ಮುಂಡಗೋಡದ ವಾರದ ಸಂತೆ ಸೋಮವಾರ. ಈ ಸಂತೆಗೆ ಸುತ್ತಮುತ್ತಲಿನ ಹಳ್ಳಿ ಹಾಗೂ ಸವಣೂರು,
ಶಿಗ್ಗಾವಿ,ತಡಸ ಮುಂತಾದ ಭಾಗಗಳಿಂದ ವ್ಯಾಪಾರಕ್ಕಾಗಿ ವ್ಯಾಪಾರಸ್ಥರು ಬರುತ್ತಾರೆ, ಹಾಗೆಯೇ ಮುಂಡಗೋಡದ ವಾರದ ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.
ಈರುಳ್ಳಿ, ಟಮೋಟ, ಆಲೂಗಡ್ಡೆ ,ಸೊಪ್ಪು ,ತರಕಾರಿ ಎಲ್ಲಾ ರೀತಿಯ ಮಾರುಕಟ್ಟೆ ಇಲ್ಲಿ ಇರುತ್ತದೆ.ಇದರ ನಡುವೆಯೇ ಸದ್ದಿಲ್ಲದೆ 10 ರೂಪಾಯಿ ಮುಖ ಬೆಲೆಯ ಖೋಟಾ ನೋಟುಗಳ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.500, 100, 2000 ಸಾವಿರ ಮುಖ ಬೆಲೆಯ ನಕಲಿ ನೋಟುಗಳನ್ನು ತಂದರೆ ಎಲ್ಲಿ ಸಿಕ್ಕಿ
ಬೀಳುತ್ತೇವೆಯೋ ಎಂಬ ಗುಮಾನಿಯಲ್ಲಿ 10 ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳನ್ನು ಚಲಾವಣೆ ಮಾಡಲಾಗುತ್ತಿದೆ ಹಾಗೂ ಖರೀದಿದಾರರಿಗೆ ಯಾವುದೇ ರೀತಿಯ ಅನುಮಾನಬಾರದು. ಈ 10 ರೂಪಾಯಿ ಮುಖ ಬೆಲೆಯ ನಕಲಿ ನೋಟು ನೋಡಲು ಮೂಲ ನೋಟಗಳಂತೆ ಕಂಡರೂ RBI ನ ಭದ್ರತಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ನಕಲಿ ನೋಟು ಎಂದು ತಿಳಿಯುತ್ತದೆ. ಆದ ಕಾರಣ ಭಾರತೀಯ ಅರ್ಥ ವ್ಯವಸ್ಥೆಗೆ ಕಂಟಕ ವಾಗಿರುವ ಈ ನಕಲಿ ನೋಟು ಜಾಲವನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ತೊಲಗಿಸಬೇಕು, ಇಲ್ಲವಾದಲ್ಲಿ ಸಾರ್ವಜನಿಕರು ಖೋಟಾ ನೋಟಗಳನ್ನು ಅಸಲಿ ಎಂದು ನಂಬಿ ಮೋಸ ಹೋಗುವ ಸಾದ್ಯತೆ ಇರುವುದರಿಂದ ಆದಷ್ಟು ಬೇಗ ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಇದಕ್ಕೆ ಅಂತ್ಯ ಹಾಡಬೇಕಿದೆ.
ಹಾಗೆಯೇ ಸಾರ್ವಜನಿಕರು RBI ನ ನೋಟುಗಳ ಭದ್ರತಾ ಅಂಶಗಳನ್ನು ತಿಳಿದುಕೊಂಡು ಮುಂದೆ ವ್ಯವಹರಿಸುವ ಅಗತ್ಯವಿರುತ್ತದೆ ಮತ್ತು ನೋಟುಗಳ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಅಗತ್ಯವಿದೆ
-ಕರುನಾಡ ಕಂದ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.