ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ ಗಣಪತಿ ಮಂದಿರ,ವಿಠಲನ ರುಕ್ಮಿಣಿ ಮಂದಿರ ,ದುರ್ಗವ್ವ ,ಮರುಗವ್ವ ಹೀಗೆ ಹತ್ತು ಹಲವು ದೇವಸ್ಥಾನಗಳು ಭಕ್ತರ ಪಾಲಿನ ಆಶಾಕಿರಣಯೆಂದರೆ ತಪ್ಪಗಲಾರದು. ಮೋಳೆ ಗ್ರಾಮ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ತಯಾರು ಮಾಡುವ ಕಾರ್ಖಾನೆಯೆಂದರೆ ತಪ್ಪಗಲಾರದು ಇದಕ್ಕೆ ಮೂಲ ಕಾರಣ ನಮ್ಮೂರ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆ ಪ್ರತಿ ವರುಷ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಕಳಿಸುತ್ತಿದೆ ಅದೇ ರೀತಿ ವಿಧ್ಯೆ ಕಲಿಸಿದ ಗುರುಗಳ ಬಗ್ಗೆ ನನ್ನ ಭಾಲ್ಯದ ಬಗ್ಗೆ ಹೇಳಲು ಸಂತೋಷವಾಗುತ್ತಿದೆ. ಅಪರೂಪದಲ್ಲಿ ಅಪರೂಪದ ವೃಕ್ತಿ. ವಿದ್ಯಾರ್ಥಿಗಳ ಪಾಲಿನ ಅಕ್ಷರ ಸಂತ ಜ್ಞಾನಯೋಗಿ ಅಪ್ಪಾಸಾಹೇಬ ಧರ್ಮಣ್ಣ ಬಡಿಗೇರರವರು ಒಬ್ಬರು.
ಮೂಲತ: ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದವರಾದ ಇವರು ಬೇರೆ ಹಳ್ಳಿಗಳಲ್ಲಿ ಸೇವೆ ಮಾಡಿ ಮೋಳೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ಪ್ರಾರಂಭಿಸಿದರು. ಅದು 3 ತರಗತಿಯಿಂದ 7ನೇ ತರಗತಿವರೆಗೆ ಉತ್ತಮ ಗುಣಮಟ್ಟದ ವಿದ್ಯೆ ನೀಡಿದರು.ಇಂದು ಇವರಿಂದ ವಿದ್ಯೆ ಕಲಿತ ಅನೇಕರು ಶಿಕ್ಷಕರಾಗಿ,ವೈದ್ಯರಾಗಿ, ಸೈನಿಕರಾಗಿ ,ರಾಜಕಾರಣಿಗಳಾಗಿ ಕಾರ್ಯ ಮಾಡುತ್ತಿದ್ದಾರೆ. ಪ್ರತಿಯೊಂದು ವಿಷಯವನ್ನು ಮನದಟ್ಟು ಮಾಡುತ್ತಿದ್ದರು ನಮ್ಮಂಥ ದಡ್ಡ ಹುಡುಗರಿಗೆ ಉಟಾ ಬೈಸ್ ಮಾಡುಸುತ್ತಿದ್ದರು ತಪ್ಪು ಮಾಡಿದರೆ ಲಾಠಿಯಿಂದ ಬಡಿಯುತ್ತಿದ್ದರು ಅವರು ಕಲಿಸಿದ ಪಾಠ ಇಂದಿಗೂ ಸಹ ಕಣ್ಣು ಮುಂದೆ ಇದೆ. ಬಡಿಗೇರ ಗುರುಗಳ ಸಹಕಾರ ದೊಡ್ಡದು ವಿಧ್ಯಾರ್ಥಿಗಳ ಬಗ್ಗೆ ಕಾಳಜಿ ಮಾಡುತ್ತಿದ್ದರು ರೋಗ ಲಕ್ಷಣಗಳು ಕಂಡುಬಂದರೆ ವೈದ್ಯರಿಗೆ ತೋರಿಸಿ ಮನೆಗೆ ಕಳಿಸುತ್ತಿದ್ದರು ಪ್ರತಿದಿನ ಹೋಮ್ ವರ್ಕ್ ಮಾಡಬೇಕು ಇಲ್ಲವಾದರೆ ಶಿಕ್ಷೆ ನಿಶ್ಚಿತ ನನಗೆ ಸರಿಯಾಗಿ ತಿಳಿಯುತ್ತಿರಲ್ಲ ನನ್ನ ಬಗ್ಗೆ ಕಳಕಳಿ ಆದರೆ ಇವರ ಹೊಡೆತಕ್ಕೆ ಶಾಲೆ ತಪ್ಪಿಸಿಕೊಳ್ಳಲು ಶಾಲೆಯಲ್ಲಿ ಪುಸ್ತಕ ಬ್ಯಾಗ ಶಾಲೆಯಲ್ಲಿ ಇಟ್ಟು ಸಿದ್ಧೇಶ್ವರ ಗುಡಿಯಲ್ಲಿ ಮಂಗನ ಆಟ ಆಡುವುದು ಶಾಲೆ ಬಿಡುವ ವೇಳೆಯಲ್ಲಿ ಶಾಲೆಗೆ ಬಂದು ಬ್ಯಾಗ ತೆಗೆದುಕೊಂಡು ಹೋಗುವುದು. ಏಕೋ ಎಲ್ಲಿಗೆ ಹೋಗಿದ್ದಿ ಎಂದು ಕೇಳಿ ಹುಚ್ಚ ನಾಯಿಯಂತೆ ಬಡಿಯುತ್ತಿದ್ದರು ಇವರ ಬಗ್ಗೆ ಅಂಜಿಕೆ ಇತ್ತು ನನ್ನ ಶಾಲಾ ಜೀವನದಲ್ಲಿ ನಾನಾ ತರಹದ ಘಟನೆಗಳು ನಡೆಯುತ್ತಿದ್ದವು ಶಾಲಿ ಮುಂದ ಒಂದು ದೊಡ್ದ ಕೆರೆ ಇತ್ತು ಕುಪ್ಪೆ ಆಟ ನಡೆಯುತ್ತಿತ್ತು. ನನಗೆ ಶಾನುಯೂರ ತಾಂಬೋಳಿ ಹುಡುಗನ ಜೊತೆ ಜಗಳ ಆತು ಯಾವ ಕಾರಣ ಇಲ್ಲದೇ ಜಗಳ ತೆಗೆದ. ಬಡಿದಿದ್ದ ಬಡಿಗೇರ ಗುರುಗಳಿಗೆ ಹೇಳಿದ್ದೆ ಶಾನು ರೂರನನ್ನು ಬಡಿದರು. ಕಬ್ಬಡ್ಡಿ ಆಟ ಆಡುವ ವೇಳೆ ದಾಗ ವಿವೇಕ ಗಾಣಿಗೇರ ಹುಡುಗ ಹಲ್ಲಿನಿಂದ ಕಚ್ಚಿ ಗಾಯ ಮಾಡಿದ್ದ ಹೇಗೆ ಹತ್ತು ಹಲವು ಘಟನೆಗಳು ನೆನಪಿನಲ್ಲಿ ಉಳಿದಿವೆ. ಬಡಿಗೇರ ಗುರುಗಳು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ನೋಡುತ್ತಿದ್ದರು. ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ ಸ೦ಬಳಕ್ಕೆ ಆಶೆ ಪಡದೆ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ಯಂದರೆ ತಪ್ಪಗಲಾರದು ನಾವು ಕಲಿತ ಶಾಲೆ ನೋಡಿದಾಗ ಮನಸ್ಸು ಸಂತೋಷಪಡುತ್ತದೆ. ನಾವು ಕುಳಿತ ಜಾಗ ಊಟ ಮಾಡಿದ ಜಾಗ ಪರೀಕ್ಷೆ ಕುಳಿತ Roll No ನೆನಪಿನ ಅಲೆಗಳಾಗಿ ಬೀಸಿ ಬಿರುಗಾಳಿಯಾಗಿ ಸುಳಿಯುತ್ತದೆ.ಪ್ರಮುಖವಾಗಿ ಕಂಡುಬರುವ ಶಿಕ್ಷಕರಾದ ಕೃಷ್ಣಾ ಮಾಸ್ತರ್ ಸಹ ಎರಡನೇಯ ತರಗತಿಯ ಶಿಕ್ಷಕರು ಶಿಸ್ತಿನ ಸಿಪಾಯಿ ಅವರನ್ನು ಸಹ ನೆನಪಿಸಿ ಕೊಳ್ಳಬೇಕು. ಅಕ್ಷರಗಳು ನೂರಾರು ಸಾವಿರಾರು ಆದರೆ ಬಡಿಗೇರ ಗುರುಗಳು ಕೋಟಿಗೊಬ್ಬರು ಮೇರು ವ್ಯಕ್ತಿತ್ವಕ್ಕೆ ಇವರೇ ಸಾಟಿ. ಎಂದು ಹೇಳುತ್ತಾ ಇವರಿಗೆ ಮತ್ತೊಮ್ಮೆ ಮಗದೊಮ್ಮೆ ಅಭಿನಂದನೆಗಳೊಂದಿಗೆ…
ಲೇಖಕರು:ದಯಾನಂದ ಪಾಟೀಲ ಅಧ್ಯಕ್ಷರು,ಭಾರತೀಯ ಕನ್ನಡ ಸಾಹಿತ್ಯ ಬಳಗ.ಮಹಾರಾಷ್ಟ್ರ