ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನಾನು ಕನ್ನಡ ಶಾಲೆಯ ಓದಿದವನು ಎಂದು ಹೇಳಿಕೊಳ್ಳಲು ಹೆಮ್ಮೆ:ನ್ಯಾ.ಅರಳಿ ನಾಗರಾಜ

ಕನ್ನಡ ಮಾಧ್ಯಮದಲ್ಲಿ ಓದಿದವನು ಎಂದು ಹೇಳಲು ನನಗೆ ಬಹಳ ಹೆಮ್ಮೆ ಇದೆ. ಕರ್ನಾಟಕದ ಉಚ್ಚ ನ್ಯಾಯಾಲಯ ಸ್ಥಾಪಿತವಾಗಿ ಐವತ್ತಕ್ಕಿಂತ ಹೆಚ್ಚು ವರ್ಷಗಳ ಕಳೆದಿದ್ದರೂ ಯಾವುದೇ ತೀರ್ಪು ಕನ್ನಡದಲ್ಲಿ ಇರುವುದಿಲ್ಲ ಕನ್ನಡಿಗನಾದ ನಾನು ಕನ್ನಡದಲ್ಲೇ ನ್ಯಾಯಾಲಯದ ತೀರ್ಪುಗಳನ್ನು ನೀಡಿದ್ದೇನೆ ಇದು ನಾನು ನನ್ನ ಭಾಷೆಗೆ ಸಲ್ಲಿಸಿದ ಗೌರವವಾಗಿದೆ ಎಂದರು.ಶ್ರೀಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ಜೆ ಎಸ್ ಬಿ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ-ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು, ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿ, ಮಾತನಾಡಿದರು.
ಕನ್ನಡವನ್ನು ನಮ್ಮ ಉಸಿರಾಗಿಸಿಕೊಳ್ಳಬೇಕು. ಬೇರೆ ಭಾಷೆಗಳನ್ನು ಕಲಿಯಬೇಕು,ನಮ್ಮ ಭಾಷೆಯನ್ನು ಬಳಸಿ,ಬೆಳೆಸಬೇಕು. ನಾಡು-ನುಡಿಯ ಬಗ್ಗೆ ಪೂಜನೀಯ ಭಾವನೆಯನ್ನು ಹೊಂದಿರಬೇಕು ಕನ್ನಡದ ಮೇಲೆ ಪ್ರೀತಿ ಇರಬೇಕು,ಅದು ಎಷ್ಟೆಂದರೆ, ನಮ್ಮ ತಾಯಿಯ ಪ್ರೀತಿಗಿಂತ ಹೆಚ್ಚಿರಬೇಕು. ಕವಿ ಮಹಾಲಿಂಗರಂಗರು,ನಮ್ಮ ಭಾಷೆ ಕಲಿಯುವುದು ಸುಲಿದ ಬಾಳೆಹಣ್ಣನ್ನು ತಿನ್ನಲು ಕೊಟ್ಟಹಾಗೆ,ಸಿಪ್ಪೆ ತೆಗೆದು ಕಬ್ಬನ್ನು ತಿನ್ನಲು ಕೊಟ್ಟಹಾಗೆ,ಕರೆದು ನೊರೆಹಾಲನ್ನು ನುಡಿಯಲು ಕೊಟ್ಟಂತೆ ಎಂದು ಹೇಳಿದರು ಅದನ್ನು ನಾವೆಲ್ಲರೂ ಅರ್ಥೈಸಬೇಕಿದೆ ಕನ್ನಡ ಸಾಹಿತ್ಯವನ್ನು ಓದುವುದರಿಂದ ನಾವು ವಿಚಾರವಂತರಾಗುತ್ತೇವೆ ಅವು ಜ್ಞಾನ ಭಂಡಾರ ಹೆಚ್ಚಿಸುತ್ತವೆ.ನಮ್ಮ ಭಾವನೆ, ಜೀವನವೆಲ್ಲಾ ಕನ್ನಡವಾಗಿರಬೇಕು ನಮ್ಮ ಮೇಲೆ ಬಲವಂತವಾಗಿ ಬೇರೆ ಭಾಷೆಯನ್ನು ಹೇರಲಾಗುತ್ತಿದೆ ಇದು ನಿಲ್ಲಬೇಕು ಕನ್ನಡ ನಮ್ಮ ಅಸ್ಮಿತೆ,ಅಸ್ತಿತ್ವ ಎಂಬುದನ್ನು ನಾವು ಮನಗಾಣಬೇಕು.ನನ್ನದೆ ಭಾಷೆಯಲ್ಲಿ ಕೇಳುವುದರಿಂದ,ಕಲಿಯುವುದರಿಂದ, ನನ್ನದೇ ಭಾಷೆಯಲ್ಲಿ ಮಾತಾನಾಡುವುದರಿಂದ ನಮಗೆ ಚೆನ್ನಾಗಿ ಅರ್ಥವಾಗುತ್ತದೆ ಗ್ರಹಿಕೆಯಾಗುತ್ತದೆ. ಗುರಿಯನ್ನು ಸಾಧಿಸಲು ಅಧ್ಯಯನ ಅಗತ್ಯ. ಅಧ್ಯಯನಕ್ಕೆ ಏಕಾಗ್ರತೆ ಬೇಕು,ಅದು ಬರಲು ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಇದು ಸಾಧ್ಯವಾಗುವುದು,ಕನ್ನಡವನ್ನು, ಕನ್ನಡತನವನ್ನು,ಕನ್ನಡದ ಸಂಸ್ಕಾರಗಳನ್ನು ಕಲಿಯುವುದರಿಂದ.ನಮ್ಮ ದೇಹವು ಸಮಾಜದ ಋಣದಿಂದ ಕೂಡಿದ್ದು, ಸಮಾಜದ ಋಣ ತೀರಿಸಲು ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ನುಡಿದಂತೆ ನಡೆಯಬೇಕು. ಅದೇ ನಿಜವಾದ ಜೀವನ ಇಂದು ಕನ್ನಡ ಶಾಲೆಗಳು ಮುಚ್ಚುತ್ತಿವೆ ಅದಕ್ಕೆ ಕಾರಣ ಹಲವು ಸಾಹಿತ್ಯ ಪರಿಷತ್ತಿನಂತಹ ಕನ್ನಡ ಸಂಘಟನೆಗಳು ಕನ್ನಡ ಶಾಲೆಗಳ ಸ್ಥಿತಿ ಗತಿಗಳನ್ನು ಅಧ್ಯಾಯನ ಮಾಡಬೇಕು. ಮೂಲಭೂತ ಸೌಕರ್ಯ, ಕುಂದುಕೊರತೆಗಳನ್ನು ಪರಿಶೀಲನೆ ಮಾಡಿ, ಸ್ಥಳೀಯ ಸಂಸ್ಥೆಗಳ ಮೂಲಕ ಒದಗಿಸುವ ಕೆಲಸ ಮಾಡಬೇಕು.ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ,ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಆವಾಗ ಮಾತ್ರ ಕನ್ನಡ ಶಾಲೆಗಳ ಉಳಿವು ಸಾಧ್ಯ ನಾಡಿಗಾಗಿ ಸೇವೆಯನ್ನು ಸಲ್ಲಿಸಿದರನ್ನು ನಾವು ಸ್ಮರಿಸಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಾರ್ಥಕ ಜೀವನ ನಡೆಸಬೇಕು.ಜನರು ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು.ಆದರ್ಶ ನಾಯಕನನ್ನು ಆರಿಸಿದಾಗ ಅಭಿವೃದ್ಧಿ ಸಾಧ್ಯ.ಜನರು ಭ್ರಷ್ಟರಾದರೆ,ಅವರ ನಾಯಕನೂ ಅದೇ ದಾರಿಯಲ್ಲಿ ಸಾಗುತ್ತಾನೆ.ಇದರಿಂದ ಸ್ವಸ್ಥ, ಸುಂದರ ಸಮಾಜದ ನಿರ್ಮಾಣವಾಗುವುದಿಲ್ಲ ಆದ್ದರಿಂದ ನಾವೆಲ್ಲರೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಹನೂರು ಘಟಕದ ಮಲ್ಲೇಶ ಮಾಲಿಂಕಟ್ಟೆ ವಹಿಸಿದ್ದರು.
ಜೆ ಎಸ್ ಬಿ ಪ್ರತಿಷ್ಠಾನದ ಶಶಿಕುಮಾರ್ ಮಾತನಾಡಿದರು.
ದಿವ್ಯಸಾನಿಧ್ಯ ವಹಿಸಿದ್ದ ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಹದೇವಪ್ರಭುಸ್ವಾಮಿ, ಸುರೇಶ,ಮಹೇಶ,ಜಗದೀಶ,ರಾಜು,ಅಯ್ಯೂ ನಾಯಕ ಸಿಬ್ಬಂದಿ ವರ್ಗದವರು ಮತ್ತು ಮಕ್ಕಳಿದ್ದರು.
ವರದಿ:ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ