ಕಲಬುರಗಿ:ಪೊಲೀಸ್ ಕಾನ್ಸ್ಟೆಬಲ್ ಓರ್ವರು ಜಮೀನಿನಲ್ಲಿ ನೇಣಿಗೆ ಶರಣಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಉದನೂರು ರಸ್ತೆ ಬಳಿ ನಡೆದಿದೆ.
ದೊಡ್ಡಶ್ ಕೊಂಬಿನ (40) ಆತ್ಮಹತ್ಯೆಗೆ ಶರಣಾದ ಕಾನ್ಸ್ಟೇಬಲ್. ಮಾಡಬೂಳ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಲಬುರ್ಗಿಯ ಹೈಕೋರ್ಟ್ ಬಳಿ
ದೊಡ್ಡಶ್ ವಾಸವಾಗಿದ್ದರು. ಏಕಾಏಕಿ ಕಲಬುರ್ಗಿ ನಗರದ ಉದನೂರು ರಸ್ತೆ ಬಳಿಯ ಜಮೀನಿನಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಕಾನ್ಸ್ಟೇ ಬಲ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಗುಲಬುರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್