ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಾದಪ್ಪನ
ಹುಂಡಿಯಲ್ಲಿ 2.59 ಕೋಟಿ ನಗದು, 80 ಗ್ರಾಂ ಚಿನ್ನ, ಹಾಗೂ 3.900 ಕೆಜಿ ಬೆಳ್ಳಿ ಸಂಗ್ರಹ
ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಮಲೆ ಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಸ್ವಾಮಿ
ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ದೇವಾಲಯದ ಹುಂಡಿ ತೆರೆಯಲಾಯಿತು ಅಲ್ಲದೆ ಸಿಸಿ ಕ್ಯಾಮೆರಾ ಹಾಗೂ ಪೊಲೀಸ್ ಬಂದೋಬಸ್ತಿನಲ್ಲಿ ಎಣಿಕೆ ಕಾರ್ಯ ರಾತ್ರಿ 10 ತನಕವು ನಡೆಯಿತು ಬಿದ್ದ ಹಣ, ಚಿನ್ನ, ಬೆಳ್ಳಿ ಮುಂತಾದವುಗಳ ಎಣಿಕೆ ನಡೆದಿದ್ದು, ಈ ಬಾರಿ 34 ದಿನದಲ್ಲಿ ಬರೋಬ್ಬರಿ ರೂ.2.59,31,472 ನಗದು, 80 ಗ್ರಾಂ ಚಿನ್ನ, 3.900 ಕೆ.ಜಿ. ಬೆಳ್ಳಿ ಸಂಗ್ರಹವಾಗಿದೆ.
ಡಿಸೆಂಬರ್ 7 ರಂದು ಎಣಿಕೆ ಕಾರ್ಯ ನಡೆಯಿತು. ವಿಶೇಷವಾಗಿ ಕಾರ್ತಿಕ್ ಮಾಸದ ದಿನಗಳಲ್ಲಿ ಹೆಚ್ಚಾಗಿ ಭಕ್ತಾದಿಗಳು ಆಗಮಿಸಿದರು ಅಮಾವಾಸ್ಯೆ ಪ್ರಯುಕ್ತವಾಗಿ ಜನರು ಹೆಚ್ಚಾಗಿ ಮಾದಪ್ಪನ ದರ್ಶನ ಮಾಡಿದರು ನವೆಂಬರ್ 3 ರಿಂದ ಡಿಸೆಂಬರ್ 6 ರ ತನಕ 34 ದಿನಗಳಲ್ಲಿ ಈ ಹಣ ಮತ್ತು ಚಿನ್ನಾಭರಣಗಳು ಹುಂಡಿಗಳಲ್ಲಿ ಸಂಗ್ರಹವಾಗಿದೆ ಎಂದು ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಎಂ.ಬಸವರಾಜು ತಿಳಿಸಿದ್ದಾರೆ.ವರದಿ ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.