ಮುಂಬಯಿ ಮಹಾನಗರದ ಸಾಹಿತಿ ಶ್ರೀವಿಶ್ವೇಶ್ವರ ಮೇಟಿಯವರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಭಾಷೆಯ ಬಗ್ಗೆ ಅಭಿಮಾನ ಗೌರವ ಹೊಂದಿರುವ ಇವರ ೩ ಕೃತಿಗಳು ಬಿಡುಗಡೆಯಾಗಿ ಕನ್ನಡಿಗರ ಮಡಲಿಗೆ ಅಪ್ಪಿಕೊಂಡಿವೆ. ಅದೇ ರೀತಿ ೩ ಕೃತಿಗಳು ಬಿಡುಗಡೆಯ ಹಂತದಲ್ಲಿ ಇವೆ. ತಮ್ಮ ಕಾಯಕಗಳ ನಡುವೆ ಕೂಡ ಸಾಹಿತ್ಯಕ್ಕೆ ಒತ್ತು ನೀಡುತ್ತಿರುವ ಮೇಟಿಯವರ ಈಗ ಮತ್ತೆ ಮದುವೀಗೆ ಬಂದಾಕಿ ಕವನ ಸಂಕಲನ ಬಿಡುಗಡೆಯಾಗಿದೆ.
ನಾವು ನಡೆಯುತ್ತಿದ್ದೇವೆ ಇಪ್ಪತ್ತೊಂದನೆಯ ಶತಮಾನದಲ್ಲಿ.
ಭಾಷೆ ಭಾಷೆಗಳ ದ್ವೇಷಗಳ ನಡುವೆ
ಧರ್ಮ ಧರ್ಮಗಳ
ಕಿಚ್ಚಿನೊಡನೆ ದೇಶ ಒಡೆಯುವ ಸಂಚಿನೊಡನೆ,
ದೇಶದಲ್ಲಿ ಇಂದು ನಡೆಯಬಾರದ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಭಾಷೆಯ ಹೆಸರಲ್ಲಿ ದಬ್ಬಾಳಿಕೆ ನಡೆಯುತ್ತಿರುವುದು ವಿಷಾದನೀಯ ಅದರ ಜೊತೆಯಲ್ಲಿ ಜಾತಿ ಜಾತಿಗಳ ನಡುವೆ ಕೋಮು ಗಲಭೆ ಸಂಚು ಮಾಡಿ ಕೊಲೆ ಸುಲಿಗೆ ಮಾಡಿ ಜನ ಸಾಮಾನ್ಯರನ್ನು ಬೀದಿಗೆ ನಿಲ್ಲಿಸುವ ಕುತಂತ್ರ ನಡೆಯುತ್ತಿದೆ ಇದರ ಲಾಭ ಪಡೆದು ಅಧಿಕಾರಕ್ಕೆ ಬರುವ ರಾಜಕಾರಣಿಗಳು, ಒಂದು ಧರ್ಮವನ್ನು ಕಟ್ಟಿ ಮತ್ತೊಂದು ಧರ್ಮಕ್ಕೆ ಸಹಾಯ ಮಾಡುವ ರಾಜಕಾರಣಿಗಳನ್ನು ಇಂದು ಕಾಣುತ್ತಿದ್ದೇವೆ. ತಮ್ಮ ಸ್ವಾರ್ಥಗೋಸ್ಕರ ಜನರನ್ನು ಬಲಿ ನೀಡುತ್ತಿರುವುದು ಏಕೆಂದರೆ ರಕ್ತ ಹರಿಯಬೇಕು ರಕ್ತದ ಹೆಸರಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎಂಬ ಹಪಾಪಪಿ ಇದು ದೇಶದ ದುರಂತ ಎಲ್ಲಾ ಧರ್ಮದ ಜನರನ್ನು ಸಮಾನವಾಗಿ ನೋಡಿಕೊಳ್ಳಬೇಕಾಗಿದೆ. ಆದರೆ ರಾಜಕಾರಣಿಗಳು ಕೋಮುಗಲಭೆಗಳಿಗೆ ಇವರೇ ಕಾರಣರು ಇವರು ಮಾಡುತ್ತಿರುವುದು ಏನು? ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಕೆಲಸ ಮಾಡದೆ ಜಾತಿ ಭಾಷೆಗಳ ನಡುವೆ ಕಿಚ್ಚು ಹೆಚ್ಚುವ ರಾಜಕಾರಣಿಗಳಿಂದ ಎಚ್ಚರಿಕೆಯಿಂದ ಇರಬೇಕಾಗಿದೆ.
ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ ನಾಡು ನಮ್ಮದು.
ಹೇಳಿದರು ನಮ್ಮ ಹಿರಿಯರು ಅದಕ್ಕೆಲ್ಲಾ ಪುರಾವೆಗಳಿತ್ತರು.
ನಾನ್ಯ ದೇವ ಕರ್ನಾಟಕದವನು ಇದಕ್ಕೆ ರುಜುವಾತು ಆಗಿರುವುದು ಅಷ್ಟೇ ಸತ್ಯ ಅವನ ಹೆಸರು ಸೂಚಿಸುವಂತೆ ನನ್ನೇಯ ಎಂದರೆ ದ್ರಾವಿಡ ಭಾಷೆಯಲ್ಲಿ ಪ್ರೀತಿ ಪ್ರಿಯ ಬಲವು ಎಂದಾಗಿ ನಾನ್ಯದೇವ ಕರ್ನಾಟಕದವನು ರುಜುವಾತು ಪಡಿಸಿದೆ. ಚಲದೋಳ್ ದುಯೋಧನಂ ನನ್ನಿಯೋಳಿನ ತನಯಂ ಗಂಡಿ ನೋಳ್ ಭೀಮಸೇನ ಪದಪ್ರಯೋಗ ಕನ್ನಡ ಭಾಷೆಯಲ್ಲಿ ಅಪೂರ್ವ ನೇಪಾಳದ ತೆರಾರಿ ಬಿಹಾರಿನ ಚಂಪಾರಣ ಸಿಂಹರಾಯ ಪೂರ (ಅಥವಾ ಸಿಂಹರಾನ ರಾಜಧಾನಿ ಮಾಡಿಕೊಂಡ ಕೀರ್ತಿ ನ್ಯಾಣ ದೇವನಿಗೆ ಸಲ್ಲುತ್ತದೆ ಕೊನೆಯ ರಾಜ ಹರಿ ಸಿಂಹ ದೇವವOಶದವರಿಗೆ ಕರ್ನಾಟಕ ಭೂಷಣ ಕರ್ನಾಟಕ ಕುಲ ಶ್ರೇಷ್ಠ ಎಂದು ಶಾಸನದಲ್ಲಿ ಉಲ್ಲೇಖವಿದೆ. ಕನ್ನಡಿಗರಾದ ನಾವು ನಮ್ಮ ಕರ್ನಾಟಕ ನಮ್ಮ ನಾಡು ಕರ್ನಾಟಕ ನಮ್ಮ ಭಾಷೆ ಕರ್ನಾಟಕ ಎದೆತಟ್ಟಿ ಹೇಳಿದರೆ ತಪ್ಪೀನು? ಸೋಮೇಶ್ವರರು ತಮಿಳುನಾಡಿನ ಕಣ್ಣ ನೂರ ಪ್ರದೇಶವನ್ನು ಆಳ್ವಿಕೆ ಮಾಡಿದ ತಮಿಳುನಾಡಿನ ಶಾಸನದಲ್ಲಿ ಕನ್ನಡ ಅಕ್ಷರದಲ್ಲಿ ತಮ್ಮ ಅದಿ ಬಿರುದು ಮಲೇಪೆರೋಲ್ ಗಂಡ ಕೆತ್ತಿ ಕನ್ನಡ ಪ್ರೇಮ ಶಾಶ್ವತಗೊಳಿಸಿದ್ದಾರೆ. ಇನ್ನೊಂದು ಕುಡಿ ಬಂಗಾಳದ ಸೇನರು ಮಗದ ದೇಶ ಅಳಿದರು.
ತುತ್ತಿನ ಚೀಲಕೂ ಸಾವಿರದ ಛಿದ್ರ
ಹೊಡೆತ ತಿನ್ನುತ್ತಾ ಬೀಳುತ್ತಾ ಏಳುತ್ತಾ ಕಟುಕರ ಮನೆಗೆ ಆಹಾರವಾಗಿ ದನಕರುಗಳು ಸಾಲು ಸಾಲಾಗಿ ಗುಂಪು ಗುಂಪಾಗಿ,
ಒಂದು ವರುಷ ಮಳೆಯಾದರೆ ಮತ್ತೊಂದು ವರುಷ ಬರಗಾಲಗಳ ನಡುವೆ ಕಣ್ಣು ಮುಚ್ಚಾಲೆ ಆಟ ನಡೆದಿದೆ. ತಾನು ದುಡಿದ ಹಣವನ್ನು ಗದ್ದೆಗೆ ಖರ್ಚು ಮಾಡುತ್ತಾನೆ. ಉತ್ತಮ ಬೆಳೆ ಬಂದರೆ ಬೆಲೆ ಇರುವುದಿಲ್ಲ. ಲಾಭಕ್ಕಿಂತ ಹಾನಿಯೇ ಹೆಚ್ಚು ಕುಟುಂಬದ ನಿರ್ವಹಣೆ ಮಾಡಲು ಕೂಲಿನಾಲಿ ಮಾಡಬೇಕು ದುಡಿದ ಹಣ ಹೊಟ್ಟೆ ಬಟ್ಟೆ ಶಿಕ್ಷಣಕ್ಕೆ ಸಾಲುವುದಿಲ್ಲ ಲೇವಿದಾರರ ಹಾಗೂ ಬ್ಯಾಂಕರ್ ಹತ್ತಿರ ಸಾಲ ತೆಗೆದುಕೊಳ್ಳಬೇಕು. ದನಕರುಗಳು ರೈತರ ಜೀವನಾಡಿ ಬದುಕಿನ ಅವಿಭಾಜ್ಯ ಅಂಗಯೆಂದರೆ ತಪ್ಪಾಗಲಾರದು ಬರಗಾಲ ಬೇಗೆಗೆ ತತ್ತರಿಸುತ್ತಿರುವ ಸಾಕು ಪ್ರಾಣಿಗಳಿಗೆ ಮೇವು ನೀರು ಇಲ್ಲದೇ ದುಬಾರಿ ಹಣಕ್ಕೆ ತೆಗೆದುಕೊಳ್ಳಲು ಸಾಧ್ಯ ವಾಗದೆ ಬೆಳೆಸಿದ ದನ ಕರುಗಳನ್ನು ಕಡಿಮೆ ದರದಲ್ಲಿ ಮಾರಿಬಿಡುತ್ತಾರೆ. ಹೀಗೆ ಪ್ರತಿ ವರುಷ ಕೋಟ್ಯಂತರ ದನಗಳು ಕಟುಕರ ಕೈಯಲ್ಲಿ ಬಲಿಯಾಗುತ್ತಿವೆ. ಅಂಕೆ ಸಂಖ್ಯೆ ಸಿಗದ ಕಸಾಯಿ ಖಾನೆಗಳು ಸರ್ಕಾರ ಕಡಿವಾಣ ಹಾಕಲು ವಿಫಲವಾಗಿದೆ. ಸರಕಾರ,
ನಮ್ಮ ಕನ್ನಡ ಸಾಲಿ ಮಾಸ್ತರ ಸಾಲ್ಯಾಗೋ ಗುಡಿಗುಂಡಾರದಾಗೂ ಇದ್ದು ಮಕ್ಕಳಿಗೆ ಪಾಠ ಮಾಡುತ್ತಿದ್ದರು.
90ರ ದಶಕದಲ್ಲಿ ಪ್ರತಿ ತರಗತಿಯಲ್ಲಿ 120 ರಿಂದ 180 ವಿದ್ಯಾರ್ಥಿಗಳು ಇರುತ್ತಿದ್ದರು. ಒಬ್ಬರೇ ಶಿಕ್ಷಕರು ಪ್ರತಿಯೊಂದು ವಿಷಯವನ್ನು ಮನದಟ್ಟು ಮಾಡಿ ಶಾಣ್ಯಾ ಮಾಡಿದ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ ಶಿಕ್ಷಕರು ಸಹ ತಮ್ಮ ಮಕ್ಕಳನ್ನು ಸಹ ಕನ್ನಡ ಶಾಲೆಗೆ ಕಳಿಸುತ್ತಿದ್ದರು ಮೇಲು ಕೀಳು ಎಂಬ ಭಾವನೆ ಇರುತ್ತಿರಲಿಲ್ಲ ಒಂದು ರೀತಿಯಲ್ಲಿ ಹೇಳಬೇಕಾದರೆ ನಡೆದಾಡುವ ದೇವರು ಎಂದರೆ ತಪ್ಪಗಲಾರದು. ದುಷ್ಟ ಪ್ರವೃತ್ತಿಯ ಅಟ್ಟುವ ಮಟ್ಟಹಾಕುವ ದಿಟ್ಟೆದೆಯ ಸ್ವಾತಂತ್ರ್ಯ ಬೇಕವಳಿಗೆ ಇಲ್ಲ ಚಂಡಿಯಾಗಿ ರುಂಡ ಚೆಂಡಾಡುವ ದಿನಗಳೇನೂ ದೂರವಿಲ್ಲ.
ಕಳೆದ 10-15 ವರುಷಗಳಿಂದ ಮುಗ್ಧ ಕಂದಮ್ಮಗಳಿಂದ ಹಿಡಿದು ಎಪ್ಪತ್ತು ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿರುವುದು ನಾಚಿಕೆಗೇಡು, ಪ್ರೀತಿಯ ಹೆಸರಲ್ಲಿ ನಾಟಕ ಮಾಡಿ ಅತ್ಯಾಚಾರ ಮಾಡಿ ಕೊಲೆ ಮಾಡುವ ಹಂತಕ್ಕೆ ಕಾಮುಕರು ಬಂದಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದ ಹೆಣ್ಣು ಮಕ್ಕಳು ಮಾನಕ್ಕೆ ಅಂಜಿಆತ್ಮಹತ್ಯೆಗೆ ಶರಣಾಗುತ್ತಿರುವುದುನೋವಿನ ಸಂಗತಿ ನಮ್ಮ ದೇಶ ಪ್ರೀತಿ ವಿಶ್ವಾಸದಯೆ ಮಾನವೀಯತೆ ಭದ್ರ ಬುನಾದಿ ಹಾಕಿದ ಪುಣ್ಯ ಭೂಮಿಯಲ್ಲಿ ಹೇಯ ಕೃತ್ಯ ನಡೆಯುತ್ತಿರುವುದು ಸಮಾಜ ಯತ್ತ ಸಾಗುತ್ತಿದೆ? ಊಹೆ ಮಾಡಲಾರದಷ್ಟು ಎಂಬ ಮಾತನ್ನು ವಿಷಾದದಿಂದ ಹೇಳಬೇಕಾಗಿದೆ. ನುಡಿದರೆ ನಾರಿ ಮುನಿದರೆ ಮಾರಿ ನುಡಿಯಂತೆ ಅತ್ಯಾಚಾರಿಗಳ ಅರ್ಭಟಕ್ಕೆ ಮುನ್ನುಡಿ ಬರೆಯಬಲ್ಲರು. ಯಾರು ಏನೇನು ಕಳೆದುಕೊಂಡರು ವೃದ್ಧ ತಂದೆ ತಾಯಿ ಇರುವೊಬ್ಬ ಮಗ ಎಳೆ ಮಕ್ಕಳು ತಂದೆ-ತಾಯಿಯ”’
2021 ವರುಷ ಮರೆಯಲಾಗದ ನೋವಿನ ದಿನಗಳು ಕೋರೋನಾ ಎಂಬ ಮಾರಿ ಲಕ್ಷಾಂತರ ಜನರನ್ನು ಸಾವಿನ ಮನೆಗೆ ಕಳಿಸಿದ ಆದಿನ ಗಳು ತಂದೆ ತಾಯಿಗಳ ಮುಂದೆ ಮಕ್ಕಳ ಸಾವು ಇಂದಿಗೂ ಸಹ ಅಳು ನಿಂತಿಲ್ಲ. ಇಡೀ ಕುಟುಂಬಗಳು ನಾಶಮಾಡಿದ ಆ ಘಟನೆ ನೆನೆಸಿಕೊಂಡರೆ ಇಂದಿಗೂ ಹೃದಯ ಬಡಿತ ಜಾಸ್ತಿ ಆಗುತ್ತೆ. ಒಂದೊಂದು ಮನೆಯ ಒಂದೊಂದು ಬೇರೆ ಬೇರೆಯಾಗಿದೆ. ಗಂಡ ಇದ್ದರೆ ಹೆಂಡತಿ ಇಲ್ಲ ಹೆಂಡತಿ ಇದ್ದರೆ ಗಂಡ ಇಲ್ಲ ಗಂಡ ಹೆಂಡತಿ ಇದ್ದರೆ ಮಕ್ಕಳು ಇಲ್ಲ ತುಂಬಿದ ಸಂಸಾರ ಇಲ್ಲದೇ ಅವರ ನೆನಪಿನಲ್ಲಿ ನಡೆಯಬೇಕಾಗಿದೆ.
ಕನ್ನಡಾಂಭೆಯ ಕಣ್ಮಣಿಯೇ ಅರ್ಪಿಸಿ ತನು ಮನ ಧನವ ಕನ್ನಡಕ್ಕೆ ಜಯವ ತಂದ ಜಯದೇವಿ ತಾಯಿಯೇ.
ಸೋಲಾಪೂರ ಸಿದ್ದ ರಾಮೇಶ್ವರರ ಪುಣ್ಯ ಭೂಮಿ ಕನ್ನಡಿಗರ ಕರ್ಮಭೂಮಿ ಕನ್ನಡ ತಾಯಿ ಕನ್ನಡ ಕಟ್ಟಾಳು ಹೆಸರಾದ ಡಾ ಜಯದೇವಿತಾಯಿ ಕರುನಾಡಿನ ಮಹಾಚೇತನ ಕನ್ನಡಕ್ಕಾಗಿ ತಮ್ಮ ಜೀವನವನ್ನು ತಾಗ್ಯ ಮಾಡಿದ ಕರುಣಾಮಯಿ ತಾಯಿಯ ಹೋರಾಟ ಕನ್ನಡ ಕಳಕಳಿ ಪ್ರತಿಯೊಬ್ಬ ಕನ್ನಡಿಗರಿಗೆ ಸ್ಪೂರ್ತಿಯಾಗಬೇಕು ಅಂದಾಗ ಮಾತ್ರ ಕನ್ನಡ ಕನ್ನಡಿಗ ಕನ್ನಡ ನಾಡು ಉಳಿಯಲು ಸಾಧ್ಯ ಮೊದಲು ತಾಯಿ ಭಾಷೆ ಪ್ರೀತಿ ಸಬೇಕು ಬೆಳೆಸಬೇಕು ಸ್ವಾಭಿಮಾನಿಯಾಗಬೇಕು. ಅಂಶಗಳನ್ನು ಅಳವಡಿಸಿಕೊಂಡರೆ ತಾಯಿಗೆ ನೀಡಬೇಕಾದ ಸಣ್ಣ ಕಾಣಿಕೆ.
ಸಾಹಿತಿ ಸಂಘಟಕರಾದ ವಿಶ್ವೇಶ್ವರ ಮೇಟಿಯವರ ಸಾಹಿತ್ಯ ಬರವಣಿಗೆ ಹೀಗೆ ನಿರಂತರವಾಗಿ ಸಾಗಲಿ ಎಂದು ಶುಭಾಶಯಗಳೊಂದಿಗೆ…
ಲೇಖಕರು:ದಯಾನಂದ ಪಾಟೀಲ ಅಧ್ಯಕ್ಷರು,ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ.