ಯಾದಗಿರಿ:ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಶೋಭಾ ಅವರು ಉದ್ಘಾಟಿಸಿದರು
ಶಹಾಪುರ ತಾಲೂಕಿನ ಕೋರ್ಟ್ ಹಾಲ್ ನಲ್ಲಿ ನಡೆದ ಸಮಾರಂಭ ವಕೀಲರು ಸಂಘದಿಂದ ಶನಿವಾರ ವಕೀಲರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.ವಕೀಲರು ಸಾಮಾಜಿಕವಾಗಿ ಮತ್ತು ಸತ್ಯವಂತರ ಪರವಾಗಿ ನ್ಯಾಯವಾಗಿ ಕೆಲಸ ಮಾಡುವ ಮೂಲಕ ಅಧ್ಯಯನ ಶೀಲರಾಗಬೇಕು. ವಕೀಲರು ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡುವುದು ಮುಖ್ಯವಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸಿದ್ದರಾಮ.ಟಿ.ಪಿ. ತಿಳಿಸಿದ್ದರು. ನ್ಯಾಯಾಲಯದ ಕಲಾಪದಲ್ಲಿ ಹಿರಿಯ ವಕೀಲರು ವಾದ ಮಂಡಿಸುವ ಪರಿಯನ್ನು ಕಲಿಯಬೇಕು. ಆಧುನಿಕತೆ ಬೆಳೆದಂತೆ ವಕೀಲರು ಕೂಡ ಎಲ್ಲವನ್ನು ಅರಿತುಕೊಂಡು ವಕೀಲರು ಪ್ರಾಮಾಣಿಕರಾಗಿಬೇಕು. ಯಾವುದೇ ಒತ್ತಡಕ್ಕೆ ವಕೀಲರು ಬಲಿಯಾಗದೆ ತಾವು ಮಾಡುವ ವೃತ್ತಿ ಧರ್ಮ ಕಾಪಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಹಿರಿಯ ವಕೀಲರಾದ ಎಂ.ಆರ್.ಮಾಲಿಪಾಟೀಲ್, ಭಾಸ್ಕರರಾವ್ ಮೂಡಬೂಳ, ಶ್ರೀನಿವಾಸರಾವ್ ಕುಲಕರ್ಣಿ,
ಕೆ.ನಯ್ಯಮ ಅಹ್ಮದ್ ತಿಮ್ಮಾಪುರಿ, ವಕೀಲರ ಸಂಘದ ಅಧ್ಯಕ್ಷರಾದಸಂತೋಷ ದೇಶಮುಖ್, ಕಾರ್ಯದರ್ಶಿ ಮಲ್ಲಿಕಾರ್ಜುನ ಬುಕ್ಕಲ್, ಆರ್ ಹೊನ್ನಾರಡ್ಡಿ ಹಾಗೂ ಹಿರಿಯ ಕಿರಿಯ ವಕೀಲರು ಭಾಗವಹಿಸಿದ್ದರು.
ವರದಿ
ರಾಜಶೇಖರ ಮಾಲಿ ಪಾಟೀಲ್ ಶಹಾಪುರ