ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ನಿವೇಶನ ಇಲ್ಲದೆ ಖಾಲಿ ಜಾಗಗಳಲ್ಲಿ ಗುಡಾರ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿವೇಶನ ಹಂಚಿಕೆ ಪತ್ರ ನೀಡುತ್ತಿದ್ದು. ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಬಹುದು. ಇದರಿಂದ ಬುಡಕಟ್ಟು ಸಮುದಾಯದ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದಾಗಬೇಕು ಎಂದು ಶಾಸಕ ಶರಣಬಸಪ್ಪ ಗೌಡ ದರ್ಶನಪುರ ಅವರ ಹೇಳಿದರು.
ಶಹಾಪುರ ತಾಲೂಕಿನ ಮೂಡಬೂಳ ಗ್ರಾಮದ ೪೫ ಕುಟುಂಬ ನಿರಾಶ್ರಿತರ ನಿವೇಶನ ಇಲ್ಲದೆ ಬುಡಕಟ್ಟು ಜನಾಂಗದವರಿಗೆ ಹಕ್ಕು ಪತ್ರ ನೀಡಿ ಮಾತನಾಡಿದರು. ರಾಜೀವ್ ಗಾಂಧಿ ನಿಗಮದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಿ ಕೊಡುವ ಪ್ರಯತ್ನ ಮಾಡಲಾಗುತ್ತಿದೆ.ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಬೇಕು ಎಂದು ಹೇಳಿದರು. ಬುಡಕಟ್ಟು ಜನಾಂಗದವರಿಗೆ ಕಾಂಗ್ರೆಸ್ ಸರ್ಕಾರ ಕಾರ್ಯ್ ಯೊಜನೆಗಳು ಜಾರಿಗೆ ತಂದು ಬುಡಕಟ್ಟು ಕೋಶ ಸ್ಥಾಪನೆ ಮಾಡಿದ್ದು ಅಲೆಮಾರಿಗಳ ಶ್ರೇಯೋಭಿವೃದ್ಧಿಗಾಗಿ ಎಂದು ಶರಣಬಸಪ್ಪ ಗೌಡ ದರ್ಶನಪುರ ಹೇಳಿದರು.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ರಾಘವೇಂದ್ರ,ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿಗಳು ಶರಣಪ್ಪ ಬಳಬಟ್ಟಿ,ತಾಲೂಕ ವಿಸ್ತರಣೆ ಅಧಿಕಾರಿಗಳಾದ ಸಿ.ಜಿ.ಚೌದ್ರಿ,ಸಾಯಬಣ್ಣ ಪುರ್ಲೆ ಸೇರಿದಂತೆ ಮೂಡಬೂಳ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ-ರಾಜಶೇಖರ ಪಾಟೀಲ್,ಶಹಾಪುರ