ಗಡಿ ಭಾಗದ ಮಲಾಬಾದ ಪುಟ್ಟ ಹಳ್ಳಿ ಕೃಷಿಯನ್ನು ನಂಬಿರುವ ಜನ,ಬರಗಾಲವನ್ನು ತಲೆಯಲ್ಲಿ ಇಟ್ಟುಕೊಂಡು ತಿರುಗುವ ಜನ ಸಾಲಕ್ಕೆ ಅಂಜದೆ ಕುಗ್ಗದೆ ದುಡಿಮೆಯೇ ದೇವರು ಹೃದಯದಲ್ಲಿ ಇಟ್ಟುಕೊಂಡು ಸಾಗುವ ಜನ ಮನಸು ಸಹ ತುಂಬಿದ ಕೊಡ ಇದ್ದಂತೆ ಗ್ರಾಮದ ದೊಡ್ಡ ಸಾಹುಕಾರ ಇದ್ದ ಸುತ್ತ ಮುತ್ತ ಹತ್ತು ಹಳ್ಳಿಗೆ ಧಣಿ ಇವನ ಹೆಸರು ರಾಮಣ್ಣ ಸಾಹುಕಾರ ಕಥೆಯ ಮಹಾನಾಯಕ ಈ ಘಟನೆ ನಡೆದಿದ್ದು 19ನೇ ಶತಮಾನದ ಕಾಲಘಟ್ಟದಲ್ಲಿ ನೂರಾರು ಎಕರೆ ಜಮೀನು ಆಳು-ಕಾಳು ದನಕರುಗಳಿಂದ ತುಂಬಿ ತುಳುಕುವ ದೊಡ್ಡ ಕುಟುಂಬ ಬೆಳ್ಳಿ ಬಂಗಾರದಿಂದ ತುಂಬಿರುವ ಶ್ರೀಮಂತಿಕೆ.
ಸಾಹುಕಾರ ಜೀವನ ಹೀಗೆ ಕಳೆದು ಹೋದವು ಮಕ್ಕಳು ದೊಡ್ಡವರು ಆದ ಮೇಲೆ ಮದುವೆಯ ಸಮಯ ರುಚಿ ರುಚಿಯಾದ ಅಡುಗೆಯ ತಯಾರಿ ರಾತ್ರಿಯ ಸಮಯ ಅದೇ ವೇಳೆಗೆ ವಯಸ್ಸಾದ ಹೆಣ್ಣುಮಗಳು ನನಗ ಹಸಿವು ಆಗ್ತೀತ್ರಿ ತಿನ್ನಲು ಸ್ವಲ್ಪ ಬುಂದಿ ಕಾಳು ನೀಡೀರಿ ಬೇಡಿಕೊಂಡಳು. ಸಾಹುಕಾರನ ಮಂದಿ ಏ ಮುದಿಕಿ ನಿನಗ ಏನು ಕೊಡುವುದಿಲ್ಲ ಮೊದಲ ನಡೆ ನಮ್ಮ ಮುಂದ ನಿಲ್ಲುವುದು ಬೇಡ. ಆಕೆಯನ್ನು ಹಿಡಿಕೊಂಡು ಹೊರಗೆ ಹಾಕಿದರು ಮೂರು ಸಲ ಹೀಗೆ ಮಾಡಿದರು ಏಕೆಂದರೆ ವೃದ್ಧೆಯೇ ಲಕ್ಷ್ಮಿಯೇ ಆಗಿದ್ದಳು ಸಾಹುಕಾರನ ಪರೀಕ್ಷೆ ಮಾಡಲು ಬಂದಿದ್ದಳು ಸಾಹುಕಾರ ತೋಟದಿಂದ ಮನೆಗೆ ಹೊರಟ್ಟಿದ್ದ ಕೈಯಲ್ಲಿ ಕಂದೀಲು ಬೆಳಕಿನಲ್ಲಿ ವೃದ್ದೆಯನ್ನು ನೋಡಿದ. ಸಾಹುಕಾರನಿಗೆ ಸಂಶಯ ಬಂತು ಮನೆಗೆ ಯಾರು ಬಂದಿದ್ದರು ಏನು? ಹೌದು ಬಂದಿದ್ದರು ಮುದುಕಿ ನನಗ ತಿನ್ನಲ್ಲಾಕ ಕೂಡಿರಿ ಎಂದು ಕೇಳಿದಳು ಆದರೆ ಏನು ಕೂಡಲಿಲ್ಲ ಎಂದು ಹೇಳಿದರು ಎಂಥಾ ದೊಡ್ಡ ತಪ್ಪ ಮಾಡಿರಿ ನೀವು ಆಕೆ ಮನೆಯ ಲಕ್ಷ್ಮಿ ಬೇರೆ ವೇಷದ್ಯಾದ ನಮ್ಮ ಪರೀಕ್ಷೆ ಮಾಡಲು ಬಂದ್ಯಾಳ ಆದರ ನೀವು ದೊಡ್ಡ ತಪ್ಪು ಮಾಡೀರಿ ಲಕ್ಷ್ಮಿ ಮನೆ ಬಿಟ್ಟುಹೋದಳು ಆಸ್ತಿ ಪಾಸ್ತಿ ಎಲ್ಲ ಬಿಟ್ಟ ಹೋಗತ್ತಿತ್ತಿ ನಮ್ಮ ಮನೆತನ ದಿವಾಳಿ ಆತು ಸಾಹುಕಾರ ಬಿಕ್ಕಿಬಿಕ್ಕಿ ಅತ್ತ ವೃದ್ಧೆಯನ್ನು ಹುಡುಕಾಡಿದ ಆದರೆ ಸಿಗಲಿಲ್ಲ. ಮಾಡಿದ ಒಂದು ತಪ್ಪು ಸಾಹುಕಾರನ ಮಕ್ಕಳು ಬಿಕಾರಿಯಾಗಿ ಮನೆ ಮನೆ ಸುತ್ತಿ ಭಿಕ್ಷೆ ಬೇಡಿ ತಿನ್ನುತ್ತಿದ್ದರು ಹೆಂಡರು ಮನೆ ಬಿಟ್ಟುಹೋದರು. ತಿನ್ನಲು ಏನು ಸಿಗದೆ ಬಾಂಡೆ ಕೊಂಡೆ ಮಾರಿ ತಿಂದರು ಮನೆಯ ಕಲ್ಲು ಮಣ್ಣು ಮಾರಿದರೂ ಹೊಟ್ಟೆ ತುಂಬಲಿಲ್ಲ ತೊಡಲು ಬಟ್ಟೆ ಇಲ್ಲದೆ ಅರೇ ಬೆತ್ತಲೆಯಾಗಿ ತಿರುಗುವಸಾಹುಕಾರನ ಮಕ್ಕಳು ತಮ್ಮ ಶ್ರೀಮಂತಿಕೆಯ ಮದದಲ್ಲಿ ತಮ್ಮನ್ನು ತಾವು ಕಳೆದು ಹೋಗಿದ್ದರು. ಹಳ್ಳಿಯಲ್ಲಿ ನಡೆದ ಘಟನೆ ಇಂದಿಗೂ ಸಹ ರಾಮಣ್ಣ ಸಾಹುಕಾರನ ಕಥೆ ಇಂದಿಗೂ ಸಹ ಜನಮನದಲ್ಲಿ ಸಾಕ್ಷಿಯಾಗಿ ಕಂಡುಬರುತ್ತದೆ.
ಲೇಖಕರು:ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಬಳಗ ಮಹಾರಾಷ್ಟ್ರ