ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕರಾದ ಎಚ್ ವಿ ವೆಂಕಟೇಶ್ ರವರು ಮಾತನಾಡಿ ಕರ್ನಾಟಕದ ಗಡಿನಾಡು ಪಾವಗಡ ತಾಲೂಕಿನಲ್ಲಿ ಕನ್ನಡ ನಾಡು ನುಡಿ ಭಾಷೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದ ಎಚ್ .ಕೆ.ನರಸಿಂಹಮೂರ್ತಿ ರವರು ಮಾತನಾಡಿ ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸವಿದೆ ಪಾವಗಡ ತಾಲೂಕಿನ ನಿಡಗಲ್ಲು ಚನ್ನಪ್ಪ ಕವಿಯ ಹೆಸರು ಕರ್ನಾಟಕದ ಇತಿಹಾಸದಲ್ಲಿ ಎಂದು ಅಜರಾಮರವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಲೂಕಿನ ಗಣ್ಯರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸಿಲ್ದಾರ್ ವರದ ರಾಜ್ ಅವರ ವಹಿಸಿದ್ದರು ಕಾರ್ಯಕ್ರಮದಲ್ಲಿ ಇ.ಓ. ಜಾನಕಿ ರಾಮ್. ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರನಮ್ಮ. ವೃತ್ತ ನಿರೀಕ್ಷಕರಾದ ಗಿರೀಶ್. ಸುರೇಶ್. ಲೋಕೋಪಯೋಗಿ ಇಲಾಖೆ ಎ.ಇ.ಇ. ಅನಿಲ್ ಕುಮಾರ್. ಜಿ.ಪಂ.ಎ.ಇ.ಇ. ಸುರೇಶ್ ಪುರಸಭೆ ಅಧ್ಯಕ್ಷರಾದ ಪಿ .ಎಚ್. ರಾಜೇಶ್ ಉಪಾಧ್ಯಕ್ಷರು ಗೀತಾ ಹನುಮಂತರಾಯಪ್ಪ, ರೈತ ಸಂಘ ಜಿಲ್ಲಾಧ್ಯಕ್ಷರು ಪೂಜಾರಪ್ಪ, ನರಸಿಂಹ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ರಾಮಾಂಜಿ, ಗುಂಡ್ಲಹಳ್ಳಿ ರಮೇಶ್, ಗೋವಿಂದ .ವಿ ಮುಂತಾದವರು ಭಾಗವಹಿಸಿದ್ದರು.
ವರದಿ ಪಾವಗಡ ಕೆ. ಮಾರುತಿ ಮುರಳಿ