ಜೇವರ್ಗಿ: ತಾಲ್ಲೂಕಿನಲ್ಲಿ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ ೦೩-೧೨-೨೦೨೨ ರಂದು ಮಿನಿ ವಿಧಾನಸೌದದಿಂದ ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ತಲುಪಿ ವಿವಿಧ ರೀತಿಯ ಅಕ್ಷರ ಜಾತ್ರೆಯ ಕಾರ್ಯಕ್ರಮ ಮೂಡಿಬರಲಿವೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್ ಕೆ ಬಿರೆದಾರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಕಾರ್ಯಕ್ರಮದ ರೂಪರೇಷನ್ಗಳು,ಕವಿ ಗೋಷ್ಠಿ, ಕನ್ನಡ ಸಾಹಿತ್ಯದ ಕುರಿತು ವಿವಿಧ ಸಾಹಿತಿಗಾರರಿಂದ ಚಿಂತನೆ ಹಾಗೂ ವಿಚಾರ ಸಂಕೀರ್ಣ ನಡೆಯಲಿದೆ ಎಂದು ಹೇಳುವುದರ ಮೂಲಕ ಎಲ್ಲಾ ಕನ್ನಡಾಭಿಮಾನಿಗಳಿಗೆ ಆಮಂತ್ರಣವನ್ನು ನೀಡಿದರು.
ವರದಿ: ಚಂದ್ರಶೇಖರ ಎಸ್ ಪಾಟೀಲ್.