ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ಯ ಧ್ವಜಾರೋಹಣ ಮತ್ತು ಶ್ರೀ ವಿಶ್ವಕರ್ಮ ಜಯಂತಿ ಅಚರಣೆ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕ ಆಡಳಿತ ಕಛೇರಿಯ ವತಿಯಿಂದ ಕಚೇರಿ ಮುಂಭಾಗದಲ್ಲಿ ಅಮರೇಶ್ ಜಿ ಕೆ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ಯ ಧ್ವಜಾರೋಹಣವನ್ನು ನೆರವೇರಿಸಿದ ನಂತರ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಜಯಂತಿ-2024ನ್ನು ಆಚರಿಸಲಾಯಿತು. ಶ್ರೀ ವಿಶ್ವಕರ್ಮರ ಹಾಗೂ ಸರ್ಧಾರ್ ವಲ್ಲಭಾಯಿ ಪಟೇಲ್ ಭಾವಚಿತ್ರಗಳಿಗೆ ಪುಪ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಸಮಾಜದ ಸ್ವಾಸ್ತ್ಯವನ್ನು ಕಾಪಾಡಲು ಸರ್ಕಾರದಿಂದ ಜಯಂತಿಗಳ ಆಚರಣೆಗಳನ್ನು ಪ್ರಾರಂಭಿಸಲಾಗಿದ್ದು, ನಾವು ಬರೀ ಭೌತಿಕವಾಗಿ ಆಚರಿಸದೇ ಅವರು ಮನುಕುಲಕ್ಕೆ ನೀಡಿದ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ.ಯಾರಿಗೆ ಹುಟ್ಟು ಮತ್ತು ಸಾವು ಇರುತ್ತವೋ ಅವರ ಜಯಂತಿ ಆಚರಿಸುತ್ತೇವೆ. ಆದರೆ ದೈವಾಂಶ ಸಂಭೂತರಾದ ವಿಶ್ವಕರ್ಮರ ಜಯಂತಿ ಎನ್ನದೇ ವಿಶ್ವಕರ್ಮೋತ್ಸವ ಎನ್ನುವುದು ಸೂಕ್ತವಾಗಿದೆ. ಮಾಂಗಲ್ಯ ಸೂತ್ರದಿಂದ ಹಿಡಿದು, ರಥೋತ್ಸವಗಳು, ಎಲ್ಲರೂ ಪೂಜಿಸುವ ದೈವಗಳ ಮೂರ್ತಿಗಳ ನಿರ್ಮಿಸುವುದು, ರೈತರ ಕೃಷಿಗೆ ಬೇಕಾದ ಉಪಕರಣಗಳ ನಿರ್ಮಿಸುವುದು ಹೀಗೆ ವಿಶ್ವಕರ್ಮ ಜನಾಂಗದವರ ಕಸುಬಿನ ವ್ಯಾಪ್ತಿಯು ವಿಸ್ತಾರವಾಗಿದೆ. ಇದನ್ನು ಬರೀ ಜಾತಿಗೆ ಸೀಮಿತಗೊಳಿಸದೇ ಇಂಜಿನಿಯರ್, ವೈಧ್ಯರು,ಡಾಕ್ಟರ್ ಹೀಗೆ ಎಲ್ಲಾ ಕುಶಲಕರ್ಮಿಗಳನ್ನು, ತಂತ್ರಜ್ಞರನ್ನು ಸೇರಿಸಿ ಸಾಂಸ್ಕೃತಿಕ ಶ್ರೀಮಂತಿಕೆಗೊಳಿಸಬೇಕಿದೆ.

ಭಾರತಕ್ಕೆ ಆಗಸ್ಟ್-15 1947 ರಲ್ಲಿ ಸ್ವಾತಂತ್ರ್ಯ ಬಂದರೆ ಹೈದ್ರಾಬಾದ್ ಪ್ರದೇಶದಲ್ಲಿ ಆಳ್ವಿಕೆ ಮಾಡುತ್ತಿದ್ದ ನಿಜಾಮನು ಒಕ್ಕೂಟ ವ್ಯವಸ್ಥೆಗೆ ಒಳಪಡದೇ ಇದ್ದುದರಿಂದ ಈತನು ಸಂರಕ್ಷಣೆ ಮಾಡಿದ್ದ ರಜಕಾರರಿಂದ ಈ ಭಾಗದಲ್ಲಿ ಜನರು ಅನೇಕ ತೊಂದರೆಯನ್ನು ಅನುಭವಿಸಿದರು.ನಿಜಾಮರ ಆಳ್ವಿಕೆಯಿಂದ ಬಿಡುಗಡೆ ಹೊಂದಲು ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು ಅದರಲ್ಲಿ ಪ್ರಮುಖವಾಗಿ ಸ್ವಾಮಿ ರಮಾನಂದ ತೀರ್ಥರು, ಕಿಶನ್ ರಾವ್, ರಾಮಚಂದ್ರ ,ವೀರಪ್ಪ, ಯತ್ತಿ, ನಾಗಪ್ಪ, ಜಯದೇವಿ ತಾಯಿ ಲಿಗಾಡೆ, ಮಲ್ಲಪ್ಪ-ಕಾರಟಗಿ, ನಾಗಪ್ಪ-ರಾಯಚೂರು ಹೀಗೆ ಅನೇಕ ಮಹನೀಯರ ಮುಂದಾಳತ್ವದಲ್ಲಿ ಹೋರಾಟ ನಡೆದು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಬೀದರ್ ಜಿಲ್ಲೆ ಗೋರಟಗಿಯಲ್ಲಿ ನಿರ್ಮಿಸಿರುವ 200 ಜನರ ಪ್ರಾಣಾರ್ಪಣೆ ಮಾಡಿದವರ ಸ್ಮಾರಕವನ್ನು ಇಂದಿಗೂ ಕಾಣಬಹುದಾಗಿದೆ. ನಾವೆಲ್ಲರೂ ಶ್ರದ್ಧೆ ಮತ್ತು ಉತ್ಸಾಹದಿಂದ ಇಂತಹ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ವಿಮೋಚನಾಕಾರರನ್ನು ಸ್ಮರಿಸಿಕೊಳ್ಳಬೇಕಿದೆ ಎಂದು ಡಾ.ಸುಭಾಸ್ ಚಂದ್ರಭೋಸ್ ಆಂಗ್ಲ ಭಾಷೆಯ ಉಪನ್ಯಾಸಕರು ವಿಶೇಷ ಉಪನ್ಯಾಸವನ್ನು ನೀಡಿದರು.
ಹೈದ್ರಾಬಾದ್ ಕರ್ನಾಟಕಕ್ಕೆ 1 ವರ್ಷ ತಡವಾಗಿ ಸ್ವಾತಂತ್ರ್ಯ ಸಿಕ್ಕಿರುವ ಕಾರಣ ನಾವು “ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ” ಎಂದೂ, ಇತ್ತೀಚಿನ ದಿನಗಳಲ್ಲಿ “ಕಲ್ಯಾಣ ಕರ್ನಾಟಕ ಉತ್ಸವ” ಎಂದು ಆಚರಿಸುತ್ತಿದ್ದೇವೆ. ಈ ಮೂಲಕ ನಿಜಾಮರ ಆಳ್ವಿಕೆಯಿಂದ ವಿಮೋಚನೆಗೆ ಹೋರಾಡಿ ಮಡಿದ ವೀರರ, ಹೋರಾಟಗಾರರ ಸ್ಮರಿಸುವ ದಿನವಾದ ಇಂದು ನಾವೆಲ್ಲರೂ ಅವರಿಗೆ ಋಣಿಯಾಗಿದ್ದೇವೆ. ಹಾಗೂ ಇಂದು ಸಮಾಜದಲ್ಲಿ ತಮ್ಮದೇ ಆದ ಕಾಯಕದ ಮೂಲಕ ಶ್ರಮಿಕ ವರ್ಗವಾಗಿರುವ ವಿಶ್ವಕರ್ಮರು ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಬೇಕಿದೆ ಎಂದು ಅಮರೇಶ್ ಜಿ ಕೆ ತಹಶೀಲ್ದಾರರು ಅಧ್ಯಕ್ಷತೆ ವಹಿಸಿ ಶುಭಕೋರಿದರು.
ಕಾರ್ಯಕ್ರಮದಲ್ಲಿ ಡಾ.ಬಿ ಆನಂದಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು, ವಿಜಯಕುಮಾರ್ ಹೆಚ್. ಎಡಿ ನರೇಗಾ ಯೋಜನೆ, ನಿಂಗಪ್ಪ ಇಸಿಒ, ಅಜ್ಜಪ್ಪ ಸಿ. ವಿಶ್ವಕರ್ಮ ಸಮಾಜದ ಸಂತೋಷ, ಕಾಳಾಚಾರಿ, ಶಿಕ್ಷಣ ಇಲಾಖೆಯ ಬಿ ಆರ್ ಪಿ,ಸಿ ಆರ್ ಪಿ ಗಳಾದ ಅಜ್ಜಯ್ಯ, ಅಣಜಿ ಸಿದ್ದಲಿಂಗಪ್ಪ, ಸಂದೀಪ, ರವಿಕುಮಾರ, ಕೊಟ್ರೇಶಿ, ದುರುಗಪ್ಪ, ಮಹಾಂತೇಶ, ಷಣ್ಮುಖಪ್ಪ, ವಿಶಾಲ, ಗಿರಿಜ, ಹಾಲಸ್ವಾಮಿ ಕಂದಾಯ ನಿರೀಕ್ಷಕರು, ಹರೀಶ ಗ್ರಾ.ಆ.ಅ, ಕಛೇರಿಯ ಸಿಬ್ಬಂದಿ ಹಾಜರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ