ಶಹಾಪುರ:ಸರ್ಕಾರ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಮಾಜದ ಏಳಿಗೆಗೆ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಖ್ಯಾತ ವೈದ್ಯರಾದ ಡಾ|| ಚಂದ್ರಶೇಖರ ಸುಬೇದಾರ ಹೇಳಿದರು.
ನಗರದ ಕುಂಬಾರ ಬಡಾವಣೆಯಲ್ಲಿ ಸರ್ವಜ್ಞ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಮನೆ-ಮನೆಗೂ ಸರಕಾರಿ ಸೌಲಭ್ಯ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಸಮಾಜ ಅಭಿವೃದ್ಧಿ ಆಗಬೇಕಾದರೆ ಎಲ್ಲರೂ ಶ್ರಮಿಸಬೇಕು. ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡಿದಾಗ ಮಾತ್ರ ಸಮಾಜದ ಕಟ್ಟಕಡೆ ವ್ಯಕ್ತಿಗೆ ಸರಕಾರಿ ಸೌಲಭ್ಯ ದೊರೆಯುತ್ತದೆ. ಇಂತಹ ಪ್ರಾಮಾಣಿಕ ಪ್ರಯುತ್ನದ ಮೂಲಕ ಸಾರ್ವಜನಿಕರಿಗೆ ಸರಕಾರಿ ಸೌಲಭ್ಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮುಟ್ಟಿಸುವ ಇಂತಹ ಕಾರ್ಯಕ್ರಮ ಮಾಡುತ್ತಿರುವ ಸರ್ವಜ್ಞ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.
ನಂತರ ಮಾತನಾಡಿ ಸಂಸ್ಥೆಯ ಅಧ್ಯಕ್ಷರಾದ ಸಂಗಮೇಶ ಕುಂಬಾರ ಸರಕಾರ ನಿರ್ಗತಿಕರಿಗೆ ಬಡವರಿಗೆ ಹಿಂದುಳಿದವರೆಗೆ ಸಾಕಷ್ಟು ಯೋಜನೆಗಳ ಜಾರಿಗೊಳಿಸಿದ್ದು ಇದನ್ನು ಅಧಿಕಾರಿ ವರ್ಗ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಜನರಿಗೆ ಸಮರ್ಪಕವಾಗಿ ಜಾರಿಗೆ ಬಂದಲ್ಲಿ ಮಾತ್ರ ಲಾಭವನ್ನು ಬಡ ಫಲಾನುಭವಿಗಳು ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಂಡಪ್ಪ ತುಂಬಗಿ, ಶಿವಣ್ಣ ಇಜೇರಿ,ಆಡೆವೆಪ್ಪ ಜಾಕಾ,ಸಂಸ್ಥೆಯ ಅಧ್ಯಕ್ಷರಾದ ಸಮಾಜ ಸೇವಕರು ಸಂಗಮೇಶ ಕುಂಬಾರ,ಸರಕಾರಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿದ್ರಾಮಪ್ಪ ಕುಂಬಾರ,ಬಸವರಾಜ ಕುಂಬಾರ,ಸುಭಾಷ ಹೊತಪೇಠ,ಉಮೇಶ ಗುಡಗುಂಟಿ,ಶರಣು ಯಡ್ರಾಮಿ,ಶರಣು ಐಕೂರ ಇನ್ನಿತರ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.