ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಣ್ಣ ಕತೆ-ಪುಟ್ಟ ಮಗುವಿನ ದಿಟ್ಟ ಕನಸು

ಒಂದು ಪುಟ್ಟ ಹಳ್ಳಿ ಆ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಕುಂಟುಬ ಈ ಕುಟುಂಬದಲ್ಲಿ ಇಬ್ಬರು ಸತಿಪತಿಗಳು. ಇವರಿಗೆ ಅನೇಕ ವರ್ಷಗಳವರೆಗೆ ಮಕ್ಕಳು ಇರಲಿಲ್ಲ ಅದರ ಸಲುವಾಗಿ ಇವರ ಮನಸ್ಸಿನಲ್ಲಿ ಚಿಂತೆ ಮನೆ ಮಾಡಿತ್ತು ಅದು ಬಹಳ ಬಡ ಕುಟುಂಬವಾಗಿತ್ತು. ಅವರ ಮನೆಯಲ್ಲಿ ಒಂದು ಹೊತ್ತಿನ ಗಂಜಿಗೂ ಗತಿಯಿರಲಿಲ್ಲ ಅವರಿಗೆ ಮಕ್ಕಳಿರದ ಕಾರಣ ಅನೇಕ ದೇವರಿಗೆ ಹರಕೆ ಹೊತ್ತರು ಮುಂದೆ ಎರಡು ವರ್ಷದಲ್ಲಿ ಒಂದು ಹೆಣ್ಣು ಮಗು ಹುಟ್ಟಿದಳು ಆಕೆಗೆ ಈ ದಂಪತಿ ಮಂದಾಕಿನಿ ಎಂದು ಹೆಸರಿಟ್ಟರು. ಮಂದಾಕಿನಿ ಸಣ್ಣವಳಿರುವಾಗಲೆ ಬಹಳ ಚುರುಕು ಬುದ್ಧಿದವಳು 6ವರ್ಷ ಆದ ಕೂಡಲೇ ಶಾಲೆಗೆ ಮೊದಲ ಹೆಜ್ಜೆ ಇಟ್ಟಳು.ಹೊಸ ಜನ ಹೊಸ ಪ್ರಪಂಚ ಹೊಸ ನಿಸರ್ಗ ಪ್ರಾಥಮಿಕ ಶಿಕ್ಷಣ ಪಡೆಯುತ್ತಾ ಗೆಳೆಯ-ಗೆಳೆತಿಯರ ಜೊತೆಗೆ ಎಂಟು ವರ್ಷಗಳು ಕಳೆದವು.
ಹೀಗೊಂದು ವರ್ಷದ ದೀಪಾವಳಿ ಹಬ್ಬ ,ಹಬ್ಬಕ್ಕೆ ಹೊಸ ಬಟ್ಟೆ ತರಲು ತಾಯಿ-ತಂದೆಗೆ ಹೇಳಿದಳು ಆಗ ಅವರು ತಂದೆ ತಾಯಿಯ ಬಳಿ ಹಣ ಇರಲಿಲ್ಲ. ಆದ್ದರಿಂದ ಮತ್ತೊಬ್ಬರಲ್ಲಿ ಸಾಲ ತೆಗೆದು ಮಗಳ ಆಶೆ ಆಕಾಂಷೆಗಳನ್ನು ಪೂರ್ಣ ಮಾಡಿದರು.ಮಂದಾಕಿನಿ 10ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗಿ ಶಾಲೆಗೆ, ಊರಿಗೆ ಮತ್ತು ತಾಯಿ-ತಂದೆಗೆ ಹೆಸರು ತಂದಳು. ಇವಳಿಗೆ ತಾನು ಶಿಕ್ಷಣಾಧಿಕಾರಿ ಆಗ ಬೇಕೆಂಬ ಗುರಿ ಇತ್ತು. ತುಂಬಿದ ಬಡತನ ಕುಟುಂಬ ಬೇಗೆಯಲ್ಲೇ 12ನೇ ಇಯತ್ತೆಯನ್ನು ಚೆನ್ನಾಗಿ ಪಾಸಾದಳು ಇವಳ ಜೀವನದಲ್ಲಿ ಕಷ್ಟದ ಸಮಯ ಬಂತು ಇವಳ ತಾಯಿ ಅನಾರೋಗ್ಯದಿಂದ ತೀರಿಕೊಂಡಳು ಅಪ್ಪನ ಆಶ್ರಯದಲ್ಲಿ ಬೆಳೆದ ಮಂದಾಕಿನಿಗೆ ಚಿಕ್ಕವಳಿರುವಾಗಲೇ ಮನೆ ಕೆಲಸದ ಜವಾಬ್ದಾರಿ ಬಂದಿತು. ಶಾಲೆಯನ್ನು ಮರೆತಳು ಹೊಲದಲ್ಲಿ ಕಳೆ ತೆಗೆಯುವ ಕೆಲಸಕ್ಕೆ ಹೋಗತೊಗತೊಡಗಿದಳು. ದಿನಾಲೂ ಎರಡು ನೂರು ರೂಪಾಯಿ ಕೂಲಿ ಇತ್ತು. ತಂದೆಯ ಜೊತೆಗೆ ಕೆಲಸ ಮಾಡಿ ಸಾಯಂಕಾಲ ಅಭ್ಯಾಸ ಮಾಡುತ್ತಿದ್ದಳು. ಮತ್ತೆ ಇವಳ ಮನಸ್ಸಿನಲ್ಲಿ ಉಚ್ಚ ಶಿಕ್ಷಣ ಪಡೆಯಬೇಕೆಂಬ ಆಸೆ ಹುಟ್ಟಿತು. ಓಪನ್ ಉನಿವರ್ಸಿಟಿಯಿಂದ B. A. ಪ್ರವೇಶ ತೆಗೆದುಕೊಂಡು ಕೆಲಸ ಮಾಡುತ್ತಲೇ ಅಭ್ಯಾಸದಲ್ಲಿ ತೊಡಗಿದ್ದಳು. ಇವಳ ಬಾಲ್ಯ ಜೀವನದ ಗೆಳತಿಯರನ್ನು ನೆನಪು ಮಾಡಿಕೊಳ್ಳತ್ತ ದಿನಗಳು ಕಳೆದವು.
ಮಂದಾಕಿನಿಗೆ IAS. KAS ಪರೀಕ್ಷೆ ಕೊಟ್ಟು ಉಚ್ಚ ಅಧಿಕಾರಿಯಾಗಬೇಕೆಂಬ ಇಚ್ಛೆ ಇತ್ತು. ಆದರೆ ಅದಕ್ಕೆ ಹಣ ಬೇಕು. ತನ್ನ ಪರಿಸ್ಥಿತಿ ಅಷ್ಟೊಂದು ಅನುಕೂಲಕರ ಇರಲಿಲ್ಲ. ಏನು ಮಾಡಬೇಕೆಂದು ತೋಚದೆ ಸದಾ ವಿಚಾರಮಗ್ನಳಾಗಿ ಇರುತ್ತಿದ್ದಳು. ಊರಿನಲ್ಲಿ ಯಾರೂ ಸಹಾಯಕ್ಕೆ ನಿಲ್ಲಲಿಲ್ಲ ದೀಪಾವಳಿ ಹಬ್ಬದ ದಿನ ಸಾಕ್ಷಾತ್ ಪರಮೇಶ್ವರ ಬಂದ ಹಾಗೆ ಅಥವಾ ಪರಮಾತ್ಮನೇ ಒಬ್ಬ ಮನುಷ್ಯ ಕಳುಹಿಸಿದಂತೆ ಒಬ್ಬ ಮನುಷ್ಯ ಅವಳ ಸಹಾಯಕ್ಕೆ ನಿಲ್ಲುತ್ತಾನೆ. ನಮ್ಮೂರ ಜಾಣ ಹುಡುಗಿಯೊಬ್ಬಳು ದೊಡ್ಡ ಕನಸು ಕಾಣುತ್ತಾ ಮನೆ, ತಂದೆಯನ್ನು ನೋಡಿಕೊಳ್ಳುತ್ತ ಅಭ್ಯಾಸ ಮಾಡುತ್ತಿರುವುದನ್ನು ಕಂಡು ಊರ ಹಿರಿಯ ರಾಮೇಗೌಡ ಹಣದ ಸಹಾಯ ಮಾಡುತ್ತಾರೆ. ಮಂದಾಕಿನಿಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಅವಳು ಖುಷಿಯಿಂದ ಎರಡು ವರ್ಷ ಬೆಂಗಳೂರಿನಲ್ಲಿ ಕೋಚಿಂಗ ಕಲಿತು ಪರೀಕ್ಷೆ ಕೊಡುತ್ತಾಳೆ. ಮನ ಬಯಸಿದಂತೆ ತನ್ನ ಗುರಿಯನ್ನು ಮುಟ್ಟುತ್ತಾಳೆ. ಶಿಕ್ಷಣ ಅಧಿಕಾರಿಯಾಗಿ ಜಿಲ್ಲೆಗೆ ರುಜುವಾಗುತ್ತಾಳೆ. ತನ್ನ ಸಣ್ಣ ಊರಿನಲ್ಲಿ ಒಂದು ಒಳ್ಳೆಯ ಶಾಲೆ ಕೂಡ ಇರಲಿಲ್ಲ ಆದ್ದರಿಂದಾಗಿ ಊರಿಗೊಂದು ಶಾಲೆ ಕಟ್ಟಿಸಿದಳು. ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಬ್ಯಾಗ್, ಬಟ್ಟೆಗಳನ್ನು ನೀಡಿದಳು. ತಮ್ಮ ಸುತ್ತಮೂತ್ತಲಿನ ಹಳ್ಳಿಗಳಲ್ಲಿ ಅಲ್ಲಿವೂ ಶಾಲೆಗಳ ಕಡೆಗೆ ಗಮನ ಕೊಡುತ್ತಾ ಒಳ್ಳೆಯ ಕಲಿಕೆ ನೀಡಲು ಶಿಕ್ಷಕರಿಗೆ ಪ್ರೇರಣೆ ನೀಡಿದಳು. ಸುತ್ತಮೂತ್ತಲಿನ ಹಳ್ಳಿಹಳ್ಳಿಗಳಲ್ಲಿ ಮೆಚ್ಚುಗೆಯನ್ನು ಪಡೆದಳು. ಹೀಗೆ ಎರಡೂ ವರ್ಷದಲ್ಲಿ ಉನ್ನತ ಅಧಿಕಾರಿಯಾಗಿ ನಿಂತಳು.
ಒಮ್ಮೆ ತಾನು ಕಲಿತ ತನ್ನೂರಿನ ಶಾಲೆಗೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುವಳು. ತಾನು ಹುಟ್ಟಿ ಬೆಳೆದ ಊರನ್ನು ನೋಡಲು ಬಯಸಿ ಊರಿನಲ್ಲಿ ಬಂದಳು. ಎಲ್ಲರಿಗೂ ಪ್ರೀತಿಯಿಂದ ಮಾತನಾಡಿಸಿ ಮುಂದೆ ಹೋಗುವಾಗ ಎಲ್ಲರೂ ಅವಳತ್ತ ಗೌರವದಿಂದ ನೋಡುತ್ತಿರುವುದು ಕಂಡಾಗ ತನ್ನ ಮೇಲೆಯೇ ಹೆಮ್ಮೆ ಪಟ್ಟಳು. ಮುಂದೆ ಬರಲು ಬಂದಾಗ ಬಾಲಕನೊಬ್ಬ ಅಳುತ್ತ ಕುಳಿತ್ತಿದ್ದನು. ಅವನ ಬಳಿ ಬಂದು, ‘ಏಕೆ ಅಳುತ್ತಿರುವೆ?’ ಎಂದು ಕೇಳುತ್ತಾಳೆ ಆಗ ಆ ಮಗು ಹೇಳುತ್ತಾನೆ ನನ್ನಗೆ ಶಾಲೆ ಕಲಿಯಬೇಕೆಂಬ ಆಸೆ ಇದೆ. ಆದರೆ ಶಾಲೆಗೆ ಹೋಗಲು ಯೋಗ್ಯತೆ ಇಲ್ಲವೆಂದು ಅಪ್ಪಅಮ್ಮ ಶಾಲೆಗೆ ಕಳುಹಿಸದೆ ಕೆಲಸಕ್ಕೆ ಹೋಗು ಎನ್ನುತ್ತಾರೆ ಎಂದು ಹೇಳುತ್ತಾನೆ. ಮಂದಾಕಿನಿ ಆ ಮಗವನ್ನು ಕರೆದುಕೊಂಡು ತಾನು ಕಟ್ಟಿಸಿದ್ದ ಶಾಲೆಗೆ ಹೋಗುತ್ತಾಳೆ. ಕಾರ್ಯಕ್ರಮದಲ್ಲಿ ಊರಿನವರೊಂದಿಗೆ ಸಂದರ್ಶನ ಮಾಡುತ್ತಾಳೆ. ಬಡವರು, ಶ್ರೀಮಂತರು ಎಲ್ಲರೂ ಶಾಲೆ ಕಲಿಯಲೆಬೇಕು. ಶಿಕ್ಷಣ ಪಡೆಯದಿದ್ದರೆ ನಮ್ಮ ಮಕ್ಕಳು ಹಿಂದೆ ಉಳಿಯುತ್ತಾರೆ. ಎಲ್ಲ ತರಹದ ಸಹಾಯವನ್ನು ನಾನು ಮಾಡುತ್ತೇನೆ ಆದರೆ ಊರಿನಲ್ಲಿ ಒಬ್ಬ ಬಾಲಕ ಕೂಡ ಶಿಕ್ಷಣದಿಂದ ವಂಚಿತ ಉಳಿಯಬಾರದು. ಎಂದು ಹೇಳಿ ಹೋಗುವಳು. ಜನರು ತಮ್ಮ ಮಕ್ಕಳಿಗೆ ಶಾಲೆಗೆ ದಾಖಲು ಮಾಡುತ್ತಾರೆ. ಊರಿನ ಎಲ್ಲ ಬಾಲಕರು ಇಂದು ಶಾಲೆಗೆ ಹೋಗುತ್ತಾರೆ. ಶಾಲೆಯ ವಿವಿಧ ಸ್ಪರ್ಧೆಗಳಲ್ಲಿ ತಾಲೂಕಿಗೆ, ಜಿಲ್ಲೆಗೆ ಪ್ರಥಮ ಕ್ರಮಾಂಕದ ಸಾಧನೆಗಳನ್ನು ಮಾಡುತ್ತಿದ್ದಾರೆ. ತಮ್ಮೂರಿನ ಶಾಲಾ ಮಕ್ಕಳ ಸಾಧನೆಯ ಬಗ್ಗೆ ವಿವಿಧ
ಪತ್ರಿಕೆಗಳಲ್ಲಿ ಬರುವ ವಾರ್ತೆ ಓದಿ ತಾನು ಪುಟ್ಟ ಮಗುವಿದ್ದಾಗ ಕಂಡ ದಿಟ್ಟ ಕನಸು ನನಸಾಗುತ್ತಿರುವುದನ್ನು ಕಂಡು ಮಂದಾಕಿನಿಗೆ ಅಭಿಮಾನ ಉಕ್ಕಿ ಬರುತ್ತದೆ.
ಲೇಖಕರು: ಬಾಲ ಸಾಹಿತಿ ಕುಮಾರ ವೀರೇಶ ಚನ್ನಮಲ್ಲಪ್ಪ ಚಲಗೇರಿ, ಬಬಲಾದ ತಾ.ಅಕ್ಕಲಕೋಟ,
ಮಹಾರಾಷ್ಟ್ರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ