ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರವರ ಕಾರ್ಯಾಲಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಉಪ ವಿಭಾಗ ಇಂಡಿ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಾರ್ಯಾಲಯಕ್ಕೆ ಬರುತ್ತಿಲ್ಲ ಎಂದು ತಾಲೂಕಿನ ರೈತ ಮತ್ತು ಸಾರ್ವಜನಿಕರ ಆರೋಪವಾಗಿದೆ.
ತಾಲೂಕಿನ ರೈತರು ಸಣ್ಣ ನೀರಾವರಿ ಇಲಾಖೆಗೆ ದಿನನಿತ್ಯ ಬಂದು ಅಧಿಕಾರಿಗಳು ಸಿಗದೇ ಕಂಗಾಲ್ ಆಗಿದ್ದಾರೆ ರೈತರು ಕರೆ ಮಾಡಿ ಕೇಳಿದರೆ ನಾನು ಅಲ್ಲಿ ಇದ್ದೇನೆ ಇಲ್ಲಿ ಇದ್ದೇನೆ ಎಂದು ಸುಳ್ಳು ಹೇಳುವ ಎಇಇ ಸಿ ಎಸ್ ಕರೂರ.
ರೈತರ ಒತ್ತಾಯದ ಮೇರೆಗೆ ಸಂಘಟನಾಕಾರರು ಹೋಗಿ ವಿಚಾರಿಸಿದಾಗ ತಮ್ಮ ಚಲನ ವಲನ ಪುಸ್ತಕ ಕೇಳಿದಾಗ ನಮಗೆ ಯಾವುದೇ ಸರ್ಕಾರಿ ಸುತ್ತೋಲೆಗಳು ಅನ್ವಯಿಸಲ್ಲ ನನಗೆ ಏನೂ ಕೇಳಬೇಡಿ ಏನೇ ಇದ್ದರೂ ಮೇಲಾಧಿಕಾರಿಗೆ ಕೇಳಿ ಅಂತ ಹಾರಿಕೆಯ ಉತ್ತರ ಕೊಡುವ ಎಇಇ ಎಸ್ ಸಿ ಕೇರೂರ
ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದೆ ಹಾಗಾಗಿ ನಾವು ಚಲನ ವಲನ ಪುಸ್ತಕ ಇಟ್ಟಿಲ್ಲ ಸರ್ಕಾರದವರು ನಮಗೆ ಐಡಿ ಕಾರ್ಡ್ ಕೊಟ್ಟಿಲ್ಲ ಅವರು ಕಡ್ಡಾಯವಾಗಿ ಹಾಕ್ಬೇಕು ಅಂತಾ ನಮಗೆ ಹೇಳಿಲ್ಲ ಅದನ ಕೇಳೋದಕ್ಕೆ ನೀವು ಯಾರು ನೀವು ಏನೇ ಮಾಡಿದ್ರೂ ಏನೂ ಮಾಡ್ಕೊಳೋಕೆ ಆಗಲ್ಲ ಎ ಇ ಇ .ಸಿ ಎಸ್ ಕರೂರ ಪ್ರತಿಕ್ರಿಯೆ ನೀಡುತ್ತಾರೆ.
ಇವರಿಗೆ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಅಡ್ಡಿ ಬಗ್ಗೆ ಮಾಹಿತಿ ನೀಡೋದಕ್ಕೆ ಮಾಹಿತಿ ಹಕ್ಕುದಾರರು ಮಾಹಿತಿ ಕೇಳಿದರೆ ದಿಕ್ಕು ತಪ್ಪಿಸುವ ಸಲುವಾಗಿ ತಪ್ಪು ಮಾಹಿತಿ ನೀಡುವ ರೂಢಿ ಇದೆ ಇವರಿಗೆ ಹೀಗೇಕೆ ಮಾಡುತ್ತೀರಿ ಅಂತ ಮೇಲಾಧಿಕಾರಿ ಎ ಇ ಇ ಗೆ ಕೇಳಿದ್ರೆ ನಮ್ಮ ಹತ್ರಾ ಹೀಗೆ ಕೊಡ್ತೀವಿ ನಿಮಗೇ ಬೇಕಾದ್ರೆ ಮೇಲೆ ಹೋಗಿ ಅಂತಾ ಹೇಳ್ತಾರೆ.
ಇವರಿಗೆ ಯಾವುದೇ ಮೇಲಾಧಿಕಾರಿಗಳು ಏನೂ ಮಾಡಿಕೊಳೋದಕ್ಕೆ ಆಗೋದಿಲ್ವಂತೆ ಏಕೆಂದರೆ ಇಲ್ಲಿನ ಶಾಸಕ ನಮ್ಮ ಪರ ಇದಾರೆ ಅಂತ ರಾಜಾರೋಷವಾಗಿ ಹೇಳುವ ಇಂತಹ ನಾಲಾಯಕ್ ಅಧಿಕಾರಿಯ ಮೇಲೆ ಕ್ರಮ ಯಾವಾಗ ಅಂತಾ ಸಾರ್ವಜನಿಕರ ಹಾಗೂ ರೈತರ ಪ್ರಶ್ನೆಯಾಗಿದೆ.
ಲೋಕಾಯುಕ್ತರ ಬೋರ್ಡ್ ಅಂತೂ ಕಛೇರಿಯೊಳಗೆ ಇಲ್ಲವೇ ಇಲ್ಲ ಲೋಕಾಯುಕ್ತರ ಬೋರ್ಡ್ ಅನ್ನು ತೆಗೆದು ಯಾವುದೊ ಒಂದು ಮೂಲೆಯಲ್ಲಿ ಹಾಕಿದ್ದಾರೆ ಇವರಿಗೆ ಯಾವುದರ ಬಿಸಿಯು ಇಲ್ಲ ಎಂದು ಸಾರ್ವಜನಿಕರ ಮತ್ತು ರೈತರ ಆರೋಪವಾಗಿದೆ.
ರೈತರ ಪ್ರತಿಯೊಂದು ಕೆಲಸಕ್ಕೂ ಬೇರೆ ಬೇರೆ ಬೆಲೆಯನ್ನು ನಿಗದಿಪಡಿಸಿ ರೈತರ ರಕ್ತ ಹಿರುತ್ತಿರುವ ತಿಗಣೆಗಳು ಇಲಿಗೆ ಬಂದರೆ ಅಧಿಕಾರಿಗಳೇ ಸಿಗೋದಿಲ್ಲ ಸರ್ಕಾರಿ ಕಛೇರಿ ಮೇಲೆ ಕಛೇರಿಯ ನಾಮಫಲಕ ಇಲ್ಲ ರೈತರಿಗೆ ಕಛೇರಿ ಹುಡುಕಲು ಗಂಟೆಗಳೇ ಕಳೆಯುತ್ತವೆ ನಾಮಫಲಕವನ್ನು ಯಾವುದೊ ಒಂದು ಮೂಲೆಯಲ್ಲಿ ಹಾಕಿಸಿದ್ದಾರೆ ಪ್ರಗತಿ ಪರ ರೈತ ಪರಶುರಾಮ ಉಕ್ಕಲಿ.