ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪುದುರಾಮಪುರ ಗ್ರಾಮಕ್ಕೆ ಸುಮಾರು 90 ವರ್ಷಗಳಿಂದ ಬಸ್ ವ್ಯವಸ್ಥೆ ಕಾಣದ ಗ್ರಾಮವಾದ್ದು, ದಿನನಿತ್ಯ ಸಾರ್ವಜನಿಕರು,ಶಾಲಾಮಕ್ಕಳು ಪರುದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಆದ್ದರಿಂದ ನಾವು ರೈತ ಸಂಘಕ್ಕೆ ಸೇರಿ ನಮ್ಮ ಗ್ರಾಮದಲ್ಲಿ ಉದ್ಘಾಟನೆ ಮಾಡಿ ನಂತರ ನಮ್ಮ ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಎಲ್ಲರೂ ಒಟ್ಟಾಗಿ ಸೇರಿ ಸಾರಿಗೆ ಇಲಾಖೆಗೆ ನಾವು 2ತಿಂಗಳ ಹಿಂದೆ ಮನವಿ ಮಾಡದ್ದೆವು
ಇದರಿಂದ ನಮ್ಮ ಮನವಿಗೆ ಸ್ಪಂದಿಸಿ ಸಾರಿಗೆ ವ್ಯವಸ್ಥೆಯನ್ನು ದಿ :11/12/22 ರಂದು ಮಾಡಿ ಕೊಟ್ಟಿದ್ದಾರೆ. ಈ ಬಸ್ಸು ಅಜ್ಜೀಪುರ, ಅಂಬಿಕಾಪುರ, ನಾಗಣ್ಣ ನಗರ, ಪುದುರಾಮಪುರ, ಪಳನಿಮೆಡು, ರಾಮಾಪುರ ಮಾರ್ಗವಾಗಿ ಸಂಚಾರಿಸುತ್ತದೆ,ಸಾರ್ವಜನಿಕರು ಹಾಗೂ ಶಾಲಾಮಕ್ಕಳಿಗೆ ಅನುಕೂಲವಾಗಿಗೆ ಎಂದು ಗ್ರಾಮಸ್ಥರು ತಿಳಿಸಿದರು.
ಇದೆ ವೇಳೆ ಗ್ರಾಮಕ್ಕೆ ಬಂದ ಬಸ್ಸಿಗೆ ಹೂವಿನ ಅಲಂಕಾರ ಮಾಡಿ,ಪೂಜೆ ಮಾಡಿ ಸಿಹಿ ಹಂಚಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗಂಗನ ದೊಡ್ಡಿ ಗ್ರಾಮದ ಘಟಕದ ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್, ಕಾಂಚಳ್ಳಿ ಘಟಕದ ಅಧ್ಯಕ್ಷ ಬಸವರಾಜು, ಕನಕ, ಪಳನಿ ಸ್ವಾಮಿ,ಕುಮಾರ್, ಶಕ್ತಿವೇಲು, ರವಿಚಂದ್ರನ್ ಹಾಗೂ ರೈತ ಮುಖಂಡರು, ಶಾಲಾ ಮಕ್ಕಳು, ಗ್ರಾಮಸ್ಥರು ಹಾಜರಿದ್ದರು.
ನಮ್ಮ ಗ್ರಾಮಕ್ಕೆ ಹಲವು ವರ್ಷಗಳಿಂದ ಬಸ್ ಸಂಚಾರ ಇರಲಿಲ್ಲ, ರೈತ ಸಂಘ ದಿಂದ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದೆವು,ಎಚ್ಚೆತ್ತ ಸಾರಿಗೆ ಇಲಾಖೆ ನಮ್ಮ ಮನವಿಗೆ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಿದೆ.ಸಾರಿಗೆ ಇಲಾಖೆಗೆ ಅಭಿನಂದನೆಗಳು.
ವೇಲುಸ್ವಾಮಿ
ಕರ್ನಾಟಕ ರಾಜ್ಯ ರೈತ ಸಂಘ ಪುದುರಾಮಪುರ ಘಟಕದ ಅಧ್ಯಕ್ಷರು ತಿಳಿಸಿದ್ದಾರೆ.
ವರದಿ:ಉಸ್ಮಾನ್ ಖಾನ್