ತುಮಕೂರು:ಇಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ ಕರಡಿಗಳು ರೈತನ ಮೇಲೆ ಎರಗಿ ಗಂಭೀರ ಸ್ಥಿತಿ ತಲುಪುವಂತೆ ಮಾಡಿರುವ ಘಟನೆ ಪಾವಗಡ ತಾಲ್ಲೂಕಿನ ಟಿ.ಎನ್ ಬೆಟ್ಟ ಪೆಮ್ಮನಹಳ್ಳಿ
ಹೊರವಲಯದಲ್ಲಿ ನಡೆದಿದೆ.
ಸುಮಾರು 48 ವರ್ಷದ ರೈತ ಸಂಜೀವಪ್ಪ ಬಿನ್ ಪೂಜಾರ್ ತಿಮ್ಮಪ್ಪ ಕರಡಿಗಳ ದಾಳಿಗೆ ತುತ್ತಾಗಿರುವ ದುರ್ದೈವಿ.
ಪೆಮ್ಮನಹಳ್ಳಿ ಟಿ.ಎನ್.ಬೆಟ್ಟದ ಹೊರವಲಯದಲ್ಲಿದ್ದ ಹೊಲದಲ್ಲಿ ರಾಗಿ ಬಿತ್ತನೆ ಮಾಡಿದ್ದರು ಬೆಳೆಯಲ್ಲಿ ನವಿಲು ಬರುತ್ತವೆ ಹಾಗಾಗಿ ಅದರ ಕಾವಲಿಗೆಂದು ಇಂದು ಮುಂಜಾನೆ ತೆರಳುತ್ತಿದ್ದ ಸಂದರ್ಭದಲ್ಲಿ ಕರಡಿಗಳು ಆ ವ್ಯಕ್ತಿಯ ದಾಳಿ ನಡೆಸಿವೆ ತಲೆ ಭಾಗ ಚರ್ಮವೇ ಹೊರಬರುವಂತೆ ಕಿತ್ತಿವೆ,
ಕರಡಿಗಳಿಂದ ತಪ್ಪಿಸಿಕೊಂಡು ಸ್ವಲ್ಪ ದೂರ ರಕ್ತಸ್ರಾವದಲ್ಲಿಯೇ ಬಂದ ಸಂಜೀವಪ್ಪ ಪಕ್ಕದ ಹೊಲದಲ್ಲಿದ್ದ ಓರ್ವನನ್ನು ಕೈ ಸನ್ನೆ ಮಾಡಿ ಕರೆದಿದ್ದಾನೆ ಕೂಡಲೇ ಬಂದ ಅವರು ಆತನ ರಕ್ಷಣೆಗೆ ಮುಂದಾಗಿ ಗ್ರಾಮಸ್ಥರ ಸಹಕಾರದಿಂದ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಮುಖ ಹೊರತು ಪಡಿಸಿ ದೇಹದ ಎಲ್ಲಾ ಭಾಗಗಳಿಗೂ ಕರಡಿ ಉಗುರಿನಿಂದ ದಾಳಿ ಮಾಡಿರುವ ಗಾಯಗಳಲ್ಲಿ ರಕ್ತ ಚಿಮ್ಮುತ್ತಿದ್ದ ಘಟನೆ ನೋಡುಗರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲಾಗಿತ್ತು ಹಾಗಾಗಿ ಅಂತಹ ಸ್ಥಿತಿ ಕಂಡು ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡುವ ಕೆಲಸ ಮಾಡಲಾಗಿದೆ ಪರಿಸ್ಥಿತಿ ಮಾತ್ರ ತುಂಬಾ ಗಂಭೀರವಾಗಿರುವ ಹಿನ್ನೆಲೆ ಬೆಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ ಕುಟುಂಬಸ್ಥರ ರೋಧನೆ ಮಾತ್ರ ಬಾಧೆ ತರುತ್ತಿದೆ.
ಹಾಗಾಗಿ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ರೈತನ ಸಂಕಷ್ಟ ಆಲಿಸಿ ಪರಿಹಾರ ಕಲ್ಪಿಸಬೇಕಿದೆ ಇನ್ನೂ ಪ್ರಯಾಣಿಕರು ರಸ್ತೆಗಳಲ್ಲಿ ರಾತ್ರಿ ವೇಳೆ ಪ್ರಯಾಣಿಸುವಾಗ ಎಚ್ವರವಹಿಸಿ ಜೊತೆಗೆ ರೈತರು ಹೊಲ ತೋಟಗಳಿಗೆ ಹೋಗುವ ಮಧ್ಯೆ ಇಂತಹ ಕಾಡು ಮೃಗಗಳು ಅಟ್ಯಾಕ್ ಮಾಡುವ ಸಾಧ್ಯತೆ ಯಿರುತ್ತದೆ ಹಾಗಾಗಿ ಎಚ್ಚರವಾಗಿ ಸಾಗಬೇಕು ಸಾಧ್ಯವಾದಷ್ಟು ಕಾಡು ಪ್ರಾಣಿಗಳ ಪ್ರಯಾಣಿಸುವ ಜಾಗದಲ್ಲಿ ನಾವು ತಲುಪುವುದರಿಂದ ಇಂತನ ಘಟನೆಗಳು ಜರುಗುತ್ತಿರುತ್ತವೆ ತುಸು ಎಚ್ಚರವಾಗಿರುವುದು ಉತ್ತಮ.
ವರದಿ:ಕೆ.ಮಾರುತಿ ಮುರಳಿ