ರಾಯಚೂರು ಜಿಲ್ಲೆಯ ಮಸ್ಕಿಯ ನಾಲ್ಕನೇ ವಾರ್ಡಿನ ಕಣಿವೆ ಆಂಜನೇಯ ದೇವಸ್ಥಾನದ ಹಿಂದುಗಡೆ ಇರುವ ಪುರಾತನವಾದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನವು ಸಂಪೂರ್ಣವಾಗಿ ಕಸ ಕಡ್ಡಿ ಜಾಲಿ ಗಿಡಗಳಿಂದ ರಸ್ತೆಗಳಿಲ್ಲದೆ ದೇವಸ್ಥಾನವು ಮುಚ್ಚಿ ಹೋಗಿತ್ತು. ಹಾಗಾಗಿ ಅಭಿನಂದನ್ ಸಂಸ್ಥೆಯ ನಿರಂತರ ಸಂಡೇ ಫಾರ್ ಸೋಶಿಯಲ್ ವರ್ಕ್ ಸೇವಾ ಕಾರ್ಯದ ಅಡಿಯಲ್ಲಿ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಜಾಲಿ ಗಿಡಗಳನ್ನು, ಕಸ ಕಡ್ಡಿಗಳನ್ನ ತೆಗೆದುಹಾಕಿ ನೂರಕ್ಕೂ ಅಧಿಕ ಮೆಟ್ಟಿಲುಗಳಿಗೆ ಸುಣ್ಣ ಬಣ್ಣವನ್ನು ಹಚ್ಚುವ ಮೂಲಕ ನೆನಗುದಿಗೆ ಬಿದ್ದಿರುವ, ಅವನತಿಯ ಅಂಚಿನಲ್ಲಿರುವ ಪುರಾತನ ದೇವಸ್ಥಾನಗಳ ಸಂರಕ್ಷಣೆಗೆ ಸದಾ ಕಾಲವು ಅಭಿನಂದನ ಸಂಸ್ಥೆಯು ಸಿದ್ಧವಾಗಿದ್ದು ನಮ್ಮ ಮಸ್ಕಿಯ ಸೌಭಾಗ್ಯ ಎಂದು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕಾಳಪ್ಪ ಕಣ್ಣೂರು ಹೇಳಿದರು.
ಈ ಸೇವಾ ಕಾರ್ಯದಲ್ಲಿದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ್ ಬಡಿಗೇರ್, ಜಾಫರ್ ಮಿಯಾ,ಯಂಕೋಬ,ಕಿಶೋರ್ ಹಾಗೂ ಸ್ಥಳೀಯ ನಿವಾಸಿ ಕೆಂಚಮ್ಮ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.