ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಹಡಪದ ಸಮಾಜದ ನಿಸ್ವಾರ್ಥ ಸೇವಕ ಡಾ.ಎಂ ಬಿ ಹಡಪದ ಇವರ ಸೇವೆ ಗುರುತಿಸಿ ಸುಗೂರ ಎನ್ ಗೆ ಇದೇ 2024 ನೇ ಸಾಲಿನ ಯು ಪಿ ರಾಜ್ಯದ ದಿ ಫೇರ್ ವಿಷನ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಭಾರತೀಯ ಹಿಂದೂ ರತ್ನ ಪುರಸ್ಕಾರ ಪ್ರಶಸ್ತಿ, ಪ್ರಶಸ್ತಿಯ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.ಸಾಮಾಜಿಕ ಸೇವೆ ಬದುಕನ್ನು ಸಾರ್ಥಕಗೊಳಿಸುತ್ತದೆ ಎಂದು ಹಡಪದ ಅಪ್ಪಣ್ಣ ಸಮಾಜದ ನಿಸ್ವಾರ್ಥಿಯ ಸಮಾಜದ ಸೇವಕ-ಡಾ ಎಂ ಬಿ ಹಡಪದ ಸುಗೂರ ಎನ್ ಹೇಳಿ ಮಾತನಾಡಿದ ಅವರು
ಮನುಷ್ಯನ ಹುಟ್ಟು ಮತ್ತು ಸಾವು ಸಹಜ ಆದರೆ, ಇವರೆಡರ ಮಧ್ಯೆ ಹೇಗೆ ಬದುಕಬೇಕೆಂಬುದೇ ಜೀವನವಾಗಿದ್ದು,ಸ್ವಾರ್ಥಕ್ಕಾಗಿ ಬದುಕದೇ ಸಮಾಜ ಸೇವೆಗೆ ಮೀಸಲಾಗಿಡಬೇಕು.ಇದರಿಂದ ಬದುಕು ಸಾರ್ಥಕತೆಯ ಜತೆಗೆ ಸಮಾಧಾನವು ಇರುತ್ತದೆ. ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಮತ್ತು ಉಚಿತ ಕ್ಷೌರ ಸೇವೆ,ಉಚಿತ ಉಪಹಾರ ಸೇವೆ,ಮುಂತಾದವು ಉಪಕಾರದ ಕಾರ್ಯಕ್ರಮಗಳಾಗಿವೆ.ಇವು ಚಿಕ್ಕ ಕಾರ್ಯಕ್ರಮ ಎಂದುಕೊಳ್ಳದೇ ನಿರಂತರವಾಗಿ ನಮ್ಮ ಹಡಪದ ಅಪ್ಪಣ್ಣ ಸಮಾಜದ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುತ್ತಾ ಬಂದಿದೆ ಮುಂದೆಯೂ ಸಹ ಅನೇಕ ವಿಭಿನ್ನ ರೀತಿಯ ಕಾರ್ಯಕ್ರಮ ಮಾಡುತ್ತಾ ಬರಬೇಕೆಂದರು.
ಕಷ್ಟಗಳನ್ನು ಮೆಟ್ಟಿ ನಿಂತರೆ ಸಾಧನೆ ಸುಲಭ ಸಾಧ್ಯ,
ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವುದೇ ನಿಜವಾದ ಸೇವೆ
ಎಂದು ಈ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ಬಿ ಹಡಪದ.ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕರು ತಿಳಿಸಿದರು.
ಇವರು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಅನಾಥರಿಗೆ ಮಾಡುತ್ತಿರುವ ಉಚಿತ ಕ್ಷೌರ ಸೇವೆಯನ್ನು ಗುರುತಿಸಿ ಇದೇ 2024 ರಲ್ಲಿ ಇವರ ಸಮಾಜದ ಹಾಗೂ ಈ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಮಾರು 13 ಕಡೆಯಲ್ಲೂ ಸೇರಿದಂತೆ ಒಟ್ಟು 1350 ಕ್ಕೂ ಹೆಚ್ಚು ಅನಾಥ, ನಿರ್ಗತಿಕ ಜನತೆಗೆ (ಉಚಿತವಾಗಿ) ಹೇರ್ ಕಟಿಂಗ್ ಮಾಡುವ ಈ ಹಡಪದ ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ. ಎನ್.ಅವರು ಸಮಾಜದ ಸಂಘಟನೆಯ ಜೊತೆ ಜೊತೆಯಲ್ಲಿ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಿದ್ದಾರೆ.ಅವರ ನಿಸ್ವಾರ್ಥ ಸೇವೆಗೆ ಅನೇಕ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಈ ಪ್ರಶಸ್ತಿಯೂ ಸೇರಿದೆ ನಮ್ಮ ಜೊತೆಯಲ್ಲಿ ನಮ್ಮ ಸಮಾಜದ ಅನೇಕ ಜನತೆಯ ಸಹಕಾರದಿಂದ ಈ ಉಚಿತ ಕ್ಷೌರ ಸೇವೆಯನ್ನು ಸಾಧಿಸಲು ನಮಗೆ ಈ ಕ್ಷೌರಿಕ ವೃತ್ತಿಯಲ್ಲಿಯೇ ಈ ರೀತಿಯ ಸಾಧನೆ ಮಾಡಲು ನಮಗೆ ಅನೇಕರು ಸಹಕರಿಸಿದರು ಸಮಾಜದ ಗುರೂಜೀ ಹಾಗೂ ಇತರೆ ಮಠಾಧೀಶರ ಆಶೀರ್ವಾದ ಮತ್ತು ಸಮಾಜದ ಬಂಧುಗಳ ಸಹಕಾರ,ಈ ಸೇವೆಯಲ್ಲಿ ನಮ್ಮನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇವೆ ಮಾಡಲು ಪ್ರೇರಣೆಯನ್ನು ನೀಡಿದರು ಎಂದು ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.