ಬೀದರ:ಜಿಲ್ಲೆಯ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಗ್ನಿವೀರ್ ನೇಮಕಾತಿಯು ದಿನಾಂಕ 5/12/22 ರಿಂದ ಶುರುವಾಗಿದ್ದ ಮೊದಲನೇ ದಿನದಿಂದಲೂ ಬಹು ರೋಚಕವಾಗಿ ನಡೆಯುತ್ತಿದೆ
ರಾಯಚೂರು ಜಿಲ್ಲೆಗೆ ಈ ಬಾರಿ ಮೊದಲನೇ ಆದ್ಯತೆ ನೀಡಿದ್ದು ಅದರಲ್ಲೂ ರಾಯಚೂರಿನ ಯುವಕರು ಅಗ್ನಿವೀರ್ ನೇಮಕಾತಿಗೆ ಬಹಳಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದು 5/12/22 ರಂದು ಕಂಡು ಬಂದಿದೆ ಮೊದಲನೇ ದಿನವದುದ್ದರಿಂದ 250 ಯುವಕರ ಒಂದು ಗುಂಪುಗಳಂತೆ 1.6km ಓಟವನ್ನು ಮಾಡಿದ್ದೂ ಕಂಡು ಬಂದಿದೆ.
ಅದರಲ್ಲೂ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ (ಕಲಬುರಗಿ) ಹಾಗೂ ಗ್ಲೋಬಲ್ ಸೈನಿಕ ಅಕಾಡೆಮಿ (ಬೀದರ್) ಮತ್ತು ಪೂರ್ವಭಾವಿ ಸೈನಿಕರ ತರಬೇತಿ ಕೇಂದ್ರ (ದೇವದುರ್ಗ)ದ ಅಡಿಯಲ್ಲಿ ತರಬೇತಿಯನ್ನು ಪಡೆದಿರುವ ದೇವದುರ್ಗದ ಸುತ್ತ ಮುತ್ತಲಿನ ಯುವಕರು ಅತಿ ಹೆಚ್ಚು ಅಗ್ನಿವೀರ್ ಗೆ ಆಯ್ಕೆ ಆಗಿರೋದು ವಿಶೇಷವಾಗಿದೆ.
ಒಂದೇ ಸ್ಥಳದಲ್ಲಿ ತರಬೇತಿ ಪಡೆದಿರುವ 60 ಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ 25 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆ ಆಗಿರೋದು ಸಂತೋಷಕರವಾದ ವಿಷಯವಾಗಿದೆ.
ಅಗ್ನಿವೀರ್ ಗೆ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ 15/1/23 ಕ್ಕೆ ನಡೆವುವ ಸಾಮೂಹಿಕ ಪರೀಕ್ಷೆಯಲ್ಲೂ ಸಹ ಆಯ್ಕೆ ಆಗಲಿ ಎಂದು ದೇವದುರ್ಗದ ಜನತೆ ಮಾತ್ರವಲ್ಲದೆ ಕರ್ನಾಟಕದ ಜನತೆಯು ಹಾರೈಸಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
One Response
ಸರ್ ತುಂಬಾ ಚನ್ನಾಗಿ ಮೂಡಿ ಬಂದಿದೆ ಸರ್ ಧನ್ಯವಾದಗಳು