ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿರುವ ಆದೇಶ “ಶಾಲಾ ಕಾಲೇಜು ಆವರಣದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನ ಮಾರಾಟ ನಿಷೇಧ” ಕಾಯ್ದೆಗೆ ಮುಂಡಗೋಡದಲ್ಲಿ ಯಾವುದೇ ರೀತಿಯ ಬೆಲೆ ಇಲ್ಲದಾಗಿದೆ. ಏಕೆಂದರೆ ಮುಂಡಗೋಡ ನಗರದ ಗಾಂಧಿನಗರ ಬಸವನಗರ ಶಾಲೆ,ಇಂದಿರಾ ನಗರದ ಉರ್ದು ಶಾಲೆ,ಹೌಸಿಂಗ್ ಬೋರ್ಡ್ ಬಡಾವಣೆಯ ರೋಟರಿ ಶಾಲೆ,ಜೂನಿಯರ್ ಕಾಲೇಜು ಬಳಿ,ಹೆಣ್ಣು ಮಕ್ಕಳ ಶಾಲೆ, ಲೋಯೋಲಾ ಶಾಲೆ ಹಾಗೂ ಗ್ರಾಮೀಣ ಭಾಗದಲ್ಲಂತೂ ಯಾವುದೇ ಮುಲಾಜಿಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.ಅದರಲ್ಲೂ ಕೆಲವೊಂದು ಶಾಲಾ ಕಾಲೇಜುಗಳ ಮಕ್ಕಳು ಗುಟ್ಕಾ, ಪಾನ್ ಮಸಾಲ
ದಾಸರಾಗಿರುವುದು ಕಂಡು ಬರುತ್ತಿದೆ,ಓದಿ ವಿದ್ಯಾವಂತರಾಗಬೇಕಾದ ಈಗಿನ ಮಕ್ಕಳು ಶಾಲಾ ಸಮಯದಲ್ಲೇ ಗುಟ್ಕಾ ಬೀಡಿ ಚಟಕ್ಕೆ ಬಿದ್ದಿರುವುದು ವಿಪರ್ಯಾಸ,ಸರ್ಕಾರಗಳೇ ಹೊರಡಿಸಿರುವ ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಮಾರಾಟ ನಿಷೇಧ ನಿಯಮವಂತು ಹಳ್ಳ ಹಿಡಿದಿದೆ ಇದೆಲ್ಲವನ್ನು ಪ್ರಶ್ನಿಸಬೇಕಾದ ತಾಲೂಕ ಆರೋಗ್ಯ ಇಲಾಖೆ,ಹೆಲ್ತ್ ಇನ್ಸ್ಪೆಕ್ಟರ್,ಪಟ್ಟಣ ಪಂಚಾಯ್ತಿ,ತಾಲೂಕಾ ಆಡಳಿತಗಳ ಕಣ್ಣಿಗೆ ಈ ಸಂಗತಿ ತಿಳಿಯದಿರುವುದು ದುರಂತ ಈ ಕುರಿತು ರಿಯಾಲಿಟಿ ಚೆಕ್ ಮಾಡಲು ತೆರಳಿದ ಕರುನಾಡ ಕಂದ ಸುದ್ದಿ ಪತ್ರಿಕೆಗೆ ಕಂಡ ಚಿತ್ರಣವೇ ಬೇರೆ ಮಕ್ಕಳು 14,15 ವಯಸ್ಸಿಗೆ ಗುಟ್ಕಾ ದಾಸರಾಗುತ್ತಿರುವುದು ದುರಂತ.
ಶೇಕಡಾ 60% ಯುವಜನತೆ ಹೊಂದಿರುವ ಭಾರತದಲ್ಲಿ ಅಪ್ರಾಪ್ತ ವಯಸ್ಸಿಗೆ ದುಶ್ಚಟಗಳ ದಾಸರಾಗಿ ಬದುಕನ್ನು ಹಾಳು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ,
ಅದರಲ್ಲೂ ನಮ್ಮ ಮುಂಡಗೋಡ ತಾಲೂಕಿನಲ್ಲಿ ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಅಂಗಡಿಗಳ ಮೇಲೆ ದಿಡಿರ್ ದಾಳಿ ಮಾಡಿ ದಂಡ ವಿಧಿಸುವ ಪ್ರಕ್ರಿಯೆ ನಡೆಸಬೇಕಿದೆ.
ಒಟ್ಟಿನಲ್ಲಿ ಮುಂಡಗೋಡ ನಗರದ ಶಾಲಾ ಕಾಲೇಜುಗಳ ಬಳಿ 500 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ,ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ನೋಡಿಕೊಂಡು ಯುವಕರು ಹಾದಿ ತಪ್ಪದಂತೆ ಮಾಡುವ ಗುರುತರ ಜವಾಬ್ದಾರಿ ತಾಲೂಕಾ ಆಡಳಿತದ ಮೇಲಿದೆ ಕಾದು ನೋಡೋಣ ಇನ್ನಾದರೂ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವವರೇ ಎಂದು.