ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಟಕೋಳದ ಪ್ರತಿಷ್ಠಿತ ಎಸ್ ಎಸ್ ವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಡಾ.ಎ.ಎಸ್.ಲಾಲಸಂಗಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ ಮತ್ತು ಪ್ರಾಮಾಣಿಕತೆಯಿಂದ ಯಶಸ್ಸು ಸುಲಭದ ದಾರಿಯನ್ನು ಸರಳಗೊಳಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಮಹಾವಿದ್ಯಾಲಯದ ಆಡಳಿತಾಧಿಕಾರಿಗಳಾದ ಶ್ರೀ ಡಾ.ಪಿ.ಕೆ.ರಾಠೋಡ ಅವರು ಸುಸಂಸ್ಕೃತೆಯಿಂದ ಸೃಜನಶೀಲತೆ ಇಮ್ಮಡಿಗೊಳಿಸುತ್ತದೆ ಅದನ್ನು ರೂಢಿಗತ ಮಾಡಿಕೊಂಡು ನಾಡಿಗೆ ಸಂಸ್ಥೆಗೆ ನಿಮ್ಮ ಸೇವೆ ಅಜರಾಮರವಾಗಲೆಂದು ಆಶಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಎ.ಸಿ.ಸುರಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಜೊತೆಗೆ ಸಿ.ಬಿ.ಕಳಸಪ್ಪನವರ,ಎಮ.ಎಮ.ಅತಾರ,ದೇಸಾಯಿ.ತೋಡಕರ
ಉಪಸ್ಥಿತರಿದ್ದರು.ಪ್ರಾಚಾರ್ಯರಾದ
ಪ್ರೊ.ಎನ್.ಎಮ್
ಜಾಲಿಮರದ ಸ್ವಾಗತಿಸಿ ಪರಿಚಯಿಸಿದರು.ಎಲ್.ಸಿ.ಬಾಂಡೇಕರ ನಿರೂಪಿಸಿದರು.
ವರದಿ-ದಿನೇಶಕುಮಾರ ಅಜಮೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.