ಹನೂರು ತಾಲೂಕಿನ ಪೊಲೀಸ್ ಠಾಣೆ ಎದುರು ಇರುವ ಅಂಬೇಡ್ಕರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರವು ಎಲ್ಲಾ ಸಮಾಜದವರಿಗೂ ಸಮನ ಹಕ್ಕು ನೀಡಿದೆ ಎಲ್ಲೂ ಸಹ ಸಂವಿಧಾನ ವಿರೋಧಿ ಹೇಳಿಕೆ ಹಾಗೂ ಶಾಂತಿ ಕದಡುವ ಪ್ರಯತ್ನ ಮಾಡಿರುವುದಿಲ್ಲ. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಇವರು ಈ ರೀತಿಯಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ಈ ಕೂಡಲೇ ರಾಜ್ಯದ ಜನತೆಯ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು .ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದರ ಜೊತೆಗೆ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರ ನೀಡಿದರು. ನಂತರ ಮುಖಂಡ ಕಿರಣ್ ಮಾತನಾಡಿ ಜೆಡಿಎಸ್ ಪಕ್ಷವು ಪ್ರಾನಾಳಿಕೆಯಲ್ಲಿ ಜಾತ್ಯಾತೀತ ತತ್ವವನ್ನ ಅಳವಡಿಸಿಕೊಂಡಿದೆ ಎನ್ನುತ್ತಾರೆ. ಆದರೆ ಅವರು ಮಾಡುವುದು ಮಾತ್ರ ಕೀಳು ಮಟ್ಟದ ರಾಜಕೀಯ. ಇದು ಮಾಜಿ ಮುಖ್ಯಮಂತ್ರಿಗಳ ಘನತೆಗೆ ಶೋಭೆ ತರುವಂತದ್ದಲ್ಲ ಈ ಕೂಡಲೇ ಜನತೆಯ ಕ್ಷಮೆ ಕೇಳಬೇಕು. ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಕೆ ಹೊಸೂರು ಬಸವರಾಜು, ರಂಗೇ ಗೌಡ ,ಪಾಳ್ಯ ಸಿದ್ದಪ್ಪಾಜಿ ನಾಯಕ, ಸಿಂಗನಲ್ಲೂರು ಚೆನ್ನೇಶ್ ಗೌಡ, ಪ್ರಣವ್ ಗೌತಮ್ .ತೇಜು .ಬಸವರಾಜು ರುದ್ರ ಜಗದೀಶ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಗಳು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್…