ಹನೂರು:ಜಿಲ್ಲೆಗೆ ಆಗಮಿಸುವ ಮೊದಲು ಕ್ಷೇತ್ರವ್ಯಾಪ್ತಿಯ ಮಾದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳ ಸಮಸ್ಯೆಗಳನ್ನ ಮುಖ್ಯಮಂತ್ರಿಗಳು ಆಲಿಸಿ ಬಗೆಹರಿಸಿ ನಂತರ ಅಭಿವೃದ್ಧಿ ಕಾಮಗಾರಿಗಳ ನಡೆಸಲಿ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯನ್ನೂದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆತರುತ್ತಿದ್ದು ಕೆಲವು ಗುದ್ದಲಿ ಪೂಜೆಗಳನ್ನು ಮಾಡಲು
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಚಾಮರಾಜನಗರ ಜಿಲ್ಲೆಗೆ ಆಗಮಿಸುತ್ತಿರುವುದು ಸಂತೋಷದ ವಿಷಯ,ಆದರೆ ಜಿಲ್ಲಾ ವ್ಯಾಪ್ತಿಯ ಬಿಳಿಗಿರಿ ರಂಗನ ಬೆಟ್ಟ, ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿನ ವಿವಿಧ ಪೋಡಿನ ಜನತೆಯ ಸಮಸ್ಯೆಗಳನ್ನು ಸಹ ಆಲಿಸಿ ಬಗೆಹರಿಸಬೇಕು ಎಂದರು ತಿಳಿಸಿದರು.
ಮಹದೇಶ್ವರ ಬೆಟ್ಟಕ್ಕೆ ಸಿಎಂ ಆಗಮಿಸಿದಾಗ ಮಹದೇಶ್ವರ ಬೆಟ್ಟದ ಹೆಲಿಪ್ಯಾಡ್ ಬಳಿ ಕಾಡಂಚಿನ ಗ್ರಾಮಗಳ ಸಮಸ್ಯೆಗಳನ್ನು ಮನವಿ ನೀಡಲು ರೈತ ಮುಖಂಡರಿಗೆ ಅವಕಾಶ ಮಾಡಿಕೊಡಬೇಕು, ಮುಖ್ಯಮಂತ್ರಿಗಳು ನಾಗಮಲೈ ಭವನದಲ್ಲಿ ನಡೆಯುವಂತಹ ಪ್ರಾಧಿಕಾರದ ಸಭೆಯಲ್ಲಿ ಸಮಸ್ಯೆಗಳು ಬಗೆಹರಿಸುವಂತೆ ಒತ್ತಾಯ ಮಾಡಿದರು.
ಹಾಗೂ ಚಂಗಡಿ ಗ್ರಾಮಸ್ಥರ ಸ್ಥಳಾಂತರಕ್ಕೆ ಸಮಯ ವ್ಯರ್ಥಮಾಡುತ್ತಿದ್ದು ಕೂಡಲೇ ಬಗೆಹರಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಗುಂಡೇಗಾಲ ಬಸವಣ್ಣ, ಪಾಳ್ಯ ಶಿವಮೂರ್ತಿ, ಚಂಗಡಿ ಕರಿಯಪ್ಪ, ಮಲೆ ಮಾದೇಶ್ವರ ಬೆಟ್ಟದ ಪ್ರಸಾದ್ ಇನ್ನೂ ಮುಂತಾದವರು ಹಾಜರಿದ್ದರು .
ವರದಿ ಉಸ್ಮಾನ್ ಖಾನ್