ಶಿರಸಿ:ಶ್ರೀಮಜ್ಗಗದ್ಗರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 34ನೇ ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪ್ರಥಮ ಚಾತುರ್ಮಾಸ್ಯ ವ್ರತ ಸಂಕಲ್ಪವು ದಿನಾಂಕ 21.07.2024ರಿಂದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.
ಅದೇ ದಿನ ಮಧ್ಯಾಹ್ನ 4 ಗಂಟೆಯಿಂದ ಸಭಾ ಕಾರ್ಯಕ್ರಮಗಳು ಸುಧರ್ಮಾ ಸಭಾಭವನದಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಪರಮಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಹಾಗೂ ಪರಮಪೂಜ್ಯ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಇವರುಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಮಾನ್ಯ ನೂತನ ಸಂಸದರು, ಕೆನರಾ ಕ್ಷೇತ್ರ ಇವರು ಉಪಸ್ಥಿತರಿರುವರು.
ಇದೇ ಸಂಧರ್ಬದಲ್ಲಿ ಪಂ.ಗಣಪತಿ ಭಟ್ಟ,ಹಾಸಣಗಿ ತಾನಸೇನ್ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ಹಿಂದೂಸ್ತಾನಿ ಗಾಯಕರು ಹಾಗೂ ಶ್ರೀ ರಾಮಚಂದ್ರ.ಮ.ಹೆಗಡೆ, ಕೆಶಿನಮನೆ ಖ್ಯಾತ ಶಿಕ್ಷೆಗಳು ಹಾಗೂ ಉತ್ತಮ ಕೃಷಿಕರು,ಕುಮಾರ ಸುಘೋಷ ಜೋಶಿ, ಸಿಬಿಎಸ್‌ಇಯಲ್ಲಿ 99.4% ರಷ್ಟು ಅತ್ಯುಚ್ಚ ಅಂಕ ಸಾಧನೆ ಇವುಗಳನ್ನು ಸನ್ಮಾನಿಸಲಾಗುವುದು.
ಶ್ರೀ ವೇದವ್ಯಾಸವಂದನಾ ಕಾರ್ಯಕ್ರಮಗಳು
ಆಷಾಢ ಶುದ್ಧ ದಶಮಿಯು ಕುಜವಾರ,ದಿನಾಂಕ : 16-07-2024 ರಿಂದ ಆಷಾಢ ಪೂರ್ಣಿಮೆ ರವಿವಾರ, ದಿನಾಂಕ:21-07-2024ರವರೆಗೆ ಪ್ರತಿದಿನ ಋಗ್ವೇದ, ಯಜುರ್ವೇದ,18 ಪುರಾಣಗಳು ಮತ್ತು ಮಹಾಭಾರತ ಪಾರಾಯಣಗಳು ನಡೆಯಲಿವೆ.
ಚಾತುರ್ಮಾಸ್ಯದ ಪ್ರಯುಕ್ತ ದಿನಾಂಕ : 21-07-2024, ರವಿವಾರದಿಂದ ದಿನಾಂಕ : 18-09-2024, ಬುಧವಾರದವರೆಗೆ (ದಿನಾಂಕ : 28-07-2024, ರವಿವಾರದಿಂದ ದಿನಾಂಕ : 04-08-2024, ರವಿವಾರಗಳನ್ನು ಹೊರತುಪಡಿಸಿ) ಪ್ರತಿದಿನ ಸಂಜೆ 5.00 ಘಂಟೆಯಿಂದ ಮಹಾಭಾರತ ಪ್ರವಚನ ನಡೆಯಲಿದೆ.
ಶ್ರೀಮಠದ ಸಕಲ ಶಿಷ್ಯರು ಹಾಗೂ ಭಕ್ತಾದಿಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವ್ಯಾಸಪೂಜಾ ಪ್ರಸಾದ, ಫಲ-ಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಕೃತಾರ್ಥರಾಗಲು ಶ್ರೀ ವಿಶ್ವೇಶ್ವರ ನರಸಿಂಹ ಹೆಗಡೆ, ಬೊಮ್ಮಳ್ಳಿ, ಅಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಮ್ ಇವರು ವಿನಂತಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ