ಚಾಮರಾಜನಗರ/ಹನೂರು:ಜನ ಸಂಪರ್ಕ ಸಭೆಯಲ್ಲಿ 16 ದೂರುಗಳು ಬಂದಿದ್ದು ಶೀಘ್ರದಲ್ಲೇ ಸಮಸ್ಯೆ ಗಳನ್ನು ಬಗೆಹರಿಸಲಾಗುವುದು ಎಂದು ಕಾರ್ಯ ಪಾಲಕ ಇಂಜಿನಿಯರ್ ತಬಸ್ಸುಂ ಅಫ್ಸಾ ಬಾನು ತಿಳಿಸಿದರು.
ಹನೂರು ಪಟ್ಟಣದ ಚೆಸ್ಕಾಂ ಕಚೇರಿಯ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ವಿದ್ಯುತ್ ಇಲಾಖೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಆದ್ದರಿಂದ ರೈತರು ಹಾಗೂ ಸಾರ್ವಜನಿಕರು ಸಮಸ್ಯೆ ಗಳಿದ್ದರೆ ಬಗೆಹರಿಸಿಕೊಳ್ಳಬೇಕು ಎಂದರು.
ಕಳೆದ ಜನ ಸಂಪರ್ಕ ಸಭೆಯಲ್ಲಿ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ 17 ದೂರು ಬಂದಿದ್ದು,ನಮ್ಮ ಇಲಾಖೆಯ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ್ದಾರೆ.
ಜನ ಸಂಪರ್ಕ ಸಭೆಯಲ್ಲಿ ಸುಮಾರು 16 ದೂರು ಬಂದಿದ್ದು,ವಿದ್ಯತ್ ತಂತಿಗಳು ಜೋತು ಬಿದ್ದಿರುವುದನ್ನು ಸರಿ ಪಡಿಸಿ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿ ಎಂದರು ವಿದ್ಯುತ್ ಸಂಬಂಧ ಪಟ್ಟ ಇನ್ನಿತರ ದೂರುಗಳು ಬಂದಿದೆ.
ರಾತ್ರಿ ವೇಳೆ 3 ಗಂಟೆ ವಿದ್ಯುತ್ ತೆಗೆದು ಹಾಕುತ್ತೀರಾ ಎಂದು ದೂರಿದರು.
ರಾತ್ರಿ ವೇಳೆ ವಿದ್ಯತ್ ಇಲ್ಲದೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು,ಆದ ಕಾರಣ ರಾತ್ರಿ ವೇಳೆ ವಿದ್ಯುತ್ ನೀಡಬೇಕು.
ಕಣ್ಣೂರು ಗ್ರಾಮದಲ್ಲಿ 2 ವರ್ಷ ದಿಂದ ಟಿ ಸಿ ಕೆಟ್ಟು ಹೋಗಿ ಕುಡಿಯುವ ನೀರಿಗೆ ತೊಂದರೆಯಾಗಿದೆ, ಎಂದು ಮನವಿ ಮಾಡಿದರು.
ವಡಕೆ ಹಳ್ಳ ಗ್ರಾಮದ ಓಂ ಶಕ್ತಿ ಕಾಲೋನಿಯ ಪರಿಶಿಷ್ಟ ಜಾತಿಯ ಜನರ ಕಾಲೋನಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ ಎಂದು ಸಭೆಯಲ್ಲಿ ಮನವಿ ಮಾಡಿದರು.
ಎಂ ಟಿ ದೊಡ್ಡಿ ಗ್ರಾಮಕ್ಕೆ ಅಕ್ರಮ ಸಕ್ರಮದಡಿಯಲ್ಲಿ ಟಿ ಸಿ ಅಳವಡಿಸಿ ಕೊಡಿ ಎಂದು ದೂರಿದರು.
ರಾತ್ರಿ ವೇಳೆಯಲ್ಲಿ ತೋಟಗಳಿಗೆ ಅಕ್ರಮ ಸಕ್ರಮ ದಡಿಯಲ್ಲಿ ನಿರಂತರ ಜ್ಯೋತಿ ಕಲ್ಪಿಸಿಕೊಡಿ ಎಂದು ರೈತರು ಅಧಿಕಾರಿಗಳ ಬಳಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಇ ಇ ತಬಸುಮಾ ಅಪ್ಸ ಬಾನು, ಎ ಇ ಇ ಶಂಕರ್, ಎ ಇ ರಂಗಸ್ವಾಮಿ, ಆನಂದ್,ಲೆಕ್ಕಧಿಕಾರಿ ವಿನೋದ್ ಕುಮಾರ್,ರೈತ ಮುಖಂಡರು, ಸಾರ್ವಜನಿಕರು ಇದ್ದರು.
ವರದಿ ಉಸ್ಮಾನ್ ಖಾನ್