ಕಲಬುರಗಿ:ಮಲ್ಲಾಬಾದ ಏತ ನೀರಾವರಿ ಯೋಜನೆಯ ಕಾಮಾಗಾರಿಯನ್ನು ಕೂಡಲೇ ಮುಕ್ತಾಯಗೊಳಿಸದಿದ್ದರೆ ಮಾಡು ಇಲ್ಲವೇ ಮಡಿ ಎಂಬ ಶೀರ್ಷಿಕೆಯೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಮಹಾಂತಗೌಡ ನಂದಿಹಳ್ಳಿ ಸರ್ಕಾರಕ್ಕೆ ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಮಲ್ಲಬಾದ್ ಏತ ನೀರಾವರಿ ಯೋಜನೆಯು ಹಲವು ದಶಕಗಳು ಕಳೆದರೂ ಈ ಕಾಮಗಾರಿಗೆ ಮುಕ್ತಿ ಸಿಕ್ಕಿಲ್ಲವೆಂದು ಹೇಳಬಹುದು ಯಾಕೆಂದರೆ ಈ ವಿಷಯದ ಕುರಿತು ತಾಲೂಕಿನ ಶಾಸಕರಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದರೂ ಸಹಿತ ಯಾವುದೇ ರೀತಿಯ ಪ್ರಯೋಜನವಾಗಿಲ್ಲವೆಂದು ಹೇಳಬಹುದು ಯಾಕೆಂದರೆ ತಾಲೂಕಿನ ಶಾಸಕರುಗಳ ಅಸಹಾಯಕತೆ ಮತ್ತು ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ಮಲ್ಲಬಾದ್ ಏತ ನೀರಾವರಿ ಯೋಜನೆಯ ಸಂಪೂರ್ಣ ಕಾಮಗಾರಿಯು ಮುಕ್ತಾಯವಾಗುವಂತಹ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಒಂದು ವೇಳೆ ಮಲ್ಲಾಬಾದ ಏತ ನೀರಾವರಿ ಮುಕ್ತಾಯವಾದರೆ ಸುಮಾರು 58 ಹಳ್ಳಿಗಳಿಗೆ ನೀರಾವರಿಯ ಅನುಕೂಲತೆ ದೊರೆಯಲಿದ್ದು ಮಲ್ಲಾಬಾದ್ ಏತ ನೀರಾವರಿಯ ಎಂ ಬಿ ಸಿ ಯ ಶಾಖ ಕಾಲುವೆಯಲ್ಲಿ ಸುಮಾರು 132 ಕೋಟಿ ರೂಪಾಯಿ ಅನುದಾನ ದಿನಾಂಕ7\3\2023 ರಂದು 138ನೇ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಆದರೆ ಟೆಂಡರ್ ಶೀಘ್ರದಲ್ಲಿ ಕರೆಯಬೇಕು ಮತ್ತು ಮಲಬಾದ್ ಏತ ನೀರಾವರಿಯಲ್ಲಿ ಬರುವ ಜೆ ಬಿ ಸಿ ಮೂರು ಕಾಲುವೆಯಲ್ಲಿ ಬಳಬಟ್ಟಿ ಲಿಫ್ಟ್ ನಂಬರ್1ರಲ್ಲಿ 154 ಕೋಟಿಗಳು ಮತ್ತು ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಒಟ್ಟು ಮೊತ್ತ 284 ಕೋಟಿ ರೂಪಾಯಿಗಳನ್ನು ಜೇವರ್ಗಿ
ಮತ್ತು ಯಡ್ರಾಮಿ ತಾಲೂಕಿನ ಜನತೆಗೆ ಸರ್ಕಾರ ಹಾಗೂ ಶಾಸಕರು ಮೋಸ ಮಾಡುತ್ತಾ ಬಂದಿದ್ದಾರೆ ಹಲವಾರು ಬಾರಿ ಈ ವಿಷಯದ ಕುರಿತು ಮನವಿ ಪತ್ರ ಸಲ್ಲಿಸಲಾಗಿದೆ ಅದೇ ರೀತಿಯಾಗಿ ಹತ್ತು ವರ್ಷಗಳ ಹಿಂದೆ ಈ ವಿಷಯದ ಕುರಿತು ಹೋರಾಟ ಕೂಡಾ ಮಾಡಲಾಗಿತ್ತು ಯಾವುದೇ ರೀತಿಯಿಂದ ಪ್ರಯೋಜನವಾಗಲಿಲ್ಲ ಆದಕಾರಣ ಈ ಬಾರಿಯ ಹೋರಾಟದಲ್ಲಿ ಯಡ್ರಾಮಿ ತಾಲೂಕಿನ 38 ಹಳ್ಳಿಗಳು ಜೇವರ್ಗಿ ತಾಲೂಕಿನ 20 ಹಳ್ಳಿಗಳ ರೈತರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂ ಬಿ ಸಿ ವಿಭಾಗದಲ್ಲಿ 38 ಗ್ರಾಮಗಳ 16.772 ಹೆಕ್ಟರ್ ಪ್ರದೇಶ ಮತ್ತು ಜೆ ಬಿ ಸಿ ವಿಭಾಗದಲ್ಲಿ 20 ಹಳ್ಳಿಗಳ8642 ಹೆಕ್ಟರ್ ಪ್ರದೇಶ ನೀರು ಉಣಿಸುವ ಯೋಜನೆ ಇದಾಗಿದ್ದು ಆದಕಾರಣ ದಿನಾಂಕ16/7/2024 ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಅವರ ನೇತೃತ್ವದಲ್ಲಿ ಬಿಳವಾರ ಗ್ರಾಮದಲ್ಲಿ 58 ಹಳ್ಳಿಯ ರೈತರೊಂದಿಗೆ ಸಭೆ ಕರೆದು ರೈತರೊಂದಿಗೆ ಚರ್ಚಿಸಿ ಮಾಡು ಇಲ್ಲವೇ ಮಡಿ ಎಂಬ ಘೋಷವಾಕ್ಯದೊಂದಿಗೆ ಹೋರಾಟವನ್ನು ಹಮ್ಮಿಕೊಂಡು ಯಡ್ರಾಮಿ ಮತ್ತು ಜೇವರ್ಗಿ ಬಂದಗೆ ಕರೆ ಕೊಡಲಾಗುವುದು ಆದಕಾರಣ ಈ ಕೂಡಲೇ ತಾಲೂಕಿನ ಶಾಸಕರು ಎಚ್ಚೆತ್ತುಕೊಂಡು ಟೆಂಡರ್ ಕರೆಯುವಂತಹ ಪ್ರಯತ್ನ ಮಾಡಬೇಕು ಒಂದು ವೇಳೆ ವಿಳಂಬ ಧೋರಣೆ ಅಥವಾ ನಿರ್ಲಕ್ಷ್ಯ ಧೋರಣೆ ವಹಿಸಿದ್ದಲ್ಲಿ ತಾಲೂಕಿನಲ್ಲಿ ಮಾಡು ಇಲ್ಲವೇ ಮಡಿ ಎಂಬ ಘೋಷವಾಕ್ಯದೊಂದಿಗೆ 58 ಹಳ್ಳಿಯ ರೈತರೊಂದಿಗೆ ಉಗ್ರವಾದ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹೋರಾಟದಲ್ಲಿ ಸಂತೋಷ ಗೌಡ ಮಾಲಿ ಪಾಟೀಲ್ ಜಿಲ್ಲಾ ಕಾರ್ಯಧ್ಯಕ್ಷರು ಕಲ್ಬುರ್ಗಿ ಮತ್ತು ಭೀಮಶಂಕರ್ ಕಟ್ಟಿಮನಿ ಗೌರವಅಧ್ಯಕ್ಷರು ಕಲ್ಬುರ್ಗಿ. ಮತ್ತು ಅನಸುಬಾಯಿ ಮಹಿಳಾ ಘಟಕ ಅಧ್ಯಕ್ಷರು ಕಲ್ಬುರ್ಗಿ.
ಗುರಣ್ಣ ಗೌಡ ಮಾಲಿಪಾಟೀಲ್ ರೈತ ಮುಖಂಡರು ಹಾಗೂ ಸಿದ್ದನಗೌಡ ಬಿ ಪಾಟೀಲ್ ಜೇವರ್ಗಿ ತಾಲೂಕ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.