ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಿರುಕನಾಗ ಕಥೆಯ ಒಂದು ಅವಲೋಕನ…

ಮಹಾರಾಷ್ಟ್ರ:ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಲೇಖಕರಾದ ಶ್ರೀ ಚನ್ನಪ್ಪ ಸುತಾರ ಯವರು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಶಿಕ್ಷಣ ಪಡೆದಿದ್ದು ಮರಾಠಿಯಲ್ಲಿ ಆದರೆ ಸಾಹಿತ್ಯ ರಚನೆ ಮಾಡಿದ್ದು ಕನ್ನಡದಲ್ಲಿ ಈಗಾಗಲೇ ಏಳು ಕೃತಿ ಬರೆದಿರುವ ತಾಲೂಕಿನಲ್ಲಿ ಕನ್ನಡ ಉಳಿವಿಗಾಗಿ ಸ್ವಂತ ಖರ್ಚಿನಿಂದ ಗಡಿನಾಡು ಸಾಹಿತ್ಯ ಸಮ್ಮೇಳನ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಅವ್ವಾ ಅಂತ ಜೋರಾಗಿ ಚೀರಿದ ಮೂರು ನಾಲ್ಕು ಅಡಿ ಮೇಲಿಂದ ಬಿದ್ದ ತಲೆಗೆ ಪೆಟ್ಟ ಆಗಿ ರಕ್ತ ಬರುತಿತ್ತು ತನ್ನಕ್ಕೆ ಇಟ್ಟು ಎದ್ದು ಕುಳಿತ ಕಣ್ಣು ತೆರೆದು ನೋಡಿದ ಜೋರಜೋರಾಗಿ ಗಾಳಿ ಬೀಸುತ್ತಿತ್ತು ಗಾಬರಿಯಾಗಿ ನೋಡಿದ ಸುತ್ತ ಮುತ್ತ ಗಿಡಮರ ಬೇರೆ ಏನು? ಕಾಣಲಿಲ್ಲ ಎದ್ದ ಕಟ್ಟೆಯ ಮ್ಯಾಲ ಬಂದ ದೇವಾಲಯ ಇತ್ತ ಅಷ್ಟರ ಒಳಗ ಮೋಡದಿಂದ ಮರೆಯಾದ ಚಂದ್ರ ಮತ್ತೆಬೆಳಕ ನೀಡಿದ ದೇವಾಲಯದಲ್ಲಿ ಸರಿಯಾಗಿ ಕಾಣದಿದ್ದರೂ ದೇವಿ ಮೂರ್ತಿ ಗೊತ್ತಾತ್ತು ದೇವಿಗೆ ನಮಸ್ಕಾರ ಮಾಡಿದ ತನ್ನ ಮ್ಮೆ ಮಾಲಿನ ಬಟ್ಟೆ ನೋಡಿದ ಹರಕು ಬಟ್ಟೆ ಗೇಣುದ್ದ ಗಡ್ಡ ತಲೆಮ್ಯಾಲ ಕೊದಲು ನೋಡಿ ತಾನು ಇಲ್ಲಿಗೇಕೆ ಬಂದೆ ಯಾರು ಇಲ್ಲದ ಜಾಗದಲ್ಲಿ ಅನಾಥನಾಗಿ ಮಲಗಿರುವೆ ನೂರಾರು ಪ್ರಶ್ನೆ ತಲೆಯಲ್ಲಿ ಬಂದರೂ ಉತ್ತರ ಬರಲಿಲ್ಲ ದೇವಿಯನ್ನ ಕೇಳಕ ಹತ್ತಿದ ಶಿರ ಬಿಗಿದ ಬಂತು ಕಣ್ಣಾಗ ನೀರು ಬಂದು ತಂದೆ ತಾಯಿ ಎಲ್ಲಿ ಆದಾರ ನಾ ಯಾಕ ಇಲ್ಲಿಗೆ ಬಂದಿ ಒಂದ ನೆನಪ ಬರಲಿಲ್ಲ.
ವೀರಣ್ಣ ರಾಜಣ್ಣ ತಂಗಿ ಪ್ರೇಮಾ ಹಾಗೂ ತಂದೆ ತಾಯಿ ಇಷ್ಟ ರಾಗಣ್ಣ ಕುಟುಂಬ ಸಿದ್ಧಾಪೂರ ದೊಡ್ಡ ಸಾಹುಕಾರ ಶಿವಲಿಂಗಪ್ಪ ಪಾರ್ವತಿ ದಂಪತಿಗಳ ಹಿರಿಯ ಮಗ ರಾಗಣ್ಣ ಬಹಳ ದಿವಸಕ್ಕ ಹುಟ್ಟಿದ ಸಾಹುಕಾರ ಮನೆಯ್ಯಾಗ ರಾಗಣ್ಣ ಶಾಲೆ ಯ್ಯಾಗ ಬಹಳ ಶಾಣ್ಯ ಇದ್ದ ಅವ ಹುಟ್ಟಿದ ಎಂಟು ವರುಷಕ್ಕ ರಾಜಣ್ಣ ಪ್ರೇಮಾ ಹುಟ್ಟಿದರು 7ನೇ ತರಗತಿ ಹುಟ್ಟುರಲ್ಲಿ ಮುಗಿಸಿ ಪಟ್ಟಣಕ್ಕ ಹೋದ ಬಿಎ ಶಿಕ್ಷಣ ಪಡೆದ ಕಷ್ಟ ಗೊತ್ತಿರಲಿಲ್ಲ. ಮುಂಜಾನೆ ವೇಳೆಯಲ್ಲಿ ಕಾಳಾಚಾರ್ಯ ಕಾಳಮ್ಮ ದೇವಿಯ ಪೂಜೆಗೆ ಬಂದ ಗುಡಿಯ್ಯಾಗ ನಿದ್ದಿ ಮಾಡುತ್ತಿದ್ದ ನಾಗ್ಯನ ಕಂಡ ನಾಗ್ಯಾ ನಾಗ್ಯಾ ಕುಗಿದ ಆದರ ಎಚ್ಚರ ಆಗಲಿಲ್ಲ ಪ್ರತಿದಿವಸ ಗುಡಿ ಮುಂದ ಕಸ ಗುಡಿಸಿ ನೀರು ಹೊಡಿದ ಮಾಲ್ಯ ಪೂಜೆಗೆ ದಾರಿ ಕಾಯುತ್ತ ನಿಂದವ್ರ ನಾಗ್ಯಾ ಇನ್ನೂ ಎದ್ದಿಲ್ಲ.
ಮುಂದೆ ಹೋಗಿ ನೋಡಿದ ನಾಗ್ಯಾ ಹಣೆ ಮ್ಯಾಲ ಗಾಯವಾಗಿ ರಕ್ತ ಬರುತ್ತಿತ್ತು ನಾಗ್ಯಾದ ರಕ್ತ ನೋಡಿ ಕಾಳಾಚಾರಿ ಗಾಬರಿಯಾದ ಒಂದು ದೀಡ ವರುಷದಿಂದ ಆ ಊರಯ್ಯಾಗ ಜನ ಹೇಳಿದ ಕೆಲಸ ಮಾಡಿ ಅವರ ಕೊಟ್ಟ ತ Oಗಳ ಅನ್ನ ತಿಂದ ದೇವಿ ಗುಡಿಯ್ಯಾಗ ನಿದ್ದಿ ಮಾಡತ್ತಿದ್ದ ನಾಗನ ಸಮೀಪಕ್ಕ ಹೋಗಿ ನಾಗನ ಎಬ್ಬಿಸಿದ ನಾಗ್ಯಾ ಏಳ ಮಗನಾ ತನ್ನನ್ನು ನಾಗ್ಯಾ ನಾಗ್ಯಾ ಏನು? ಅರಿಯದ ಹುಚ್ಚನಾದ ನಿನಗ ಎಷ್ಟ ಸಲ ಹೇಳುವುದು ಕಟ್ಟೆ ಮ್ಯಾಲ ಮಲಕ್ಕೂದು ಬೇಡ ಅವಸರದಲ್ಲಿ ಪೂಜೆ ಮಾಡಿ ನಡಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಡಾಕ್ಟರ ಕಡೆ ತೊರಿಸಿಕೊಂಡು ತಲೆಗೆ ಪಟ್ಟಿ ಕಟ್ಟಿಕೊಂಡು ಬರೋಣ.ಕಾಳ ಚಾರಿ ಏನು? ಅರಿಯದ ರಾಗಣ್ಣ ಹಿಂದಿನಿಂದ ನಾಗ್ಯಾ ಯಾಗಿ ಬೆನ್ನ ಹತ್ತಿದ ಆಸ್ಪತ್ರೆ ಒಳಗ ಹೋದ ಅಲ್ಲಿ ಮೇಜಿನ ಮ್ಯಾಲ ವರ್ತಮಾನ ಪತ್ರಿಕೆ ಮ್ಯಾಲ ರಾಗಣ್ಣ ಕಣ್ಣು ಬಿತ್ತು.ಪತ್ರಿಕೆ ನೋಡಿದ ತನ್ನ ಭಾವ ಚಿತ್ರ ನೋಡಿದಂಗಾದ ಮೂರನೇ ಪುಣ್ಯ ಸ್ಮರಣೆದೇವರು ಪುಣ್ಮಾತ್ಮಕ್ಕೆ ಚಿರಶಾಂತಿ ಕೊಡಲೆಂದು ಹಾರೈಕೆ ನೋಡಿ ರಾಗಣ್ಣ ಗಾಬರಿಯಾಗಿ ಓಡುತ್ತಿದ್ದ ನೋಡಿ ಚಿಕ್ಕ ಮಕ್ಕಳ ನಾಗ್ಯ ಬಂದ ಓಡಿ ಹೋದವು ಹೇಗೆ ದಿನಗಳು ಕಳೆದವು ಮುಂದೆ ಪಟ್ಟಣಕ್ಕೆ ನೌಕರಿಗೆ ತಿರುಗಾಡಿದ ಒಬ್ಬ ಗೌಂಡಿ ಹತ್ತಿರ ಮೂರು ತಿಂಗಳ ಕೆಲಸ ಮಾಡಿದ ಕೆಲಸ ಬೇಗನೆ ಕಲಿತುಕೊಂಡ ರಾಗಣ್ಣ ಬಹಳ ಬೇಗ ಮಾಲೀಕ ಪ್ರಜಾಪತಿಯ ಕಂಪನಿಯ್ಯಾಗ ಸಹಾಯಕನಾಗಿ ಸ್ಥಾನ ಪಡೆದ ಒಳ್ಳೆಯ ಕೆಲಸ ಮಾಡ ಹತ್ತಿದ ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಕಾದಂಬರಿ ರೂಪದಲ್ಲಿ ಬರೆದ. ರಾಗಣ್ಣಗ ಆರಾಮ ಇರಲಿಲ್ಲ ಮಾಲೀಕ ಪ್ರಜಾಪತಿ ನೋಡಲಿಕ್ಕೆ ಹೋಗಿದ್ದ ಬರೆದಿಟ್ಟ ನೋಟ ಬುಕ್ಕ ಕಡೆ ಗಮನ ಹರಿಯಿತು ಬರೆದ ಕಥೆ ಬಹಳ ಹಿಡಿಸಿತ್ತು ಗೆಳೆಯ ವಿಠಲರಾವರಿಗೆ ಕೊಟ್ಟ ಅವರಿಗೆ ಸಹ ಹಿಡಿಸಿತ್ತು ಒಪ್ಪಿಗೆ ಪಡೆದುಕೊಂಡು ಚಂದ್ರಭಾಗಾ ಮಾಸ ಪತ್ರಿಕೆಯಲ್ಲಿ ಪ್ರಕಟವಾಯಿತು.
ಅಣ್ಣ ವೀರಣ್ಣನಿಗೆ ಕನ್ಯಾ ನೋಡಲಾಕ ಹೊರಟಿದ್ದಳು ಪ್ರೇಮಾ ಬಸ್ ಸ್ಟಾಂಡ್ ದಲ್ಲಿ ಚಂದ್ರಭಾಗಾ ಪತ್ರಿಕೆ ತೆಗೆದುಕೊಂಡಳು ಆದರಬಸನ್ಯಾಗ ಬಹಳ ದಟ್ಟನೆ ಇತ್ತು ಓದುದು ಆಗಲಿಲ್ಲ ಇಳಿದ ಮೇಲೆ ನಡೆದುಕೊಂಡು ಹೋಗುವಾಗ ಪತ್ರಿಕೆಯಲ್ಲಿ ತಿರುಕನಾಗ ಕಾದಂಬರಿ ಬಂದಿತ್ತು ಪ್ರೇಮಾ ತನ್ನ ಮದುವೆ ಯ್ಯಾಗ ನಾಗನ ನೆನಪ ಆತು ಹೇಗೆ ನೂರಾರು ಪ್ರಶ್ನೆಗಳ ಕಾಡಕ ಹತ್ತಿದವು ಆ ವೇಳೆಯಲ್ಲಿ ಮದುವೆ ವಿಡಿಯೋ ಕ್ಯಾಸೆಟ್ ಹಾಕಿದರು ರಾಗಣ್ಣ ಚಿತ್ರ ನೋಡಿ ರಾಗಣ್ಣ ಎಂದು ಜೋರಾಗಿ ಚೀರಿದಳು 12-51985ರಂದು ಮದುವೆ ನಡೆಯಿತ್ತು ಬೀಗರು ಹೇಳಿದರು ಹಾಗಾದರೆ ಅಣ್ಣ ಅಪಘಾತವಾಗಿದ್ದು 9-5-1985 ರಂದು ಅಣ್ಣ ಸತ್ತಿಲ್ಲ ನೋಡುತ್ತಿರುವಾಗ ಕೆ. ಲಕ್ಷ್ಮಣರಾವ್ ವ್ಯಕ್ತಿ ಇದ್ದರು ಅವರು ಬಿ.ಕೆ.ಕಂಪನಿ ಮಾಲೀಕರು ವಿಡಿಯೋದಲ್ಲಿ ರಾಗಣ್ಣನಚಿತ್ರ ನೋಡಿ ಎಲ್ಲಿಯೋ ನೋಡಿದ ಹಾಗಿದೆ ಹೇಳಿದರು ಎಲ್ಲಿ ನೋಡಿದ್ದಿರಿ ವೀರಣ್ಣ ಕೇಳಿದ ಲಕ್ಷ್ಮಣರಾವ್ ಒಂದು ದಿವಸ ಕಂಪನಿಯಿಂದ ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಲಾರಿಯೊಂದರ ಅಪಘಾತವಾಗಿತ್ತು ಎಲ್ಲಾ ಜನರಿಗೆ ಮುಖ ಮೈಯಲ್ಲಾ ಗಾಯಗಳಾಗಿದ್ದವು ಈತನೊಬ್ಬ ಲಾರಿಯಿಂದ ಹೊರಗೆ ಬಿದ್ದು ನರಳುತ್ತಿದ್ದ ಆಸ್ಪತ್ರೆಗೆ ಒಯ್ದು ಹಾಕಿದೆ ಆದರೆ ಅವನ ತರ್ಕಕಳೆದುಕೊಂಡಿದ್ದಾನೆ ಎಂದು ವೈದ್ಯರು ಹೇಳಿದರು ಇಷ್ಟೇ ಗೊತ್ತಿದ್ದು ಹೇಳಿದರು
ರಾಗಣ್ಣ ತಂದೆ ತಾಯಿ ಮಗ ಬದುಕಿದ್ದಾನೆ ತಿಳಿದರು ಪ್ರೇಮಾ ಚಂದ್ರಭಾಗಾ ಮಾಸ ಪತ್ರಿಕೆಯಲ್ಲಿ ಬಂದ ತಿರುಕನಾಗ ಬಗ್ಗೆ ಹೇಳಿದಳು ಆಕಥೆಯ ಲೇಖಕ ತಮ್ಮ ಮಗ ಇರುಬಹುದು ಬೆಂಗಳೂರಿಗೆ ಬಂದರು ಚಂದ್ರ ಭಾಗಾ ಪತ್ರಿಕೆಯ ಸಂಪಾದಕರಾದ ವಿಠಲರಾವ್ ಗೆ ಭೆಟ್ಟಿಯಾಗಿ ರಾಘವೇಂದ್ರರ ವಿಳಾಸ ತೆಗೆದುಕೊಂಡರು ಅವರ ಕೊಟ್ಟ ವಿಳಾಸಕ್ಕೆ ಬಂದು ಬಾಗಿಲು ತಟ್ಟಿದರು ಎಲ್ಲರನ್ನು ನೋಡಿ ರಾಗಣ್ಣನಿಗೆ ಬಹಳ ಸಂತೋಷವಾಯಿತು ಗೂಡು ಬಿಟ್ಟು ದೂರಾದ ರಾಗಣ್ಣ ಮತ್ತೆ ಗೂಡು ಸೇರಿದ.
ಲೇಖಕ ಶ್ರೀ ಚನ್ನಪ್ಪ ಸುತಾರ ಯವರು ಕಥೆಯಲ್ಲಿ ಜೀವ ಇದೆ ಹಳ್ಳಿಯ ಸೊಗಡು ಇದೆ ಮಾನವೀಯ ಮೌಲ್ಯಗಳು ಕಥೆಯಲ್ಲಿ ಅಡಕವಾಗಿದೆ ಉತ್ತರ ಕರ್ನಾಟಕದ ಜವಾರಿ ಕನ್ನಡದಲ್ಲಿ ಬರೆದಿದ್ದಾರೆ ಇನ್ನೂ ಹೆಚ್ಚಿನ ಕೃತಿಗಳು ಮೂಡಿಬರಲಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನಿರಂತರವಾಗಿಲಿ ಅಭಿನಂದನೆಗಳೊಂದಿಗೆ…

ಲೇಖಕರು-ದಯಾನಂದ ಪಾಟೀಲ ,ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ,ಮಹಾರಾಷ್ಟ್ರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ