ದಾವಣಗೆರೆ ಜಿಲ್ಲೆಯ ಹೊನ್ನಾಳಿ-ಶಿವಮೊಗ್ಗ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಬಸ್ ಬೆಳಗಿನ ಜಾವ ಸಮಯದಲ್ಲಿ ಮಂಗಳೂರಿನಿದ ದಾವಣಗೆರೆ ಹೋಗುತ್ತಿದ್ದ ಹರಿಹರ ಘಟಕದ ಸರ್ಕಾರಿ ಬಸ್ ಹೊಸದಾಗಿ ನಿರ್ಮಾಣ ವಾಗಿರುವ ರಸ್ತೆಯ ಮಧ್ಯದ ಡಿವೈಡೈರ್ ಗೆ ಗುದ್ದಿದೆ
ಬೆಳಗಿನ ಜಾವ ಸಮಯವಾಗಿದ್ದರಿಂದ ಚಾಲಕ ನಿದ್ದೆ ಮುಂಪರಿನಲ್ಲಿ ಇರುವುದರಿಂದ ಈ ಘಟನೆ ಸಂಭವಿಸಿದೆ ಗುದ್ದಿದ ರಭಸಕ್ಕೆ ಬಸ್ಸಿನ ಮುಂದಿನ ಚಕ್ರಗಳು ಕಳಚಿ ಹೋಗಿವೆ
ಆದರೆ ಬಸ್ಸಿನಲ್ಲಿ ಇದ್ದಂತ 35 ಜನ ಪ್ರಯಾಣಿಕರಲ್ಲಿ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳಕ್ಕೆ ಹೊನ್ನಾಳಿ ಡಿಪೋ ಮ್ಯಾನೇಜರ್ ಮಹೇಶ್ವರಪ್ಪ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರಿಗೆ ಚಿಕಿತ್ಸೆ ಕೊಡಿಸಿ ಮತ್ತೆ ಇಲಾಖೆಯಿಂದ ಬರುವಂತಹ ಪರಿಹಾರವನ್ನು ಕೊಡಿಸಿದ್ದೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಹೊನ್ನಾಳಿಯ ರಕ್ಷಣಾ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದರು
ಹೊಸದಾಗಿ ನಿರ್ಮಿಸಿರುವ ಈ ರಸ್ತೆಯು ಡಿವೈಡರ್ ನಿಂದ ಸ್ವಲ್ಪ ದೂರದವರೆಗೆ ಅಗಲೀಕರಣ ಆಗಬೇಕಿದ್ದು ಆದರೆ ಇದು ಆಗದೇ ಇರುವುದು ಈ ಅನಾಹುತಕ್ಕೆ ಕಾರಣವಾಗಿದೆ.
ಏಕೆಂದರೆ ಶಿವಮೊಗ್ಗದ ಮಾರ್ಗವಾಗಿ ಬರುವಂತಹ ವಾಹನಗಳು ರಸ್ತೆಯು ಚಿಕ್ಕದಾಗಿದ್ದು ನಂತರ ಅಗಲೀಕರಣವಾಗಿದೆ ಆದ್ದರಿಂದ ಬರುವಂತ ವಾಹನ ಚಾಲಕರಿಗೆ ರಾತ್ರಿ ಗೊತ್ತಾಗುವುದಿಲ್ಲ ಆದ್ದರಿಂದ ಇಲ್ಲಿ ರಸ್ತೆಯ ಸೂಚನಾ ಫಲಕಗಳನ್ನು ಮತ್ತು ರಿಫ್ಲೆಕ್ಟ್ ಲೈಟ್ಗಳನ್ನು ಹಾಕಬೇಕು ಎಂದು ಸಾರ್ವಜನಿಕರು ನಮ್ಮ ಪತ್ರಿಕೆ ಜೊತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವರದಿ-ಪ್ರಭಾಕರ ಡಿ ಎಂ