ಶಿವಮೊಗ್ಗ: ಕಾಗೋಡು ತಿಮ್ಮಪ್ಪನವರಿಗೆ ತಾಳಗುಪ್ಪ ನಾಗರಿಕ ಸನ್ಮಾನ ವೇದಿಕೆಯಿಂದ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ಸಚಿವರಾದ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಸಿಗಂದೂರು ರಾಮಪ್ಪನವರು,ಬಿ ಆರ್ ಜಯಂತ, ತಾಳಗುಪ್ಪ ಭಾಗದ ಮೂರು -ನಾಲ್ಕು ಸಾವಿರ ಗೇಣಿ ರೈತ ಸಮೂಹ ಹಾಜರಿದ್ದು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇದೇ ಸಮಾರಂಭದಲ್ಲಿ “ಭೂಮಿ ಹಕ್ಕು ನೀಡಿದ ಶೋಷಿತರ ಸರ್ವೋದಯದ ಹೊಂಬೆಳಕು” ಕೃತಿಯನ್ನು ಬಿಡುಗಡೆ ಮಾಡಲಾಯಿತು. ಈ ಕೃತಿಯನ್ನು ಪ್ರಧಾನ ಸಂಪಾದಕರಾಗಿ ಲಕ್ಷ್ಮಿ ನಾರಾಯಣ ಹೆಗಡೆ ಕಲಗಾರು ಹಾಗೂ ರವಿರಾಜ್ ಸಾಗರ್ ಮಂಡಗಳಲೆ ಅವರು ಸಂಪಾದಿಸಿದ್ದು ಕಾಗೋಡು ತಿಮ್ಮಪ್ಪನವರ ಒಡನಾಡಿಗಳು, ಸಾಗರದ ಬರಹಗಾರರು, ಗೇಣೀ ರೈತ ಹೋರಾಟಗಾರರು ಸೇರಿದಂತೆ ಕಾಗೋಡು ತಿಮ್ಮಪ್ಪನವರ ಬದುಕು, ಬಾಲ್ಯ, ಹೋರಾಟವನ್ನು ಒಳಗೊಂಡಿದ್ದು ವಿಶಿಷ್ಟ ಕೃತಿಯಾಗಿದೆ.