ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

‘ವಚನ ದರ್ಶನ’ ಪುಸ್ತಕದಲ್ಲಿ ಬಸವಣ್ಣನವರ ವ್ಯಕ್ತಿತ್ವ ತಿರುಚಲಾಗಿದೆ:ಸಂಗಮೇಶ ಎನ್ ಜವಾದಿ

ಬೀದರ್/ಚಿಟಗುಪ್ಪ : ಗದಗಿನ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ ಸಂಪಾದಕತ್ವದಲ್ಲಿ ಹೊರತಂದ ‘ವಚನ ದರ್ಶನ’ ಪುಸ್ತಕದಲ್ಲಿ ಬಸವಣ್ಣನವರ ವ್ಯಕ್ತಿತ್ವ ತಿರುಚಲಾಗಿದೆ. ರಾಜ್ಯ ಸರ್ಕಾರ ಈ ಪುಸ್ತಕವನ್ನು ಆದಷ್ಟು ಬೇಗನೆ ಮುಟ್ಟುಗೋಲು ಹಾಕಬೇಕು’ ಎಂದು
ಪ್ರಗತಿಪರ ಚಿಂತಕರು,ಬಸವ ತತ್ವ ಪ್ರಚಾರಕರು, ಬರಹಗಾರರಾದ ಸಂಗಮೇಶ ಎನ್ ಜವಾದಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
‘ಬ್ರಾಹ್ಮಣರಾಗಿದ್ದ ಬಸವಣ್ಣ ವೈದಿಕ ಧರ್ಮ ಒಪ್ಪಿದ್ದರು. ಹಿಂದೂ ಧರ್ಮದ ಸುಧಾರಣೆಗೆ ಶ್ರಮಿಸಿದ್ದರು ಎಂಬ ಅರ್ಥದಲ್ಲಿ ಈ ಪುಸ್ತಕದಲ್ಲಿ ಬಿಂಬಿಸಲಾಗಿದೆ. ಇದು ಶುದ್ಧ ಸುಳ್ಳು. ಅವರು ಎಂದಿಗೂ ಹಿಂದೂ ಧರ್ಮ ಮತ್ತು ಬ್ರಾಹ್ಮಣತ್ವ ಒಪ್ಪಲೇ ಇಲ್ಲ. ತಾನು ಬ್ರಾಹ್ಮಣ ಎಂದೂ ಹೇಳಿಕೊಂಡಿಲ್ಲ. ಆದರೆ, ಈ ಪುಸ್ತಕದ ಮೂಲಕ ಲಿಂಗಾಯತರ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುವವರ ವಿರುದ್ಧ ಕ್ರಮವಾಗಬೇಕು’ ಎಂದರು.

‘ಕಂದಾಚಾರ, ಲಿಂಗ ಅಸಮಾನತೆ ವಿರುದ್ಧ ಸಿಡಿದೆದ್ದು, ವೈದಿಕ ಧರ್ಮದಿಂದ ಹೊರಬಂದವರು ಬಸವಣ್ಣನವರು. ವೈದಿಕತೆ ವಿರುದ್ಧ ಹುಟ್ಟಿಕೊಂಡಿರುವುದೇ ಲಿಂಗಾಯತ ಧರ್ಮ. ಬಸವಣ್ಣನವರ ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ಅವರ ವಚನಗಳೇ ಹೇಳುತ್ತವೆ. ಎಲ್ಲಾ ಶರಣರು ತಮ್ಮ ವಚನಗಳಲ್ಲಿ ವೈದಿಕತೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಆದರೆ, ಕೆಲವರು ಈ ಪುಸ್ತಕದ ಮೂಲಕ ಲಿಂಗಾಯತವನ್ನು ಹಿಂದೂ ಧರ್ಮದ ಭಾಗ ಮಾಡಲು ಹೊರಟಿದ್ದಾರೆ’, ಇದು ಖಂಡನೀಯ ನಡೆಯಾಗಿದೆ ಎಂದರು.

ಲಿಂಗಾಯತ ಎಂಬುದು ವೈಚಾರಿಕತೆ ಹೊಂದಿರುವ ಸ್ವತಂತ್ರ್ಯ ಧರ್ಮ. ಇದರಿಂದ ತಮ್ಮ ಅಸ್ತಿತ್ವ ಉಳಿಯದು ಎನ್ನುವ ಕಾರಣಕ್ಕೆ, ಕೆಲವರು ಈ ಪುಸ್ತಕ ಪ್ರಕಟಿಸಿದ್ದಾರೆ. ಆದರೆ, ಬಸವಣ್ಣನವರ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು. ಶೀಘ್ರದಲ್ಲೇ ಈ ಪುಸ್ತಕ ಮುಟ್ಟುಗೋಲು ಹಾಕಿಕೊಂಡು, ಇವರ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಂಗಮೇಶ ಎನ್ ಜವಾದಿ ಆಗ್ರಹಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ