ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಕಡು ಬಡವರಿಗೆ ಉಚಿತ ಕಣ್ಣಿನ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸೆ ಮಾಡಿಕೊಡಲಾಗುವುದು ಕಣ್ಣಿನ ಪೊರೆ,ಹಾಗೂ ಕಣ್ಣಿನ ಕಾಯಿಲೆಗಳಾದ ಓರೆ ಕಣ್ಣು ,ಅಕ್ಷಿಪಟಲ ಕಾಯಿಲೆಗಳು ,ಸಕ್ಕರೆ ಕಾಯಿಲೆಯಿಂದ ಉಂಟಾಗುವ ಕಣ್ಣಿನ ತೊಂದರೆಗಳಾದ ಯುವಿಯ, ಆರ್ಬಿಟ್ ನ್ಯೂರೋ ಆರ್ಓ,ಎಲ್ ವಿ ಓ,ಕೆ ಸಿ. ಮುಂತಾದ ಕಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಕ್ಯಾಂಪ್ ಬಿ ಆರ್ ಓ ಆದ ವಿಜಯ್ ಕಾಂತ ತಿಳಿಸಿದರು.
ಈ ಸಂದರ್ಭದಲ್ಲಿ ಬಂಡಳ್ಳಿ ಗ್ರಾಮದ ನೂರಾರು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಲು ಬಂದು ಕಣ್ಣು ತಪಾಸಣೆ ಮಾಡಿಕೊಂಡರು. ಇದರಲ್ಲಿ ಶಸ್ತ್ರ ಆಯ್ಕೆಯಾದ ವ್ಯಕ್ತಿಗಳನ್ನು ಅರವಿಂದ್ ಕಣ್ಣಿನ ತಪಾಸಣಾ ಶಿಬಿರ ಕೇಂದ್ರದಿಂದ ಬಂದಂತಹ ವಾಹನದಿಂದಲೇ ಅರವಿಂದ್ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ವೀರಶೈಲವ ಲಿಂಗಾಯತ ಮುಖಂಡರಾದ ಶಿವನಪ್ಪ ಬೀ. ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್,ಮುಖಂಡರಾದ ಶಿವ ಸ್ವಾಮಿ ದೇವೇಶ ಹಾಗೂ ಕ್ಯಾಂಪ್ ಬಿ ಆರ್ ಓ ವಿಜಯಕಾಂತ್, ಡಾಕ್ಟರ್ ಸುಬ್ಬಲಕ್ಷ್ಮಿ,ಆಶಾ ಕಾರ್ಯಕರ್ತೆಯರು, ಹಾಗೂ ಅಂಗನವಾಡಿ ಕಾರ್ಯಕರ್ತರು,
ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್