ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಕೇಂದ್ರ ಸ್ಥಾನದಲ್ಲಿ ರೈತ ಸಂಘದ ನೂತನ ಅಧ್ಯಕ್ಷ ಮಾದಪ್ಪ ನೇತೃತ್ವದಲ್ಲಿ ಹಸಿರು ಶಾಲು ದೀಕ್ಷೆಯನ್ನು 96,ಮಂದಿ ಮಂದಿ ರೈತರು ಪಡೆದರು.
ಹನೂರು ಪಟ್ಟಣದ ವಿವೇಕಾನಂದ ಶಾಲಾ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಹನೂರು ಘಟಕವನ್ನು ರೈತ ಸಂಘದ ಜಿಲ್ಲಾದ್ಯಕ್ಷ ಹೊನ್ನೂರ್ ಪ್ರಕಾಶ್ ರವರು ಉದ್ಘಾಟಿಸಿದರು
ನೂತನ ಹನೂರು ಘಟಕದ
ನೂತನ ಅದ್ಯಕ್ಷರಾಗಿ ಎಸ್ ಮಾದಪ್ಪ,ಉಪಾದ್ಯಕ್ಷ ಮಹದೇವಶೆಟ್ಟಿಬೆಳ್ಳತ್ತೂರು,
ಕಾರ್ಯದರ್ಶಿ ಎಮ್ ಮಾದಪ್ಪನ್ (ಬೆಳ್ಳತ್ತೂರು) ಖಜಾಂಚಿ ನಟರಾಜು,ಸೇರಿದಂತೆ 96ಮಂದಿ ಹಸಿರು ಶಾಲು ದೀಕ್ಷೆ ಪಡೆಯುವ ಮುಖಾಂತರ ಸದಸ್ಯತ್ವ ಪಡೆದಿದ್ದಾರೆ,
ಬಳಿಕ ರೈತ ಸಂಘದ ಜಿಲ್ಲಾಧ್ಯಕ್ಷವನ್ನು ಹೊನ್ನೂರು ಪ್ರಕಾಶ್ ಮಾತನಾಡಿ ಹನೂರು ಸುತ್ತಮುತ್ತಲಿನ ಗ್ರಾಮಗಳಾದ ವೈಶಂಪಾಳ್ಯ,ಬೆಳ್ತೂರು,ಉದ್ದನೂರು ಮಹಾಲಿಂಗನಕಟ್ಟೆ ಸೇರಿ ನಾನಾ ಗ್ರಾಮಗಳ ರೈತರು ಒಗ್ಗೂಡಿ ರೈತ ಸಂಘವನ್ನು ಹನೂರು ಕೇಂದ್ರ ಸ್ಥಾನದಲ್ಲಿ ರಚನೆ ಮಾಡಿರುವುದು ಒಂದು ಉತ್ತಮ ಬೆಳವಣಿಗೆ ಗ್ರಾಮದಲ್ಲಿನ ಮೂಲಭೂತ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳನ್ನು ಪಡೆಯಲು ಸಂಘಟನೆಯಿಂದ ಹೆಚ್ಚು ಬಲ ಬಂದಂತೆ ಆಗುತ್ತದೆ ಎಂದರು.
ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಗಡಿ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಹಾಗೂ ಗ್ರಾಮಸ್ಥರು ದಿನ ನಿತ್ಯ ಒಂದಲ್ಲ ಒಂದು ಸಮಸ್ಯೆಯಿಂದ ಪರಿತಪಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆಗೊಳಿಸುವ ಮೂಲಕ ಮಳೆ ಇಲ್ಲದೆ ಕಾಡು ಪ್ರಾಣಿಗಳು ಅರಣ್ಯ ಬಿಟ್ಟು ನಾಡಿನತ್ತ ನೀರು ಆಹಾರ ಅರಸಿ ಬರುತ್ತಿದೆ ಹೀಗಾಗಿ ಕ್ರೂರ ಪ್ರಾಣಿಗಳು ಮತ್ತು ಆನೆ, ಹಂದಿ ಹಾಗೂ ಇತರೆ ಪ್ರಾಣಿಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದಂತಹ ಅಂಬ್ಲೇ ಶಿವುಕುಮಾರ್
ಗುಳ್ಯ ರಾಜು
ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್