ಶಿವಮೊಗ್ಗ: ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಬುಧವಾರ ಮೂಲ ನಕ್ಷತ್ರ ಶ್ರೀ ಮೈಲಾರೇಶ್ವರ ದೇವರನ್ನು ಪಟ್ಟಕ್ಕೆ ಕೂರಿಸಿ ಸರಸ್ವತಿ ಪೂಜೆ ನಡೆಯಿತು. ಶುಕ್ರವಾರ ದುರ್ಗಾಷ್ಟಮಿ ಮಹಾನವಮಿ ಆಯುಧ ಪೂಜೆ ನಡೆಯಿತು ಶನಿವಾರ ವಿಜಯದಶಮಿ ಮೈಲಾರೇಶ್ವರ ಸನ್ನಿಧಿಯಲ್ಲಿ ಸಂಜೆ 5 ಗಂಟೆಗೆ ಬನ್ನಿ ಮುಡಿಯಲಾಯಿತು.ಭಾನುವಾರ ಏಕದಶಿ ಬೆಳಿಗ್ಗೆ 5:00 ಯಿಂದ ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ ಹಾಗೂ ಶ್ರೀ ಮೈಲಾರೇಶ್ವರ ದೇವರ ರಾಜ ಬೀದಿ ಉತ್ಸವ ಬೆಳಿಗ್ಗೆ 7:00 ಯಿಂದ ದೇವಸ್ಥಾನದಿಂದ ಹೊರಟು ಬಿ ಎಚ್ ರಸ್ತೆ ಕೋಟೆ ಪೊಲೀಸ್ ಠಾಣೆ ರಸ್ತೆ ಕೋಟೆ ರಸ್ತೆ ಮೂಲಕ ಕೋರ್ಪಲ್ಲಯ್ಯನ ಛತ್ರದ ತುಂಗಾ ನದಿಯಲ್ಲಿ ಗಂಗೆಪೂಜೆ ನಂತರ ಎಸ್ ಪಿ ಎಂ ರಸ್ತೆ ಗಾಂಧಿ ಬಜಾರ್ ಮೂಲಕ ಶಿವಪ್ಪ ನಾಯಕ ಸರ್ಕಲ್ ನಂತರ ಬಿ ಎಚ್ ರಸ್ತೆ ಮುಖಾಂತರ ದೇವಸ್ಥಾನಕ್ಕೆ ಬರುವುದು ನಂತರ ಶ್ರೀ ಮೈಲಾರೇಶ್ವರ ದೇವರಿಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನೆರವೇರಿಸಲಾಗಿದೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.