ಹನೂರು :ಡಿ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿದ್ಯುತ್ ಗುತ್ತಿಗೆದಾರ ರ ಸಂಘದ ಸಮಸ್ಯೆಗಳನ್ನು ಕುರಿತು ಪ್ರತಿಭಟನೆಯನ್ನು ನಡೆಸಲಾಗುವುದು ಆದ್ದರಿಂದ ಜಿಲ್ಲಾ ವಿದ್ಯುತ್ ಗುತ್ತಿಗೆನೌಕರರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ಚಾಮರಾಜನಗರ ಜಿಲ್ಲಾ ಚೆಸ್ಕಾಂ ನೌಕರ ಸಂಘದ ಸುರೇಶ್ ತಿಳಿಸಿದರು,
ಹನೂರು ಪಟ್ಟಣದ ಚೆಸ್ಕಾಂ ಕಚೇರಿಯ ಆವರಣದಲ್ಲಿ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 15ಸಾವಿರ ಕ್ಕೂ ಹೆಚ್ಚು ವಿದ್ಯುತ್ ಗುತ್ತಿಗೆದಾರ ನೌಕರರು ಕರ್ತವ್ಯ ನಿರ್ವಹಿಸು ತ್ತಿದ್ದಾರೆ, ಈ ನಿಟ್ಟಿನಲ್ಲಿ ಗುತ್ತಿಗೆದಾರ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ,ರಾಜ್ಯದ ವಿವಿಧ ಚೆಸ್ಕಾಂ ಇಲಾಖೆ ಗುತ್ತಿಗೆದಾರ ನೌಕರರು ಸೇರಲಿದ್ದಾರೆ ಆದ್ದರಿಂದ ಹನೂರು ತಾಲೂಕಿನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ಕೈಗೊಳ್ಳುವ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು,
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷ ಆರ್ ಕೃಷ್ಣ, ಕಾರ್ಯದರ್ಶಿ ಬಾನು ಪ್ರಕಾಶ್, ನಿರ್ದೇಶಕರಾದ, ಸಣ್ಣ ಕಾಳ ಶೆಟ್ಟಿ, ಸಂಪತ್ ಕುಮಾರ್, ರಾಜು,ತಾಲ್ಲೂಕು ಅಧ್ಯಕ್ಷ ಮಾರಿ ಮುತ್ತು, ಕಾರ್ಯದರ್ಶಿ ಶಬ್ಬೀರ್, ಉಪಾಧ್ಯಕ್ಷ ಪ್ರಕಾಶ್, ಸೇರಿದಂತೆ ಇತರರು ಇದ್ದರು,ವರದಿ ಉಸ್ಮಾನ್ ಖಾನ್