ಹನೂರು:ಲೋಕ್ಕನಹಳ್ಳಿ ಹಾಗೂ ಒಡೆಯರಾಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಮುಖಂಡರುಗಳು ಹನೂರು ತಾಲೂಕಿನ ಉದ್ದಟ್ಟಿ ಪಿ ಜಿ ಪಾಳ್ಯ ಜೀರಿಗೆ ಗದ್ದೆ ಮಾವತ್ತೂರು ಮಾಲಿಗನತ್ತ ಕುಡುವಳೆ ವಿ ಎಸ್ ದೊಡ್ಡಿ ವಿವಿಧ ಗ್ರಾಮಗಳ ಕೆಲಮುಖಂಡರು ಸಾಮೂಹಿಕವಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಚಾಮರಾಜನಗರ ಜಿಲ್ಲಾ ಅಧ್ಯಕ್ಷರು ಹನೂರು ವಿಧಾನಸಭಾ ಕ್ಷೆತ್ರದ ಅಭ್ಯರ್ಥಿ ಎಮ್ ಆರ್ ಮಂಜುನಾಥ್ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ದುರಾಡಳಿತವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಈ ವೇಳೆ ಮಾತನಾಡಿದ ಜೆಡಿಎಸ್ ಪಕ್ಷದ ಎಮ್.ಆರ್.ಮಂಜುನಾಥ್ ಹನೂರು ವಿಧಾನಸಭಾ ಕ್ಷೇತ್ರವು ತುಂಬಾ ಹಿಂದುಳಿದಿದೆ ಹಾಗಾಗಿ ಈ ಕ್ಷೆತ್ರದಲ್ಲಿ ಬಡತನ ತುಂಬಾ ಇದೆ ಇದನೆಲ್ಲ ಸರಿದೂಗಿಸೋ ಕೆಲಸ ನಾವೆಲ್ಲ ಸೇರಿ ಮಾಡುವ ನಿಟ್ಟಿನಲ್ಲಿ ನಿಮ್ಮ ಜೊತೆ ಕಷ್ಟ ಸುಖಗಳಿಗೆ ಸದಾ ನಿಮ್ಮ ಜೊತೆ ನಾನಿರುತ್ತೇನೆ ಮುಂದಿನ ಚುನಾವಣೆಯಲ್ಲಿ ಒಂದು ಅವಕಾಶ ಕೊಡಿ ನಿಮ್ಮ ಕಷ್ಟ ಸುಖಗಳಿಗೆ ಋಣಿಯಾಗಿ ಇರುತ್ತೇನೆ ಒಂದು ಅವಕಾಶ ನನಗೆ ಕಲ್ಪಿಸಿಕೊಡಿ ನಾನು ನಿಮ್ಮ ಜೊತೆ ಕಷ್ಟ ಸುಖಗಳಿಗೆ ಜೊತೆಯಾಗಿಲ್ಲ ಕೆಲಸ ಮಾಡಿಲ್ಲ ಅಂದ್ರೆ ನನ್ನ ತಿರಸ್ಕರಿಸಿ ಎಂದು ಪಿಜಿ ಪಾಳ್ಯದಲ್ಲಿ ನಡೆದ ಸಾಮೂಹಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು .ಈ ವೇಳೆ ಮಾತನಾಡಿದ ಹನೂರು ಭಾಗದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಉದ್ದನೂರು ಪ್ರಸಾದ್ ರವರು ಮಾತನಾಡಿ ಮಂಜುನಾಥ್ ರವರು ಹನೂರು ವಿಧಾನಸಭಾ ಕ್ಷೆತ್ರದಲ್ಲಿ ಕಳೆದ ಬರಿ 46 ಸಾವಿರ ಮತ ಪಡೆದು ಸೋತರು ಕೂಡ ಅವರು ಇಲ್ಲೇ ಉಳಿದುಕೊಂಡು ವಾರದಲ್ಲಿ ನಾಲ್ಕು ದಿನ ನಮ್ಮ ಹನೂರು ಕ್ಷೆತ್ರದ ಪ್ರತಿಯೊಂದು ಹಳ್ಳಿ ಹಳ್ಳಿಯ ಸಮಸ್ಯೆಗಳನ್ನು ನೋಡಿ ಜನರ ಕಷ್ಟಕ್ಕೆ ತಮ್ಮ ಕೈಲಾದ ಸೇವೆಯನ್ನು ಸತತವಾಗಿ 5 ವರ್ಷದಿಂದ ಮಾಡುತ್ತಾ ಬಂದಿದ್ದಾರೆ ಹಾಗಾಗಿ ನಾವೆಲ್ಲ ಮಂಜುನಾಥ್ ರವರನ್ನು ಬೆಂಬಲಿಸಿ ಅವರನ್ನು 2023 ರ ವಿಧಾನಸಭಾ ಚುನಾವಣೆ ಯಲ್ಲಿ ನಾವೆಲ್ಲ ಒಟ್ಟಾಗಿ ಅವರಿಗೆ ಶಕ್ತಿ ತುಂಬೋಣ ಎಂದು ಮಾತನಾಡಿದರು ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶಿವಮೂರ್ತಿ ಉದ್ದನೂರು ಪ್ರಸಾದ್ ಚಿಂಚಳ್ಳಿ, ಗುರುಮಾಲ್ಲಪ್ಪ ಬಂಡಳ್ಳಿ,ಜಸೀಮ್ ಪಾಶ,ಮಾಜಿ ಪಂಚಾಯತ್ ಸದಸ್ಯರು ನಿಂಗಶೆಟ್ಟಿ ಹಾಗೂ ಸುತ್ತ ಮುತ್ತ ಊರಿನ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.
-ಉಸ್ಮಾನ್ ಖಾನ್