ರಾಯಚೂರು ಜಿಲ್ಲೆಯ ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಅರಣ್ಯ ಇಲಾಖೆಗೆ ನೂತನವಾಗಿ ನೇಮಕಾತಿಯಾದ ಅರಣ್ಯ ಸಿಬ್ಬಂದಿಗಳು ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.ಮತ್ತು ಹೆಚ್ಚು ಆಸಕ್ತಿವಹಿಸಿ ಈ ಮರ ಮಹತ್ವ ಮತ್ತು ಚಿಗುರುವಿಕೆಯ ಬಗ್ಗೆ ಮಾಹಿತಿ ತಿಳಿದುಕೊಂಡರು.
ಈ ಸಂದರ್ಭದಲ್ಲಿ ವನಸಿರಿ ಅಮರೇಗೌಡ ಮಲ್ಲಾಪೂರ ಅವರು ಅರಣ್ಯ ಇಲಾಖೆಯ ನೂತನ ಸಿಬ್ಬಂದಿಗಳಿಗೆ ರೈತನೋರ್ವ ಕಡಿದು ಹಾಕಿದ ಆಲದ ಮರವನ್ನು ತಂದು ನೆಡಲಾಗಿದೆ ಮತ್ತು ಈ ಮರ ಕೇವಲ ಐದು ತಿಂಗಳುಗಳಲ್ಲೇ ಚಿಗುರೊಡೆದಿದೆ ಇದಕ್ಕೆ ಕಾರಣ ನಮ್ಮ ವನಸಿರಿ ಫೌಂಡೇಶನ್ ತಂಡದ ಸದಸ್ಯರ ಪರಿಶ್ರಮ ಮತ್ತು ಕಾಳಜಿ ಅಂತ ಹೇಳಲಿಕ್ಕೆ ಇಷ್ಟ ಪಡುತ್ತೇನೆ ಯಾವುದೇ ಒಂದು ಮರವನ್ನು ತೆಗೆದುಕೊಂಡಾಗ ಅದಕ್ಕೆ ಜೀವವಿದೆ ಎಂಬುದನ್ನು ನಾವುಗಳೆಲ್ಲರೂ ತಿಳಿದುಕೊಂಡಿದ್ದೇವೆ.ಆದರೆ ಕಡಿದು ಹಾಕಿದ ಮರ ಮತ್ತೆ ಚಿಗುರುವುದು ಸಾಮಾನ್ಯ ಅಲ್ಲ.ಯಾಕೆಂದರೆ ಅದಕ್ಕೆ ಬೇರುಗಳಿರುವುದಿಲ್ಲ ಮತ್ತು ಇದೇ ಆಲದ ಮರವನ್ನು ತಂದು ಹಚ್ಚಲಿಕ್ಕೆ ಕಾರಣವೇನೆಂದರೆ ಒಂದು ಆಲದ ಮರ ಸಾವಿರ ಜನರಿಗೆ ಆಮ್ಲಜನಕ ನೀಡುವ ಸಾಮರ್ಥ್ಯವನ್ನು ಹೊಂದಿದೆ ಅದಕ್ಕೆ ಈ ಮರವನ್ನು ತಂದು ಹಚ್ಚಲಾಯಿತು ಮತ್ತು ಜನರಿಗೂ ಕೂಡ ಒಂದು ಮರದ ಮಹತ್ವವನ್ನು ತಿಳಿಸಬೇಕಾಗಿತ್ತು. ಆದ್ದರಿಂದ ಈ ಮರವನ್ನು ನೆಟ್ಟಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪೂರ, ಗಿರಿಸ್ವಾಮಿ ಹೆಡಗಿನಾಳ,ವೆಂಕಟರಡ್ಡಿ ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.