ್ತಲಿ, ಬಸನಗೌಡ ಪಾಟೀಲ, ಮುಂತಾದ ರೈತರು ಶಾಖಾಧಿಕಾರಿಗಳಿಗೆ ಮನವಿ ನೀಡಿದರು.
ವರದಿ ನಿಂಗರಾಜ ತಾಳಿ