ಸಿಂಧನೂರು:ನೀಡ್ ಬೇಸ್ ಇಂಡಿಯಾ ವತಿಯಿಂದ ತಾಲೂಕಿನ ಕಲಮಂಗಿ ಗ್ರಾಮದ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.ಮಕ್ಕಳ ಆರೈಕೆ, ಹಕ್ಕುಗಳ ರಕ್ಷಣೆ, ಶಿಕ್ಷಣ, ಸಬಲೀಕರಣ, ಅವಶ್ಯಕತೆಗಳಿಗೆ ಮೀಸಲಾಗಿರುವ ಬೆಂಗಳೂರು ಮೂಲದ ನೀಡ್ ಬೇಸ್ ಇಂಡಿಯಾ ಸಂಸ್ಥೆಯು ಪ್ರತಿ ವರ್ಷ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಸಾಲಿನಲ್ಲಿ 8, 9 ಮತ್ತು 10ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಲ್ಲಾ 92 ವಿದ್ಯಾರ್ಥಿಗಳಿಗೆ ತಲಾ 5 ನೋಟ್ ಪುಸ್ತಕಗಳನ್ನು ಸಂಸ್ಥೆಯ ವತಿಯಿಂದ ನೀಡಿದ್ದು, ಈ ಕಾರ್ಯಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಪ್ಪ ಬಾದರ್ಲಿ ಸಂಸ್ಥೆಯನ್ನು ಅಭಿನಂದಿಸಿ, ಕೊಟ್ಟಿರುವ ಪುಸ್ತಕಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಅಭ್ಯಾಸ ಮಾಡಬೇಕು ಎಂದರು.ಇಂಗ್ಲಿಷ್ ಭಾಷಾ ಶಿಕ್ಷಕ ವೀರೇಶ ಗೋನವಾರ ಮಾತನಾಡಿ, ಕಳೆದ ಮೇ ತಿಂಗಳಿನಲ್ಲಿ ವೆಬ್ ಲಿಂಕ್ ಮೂಲಕ ಮಾಹಿತಿಯನ್ನು ಕೇಳಿದ್ದರು, ಮಾಹಿತಿಯನ್ನು ಭರ್ತಿ ಮಾಡಿದ ಹಿನ್ನಲೆಯಲ್ಲಿ, ಶಾಲೆಯೊಂದಿಗೆ ಸಂಪರ್ಕವನ್ನು ಸಾಧಿಸಿ ಶಾಲೆಗೆ ಬೇಕಾಗಿರುವ ಉಚಿತ ನೋಟ್ ಪುಸ್ತಕಗಳನ್ನು ನೀಡಿರುವುದು ತುಂಬಾ ಶ್ಲಾಘನೀಯ. ಇಂತಹ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಮುದಾಯ, ಸಂಘ-ಸಂಸ್ಥೆಗಳು, ಉದ್ಯಮಿಗಳಿಂದ ನಡೆದರೆ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಸುಭಾಷ ಪತ್ತಾರ, ಎಂ.ಮಾರುತಿ, ರೂಪಾ, ಬಸವರಾಜ ಮತ್ತು ಸಿಬ್ಬಂದಿಗಳಾದ ರೂಪಾ ಕರ್ಣೆ, ಮುಂಜುನಾಥ ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.