ಹುಬ್ಬಳ್ಳಿ: “ಹೂಬಳ್ಳಿ ಲೇಖಕಿಯರ ಬಳಗವು” ತನ್ನ ವಾರ್ಷಿಕೋತ್ಸವವನ್ನು ರಾಜೀವ ನಗರದ ಉದ್ಯಾನವನದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿತು. ಇದರ ನಿಮಿತ್ತ ಕನ್ನಡದ ಹಿರಿಯ ಲೇಖಕಿಯರಾದ ವೈದೇಹಿ ಹಾಗೂ ತ್ರಿವೇಣಿಯವರ ಬರವಣಿಗೆಯ ಕುರಿತು ಓದು ಮತ್ತು ವಿಶ್ಲೇಷಣೆಯ ಕಾರ್ಯ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಲೇಖಕಿಯರಾದ ಪದ್ಮಜಾ ಉಮರ್ಜಿ,ಗಾಯತ್ರಿ ರವಿ, ಅನ್ನಪೂರ್ಣಾ ಅಗಡಿ,ಸುನಂದಾ ಶ್ಯಾಗೋಟಿ, ಸುನಿತಾ ಹುಬ್ಳೀಕರ್ ಇವರು ತ್ರಿವೇಣಿಯವರ ಕಾದಂಬರಿಗಳ ಕುರಿತು ವಿಶ್ಲೇಷಿಸಿದರೆ, ವೇದೇಹಿಯವರ ಬರವಣಿಗೆಯ ವಿಶ್ಲೇಷಣೆಯಲ್ಲಿ ಸಂಧ್ಯಾ ದೀಕ್ಷಿತ್, ರೂಪಾ ಜೋಶಿ, ಮಹದೇವಿ ಮುಡಕೆ, ಕವಿತಾ ಪೂರ್ಣಾನಂದ, ಸುಜಾತಾ ಹೆಬ್ಬಾಳದ ಮುಂತಾದವರು ಭಾಗವಹಿಸಿದ್ದರು. ಬಳಗದ ಅಧ್ಯಕ್ಷರಾದ ಡಾ ಸರೋಜಾ ಮೇಟಿ ಲೊಡಾಯ, ನೇತ್ರಾ ರುದ್ರಾಪರಮಠ, ನಂದಾ ಕುಲಕರ್ಣಿ,ಶ್ರೀದೇವಿ ಬಿರಾದಾರ ಮುಂತಾದವರೆಲ್ಲಾ ಭಾಗವಹಿಸಿದ್ದರು ಎಂದು ಪ್ರೀತಮ್ ಫೌಂಡೇಷನ್ ಅಧ್ಯಕ್ಷರಾದ.
ನೇತ್ರಾ ರುದ್ರಾಪೂರಮಠ ಅವರು ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.