ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ದಾರಿದೀಪವಾದ ಕರುಣಾಮಯಿ ಶ್ರೀ ನಾಮದೇವ ಆಸಂಗಿ ಅವರು ಸದಾಕಾಲ ಧರ್ಮ ಹಾಗೂ ಸಾಮಾಜಿಕ ಕಾರ್ಯಗಳ ಮುಖಾಂತರ ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಸೇವಾ ಕಾರ್ಯ ಮಾಡುವುದರ ಮೂಲಕ ವಿದ್ಯಾರ್ಥಿಗಳ ಪಾಲಿಗೆ ಇವತ್ತು ದಾರಿದೀಪವಾಗಿದ್ದಾರೆ.
ಶ್ರೀನಾಮದೇವ ಆಸಂಗಿ ಅವರು ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯಕ್ಕೆ ಕೇವಲ “”ಒಂದು ವಾಟ್ಸಾಪ್ ಸ್ಟೇಟಸ್ ದಿಂದ “” ಕಾಲೇಜಿನ ವಿದ್ಯಾರ್ಥಿಗಳ ಒಂದು ಶೈಕ್ಷಣಿಕ ದೃಷ್ಟಿಯಿಂದ ಅವರಿಗೆ ಹಾಗೂ ಸಂಸ್ಥೆಗೆ ಉಪಯೋಗ ಆಗಲೆಂದು ಶಿಕ್ಷಣ ಸಂಸ್ಥೆಗೆ 1000 ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಸಂಸ್ಥೆಗೆ ಕೊಟ್ಟಿರುತ್ತಾರೆ,ಅವರ ಒಂದು ಸೇವೆ ನಿಜವಾಗಿಯೂ ಮೆಚ್ಚುವಂಥದ್ದು.
ಕೇವಲ ಒಂದು ವಾಟ್ಸಾಪ್ ಸ್ಟೇಟಸ್ ದಿಂದ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎನ್ನುವುದಕ್ಕೆ ಈ ಒಂದು ಸೇವೆಯೇ ಸಾಕ್ಷಿ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತನಾಡಿ ವೈಯಕ್ತಿಕವಾಗಿ ಹಾಗೂ ಕಾಲೇಜಿನ ಆಡಳಿತ ಮಂಡಳಿ ಪರವಾಗಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸಿದರು.
ವರದಿ: ವಿಶ್ವನಾಥ ಎಸ್ ಹರೋಲಿ