ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆಜಾದ್ ನಗರದವಾಸಿಗಳು, ಶಿಳ್ಳೇಕ್ಯಾತ ಸಮುದಾಯದ ಮಹಿಳಾ ಮುಖಂಡರು, ಹಣ್ಣಿನ ವ್ಯಾಪಾರಿಗಳಾದ ಗೌರಮ್ಮ ಶಿಂಧೆಯವರ ಮನೆಯಲ್ಲಿ, ಪರಿಸರ ಸ್ನೇಹಿ ಮೈದಾ ಹಿಟ್ಟಿನ ಗಣಪ ಪ್ರತಿಷ್ಠಾಸಿ ಆರಾಧಿಸಲಾಯಿತು. ವಿಶೇಷವೆಂದರೆ ಈ ಪುಟ್ಟ ಬಾಲಗಣಪ ಮೂರ್ತಿಯನ್ನು ಗೌರಮ್ಮರವರ ಮೊಮ್ಮಕ್ಕಳು ಹಿಟ್ಟಿನಿಂದ ತಯಾರಿಸಿದ್ದಾರೆ. ಅವರೇ ಮೈದಾ ಹಿಟ್ಟಿನಿಂದ ತಯಾರಿಸಿದ ಗಣಪ ಮೂರ್ತಿಗೆ ಪರಿಸರ ಸ್ನೇಹಿ ಬಣ್ಣ ಹಾಗೂ ಅಲಂಕಾರ ಸಾಮಾಗ್ರಿಗಳನ್ನ ಬಳಸಿ ಅಂತಿಮ ಸ್ಪರ್ಶ ನೀಡಲಾಗಿತ್ತು. ಧಾರ್ಮಿಕ ಹಾಗೂ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ, ಗಣೇಶ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲಾಯಿತು. ಆಧುನಿಕ ಭರಾಟೆಯಲ್ಲಿ ಪಿಒಪಿ ಗಣಪಗಳ ಅಬ್ಬರದಲ್ಲಿ, ಅತ್ಯಂತ ಸರಳ ಹಾಗೂ ಪರಿಸರ ಸ್ನೇಹಿ ಗಣಪವನ್ನು ಪ್ರತಿಷ್ಠಾಪಿಸಿದ್ದು ಮಕ್ಕಳಪರಿಸರ ಹಾಗೂ ಧಾರ್ಮಿಕ ಪ್ರಜ್ಞೆ ಆದರ್ಶನೀಯ ಅನುಕರಣೀಯವಾಗಿದೆ, ಅದಕ್ಕಾಗಿ ಪಟ್ಟಣದ ಧಾರ್ಮಿಕ ಶ್ರದ್ಧಾವಂತರು ಆಸ್ಥಿಕರು ನಾಗರೀಕರು ಪ್ರಜ್ಞಾವಂತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.