ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಂಕಣ: “ಆದದ್ದು ಹೀಗೆ”

ಬಾ ತಮ್ಮ, ಬಾ ತಂಗಿ ವ್ಯಕ್ತಿತ್ವ ವಿಕಸನ ಪಥಕ್ಕೆ

ಎಲೆನಾರ್ ರೂಸ್ ವೆಲ್ಟ್ನ ಖ್ಯಾತ ಉಲ್ಲೇಖ ಹೀಗಿದೆ. “ಇತರರ ತಪ್ಪುಗಳಿಂದ ಕಲಿಯಿರಿ. ಇವೆಲ್ಲಾ ತಪ್ಪುಗಳನ್ನು ನೀವೇ ಮಾಡುವಷ್ಟು ಕಾಲ ನೀವು ಬದುಕಿರಲಾರಿರಿ”. ಇದರರ್ಥ ಸೋಮೇಶ್ವರ ಶತಕದಲ್ಲಿ ಹೇಳಿರುವುದನ್ನೂ ಮುಂದುವರೆಸಿ, ಕೆಲವರನ್ನು ಮಾಡಿದವರಿಂದ ಅನುಭವಿಗಳು ಹೇಳಿದ್ದು, ಓದಿದ್ದು, ಬೇರೆಯವರ ಅನುಭವ ಮಾರ್ಗದರ್ಶನ, ಅವರ ಕೆಲಸದ ಮೌಲ್ಯಮಾಪನ ಇವುಗಳೆಲ್ಲವನ್ನು ನೀವು ಅಳವಡಿಸಿಕೊಳ್ಳಬೇಕು ಬೆಂಕಿ ಸುಡುತ್ತದೆ ಎಂದು ಯಾರಾದರೂ ಹೇಳಿದರೆ ನಂಬಿರಿ. ನಾನೇ ಕೈ ಸುಟ್ಟು ಸುಟ್ಟುಕೊಂಡ ಮೇಲೆ ನಂಬುತ್ತೇನೆ ಎನ್ನದಿರಿ. ‘ಹೇಳಿಕೊಟ್ಟ ಬುದ್ಧಿ ಕಟ್ಟಿ ಕೊಟ್ಟ ಬುತ್ತಿ’ ಎಷ್ಟು ದಿನ? ಗಾಂಧೀಜಿ ಹಾಗೂ ರವೀಂದ್ರನಾಥ್ ಟಾಗೋರ್ ಹೇಳಿರುವಂತೆ, “ನಮ್ಮ ಮನೆಯ ಹಾಗೂ ಮನದ ಎಲ್ಲಾ ಕಿಟಕಿಗಳನ್ನೂ ತೆರೆದಿಟ್ಟು ಜ್ಞಾನ ಎಲ್ಲಿಂದ ಯಾವಾಗ ಬಂದರೂ ಸ್ವೀಕರಿಸೋಣ”. ಇದನ್ನು ಪಾಲಿಸೋಣ ಏನಂತೀರಿ ಮಿತ್ರರೇ?. ನಿಮ್ಮ ನೋಟವೊಂದೇ ಮುಖ್ಯವಲ್ಲ. ಪ್ರತಿ ವ್ಯಕ್ತಿಯೂ ವಿಭಿನ್ನ ಹಾಗೂ ಆತ / ಆಕೆಯ ಗುಣಧರ್ಮಗಳು ಅನನ್ಯ. ಇತರರೊಂದಿಗೆ ಹೋಲಿಸಿದಾಗ ಬೇಸರ ಸಹಜ. ಹೀಗಾಗಿ ನಿಮ್ಮ ಗಮನ, ನಿಮ್ಮ ಶಕ್ತಿಯನ್ನು ಸಕಾರತ್ಮಕತೆಯ ಕಡೆ ಹರಿಸು ಇನ್ನೊಬ್ಬರನ್ನು ಎಂದೂ ಅನುಕರಿಸಬೇಡ. ಸದಾ ನೈಜತೆಯಲ್ಲಿರು, ನಟಿಸಬೇಡ. ನೀವು ಕಾಣಲು ಚೆನ್ನಾಗಿಲ್ಲ ಎಂದು ನಿಮಗೆ ನೀವೇ ಎಂದುಕೊಂಡು ಜನರನ್ನು ಭೇಟಿಯಾಗುವುದನ್ನು ತಪ್ಪಿಸಬೇಡಿ. ಅವಕಾಶಗಳಿಗಾಗಿ ಕಾಯಿರಿ. ವಿವಿಧ ಕಾರ್ಯಕ್ರಮಗಳಿಗೆ ಜನ ಸೇರಿದ ಕಡೆ ಹೋಗಿ, ಸಾಮಾಜಿಕ ಪ್ರತಿಕ್ರಿಯೆಗಳಲ್ಲಿ ತೊಡಗಿದಾಗ ನಿಮ್ಮನ್ನು ನೀವೇ ಇಷ್ಟಪಡುತ್ತೀರಿ. ನೀವು ಸಂಘಜೀವಿಯಾಗಿ ಸಮುದಾಯ ಪ್ರಿಯರಾಗಬೇಕು. ನಿಮ್ಮ ಸುರಕ್ಷತಾ ವಲಯ ದಾಟಿ ಹೊರ ಬನ್ನಿ. ಆರಂಭಿಸುವ ಮೊದಲೇ ಅಪಯಶಸ್ಸಿನ ಬಗ್ಗೆ ಭಯಭೀತರಾಗಬೇಡಿ. ಇತರರಿಗೆ ಆತ್ಮೀಯವಾಗಿ ವೈಯಕ್ತಿಕವಾಗಿ ತೆರೆದುಕೊಂಡು, ನಿಮ್ಮ ಸಂವಹನಗಳಲ್ಲಿ ನಿಮ್ಮನ್ನೇ ನೀವು ಬ್ರಾಂಡ್ ಮಾಡಿಕೊಳ್ಳಿ ಪ್ರತಿದಿನದ ಯೋಜನೆಗೆ, ನಿಮ್ಮ ಪ್ರಯತ್ನ ಹಾಗೂ ನಿರಂತರ ಯತ್ನ ಬಹುಮುಖ್ಯ. ತಿಂಗಳಿಗೊಮ್ಮೆ ದೊಡ್ಡ ಚಟುವಟಿಕೆ ಮಾಡುವುದಕ್ಕಿಂತ, ನಿಮ್ಮ ಪ್ರತಿ ನಿತ್ಯದ ವ್ಯಾಪಾರದ ಮಾರುಕಟ್ಟೆ ಆಯಾ ದಿನವೇ ಗಮನಿಸಿ. ಯಾವುದೇ ಸಂದರ್ಭದಲ್ಲಿ ಕೈ ಚೆಲ್ಲಿ ಕೂರಬೇಡಿ. ಎಷ್ಟೋ ಜನ ಕಷ್ಟಪಟ್ಟ ಆರಂಭದಿಂದ ಮಾಡಿ, ಇನ್ನೇನು ಮುಗಿಯಬಹುದು ಎನ್ನುವಾಗ, ಯಾವುದೋ ಸಂದೇಹದಿಂದ ತಮ್ಮ ಅದುವರೆಗಿನ ಇಡೀ ಪ್ರಯತ್ನಕ್ಕೇ ದಿಢೀರನೆ ಮಂಗಳ ಹಾಡುತ್ತಾರೆ.
ಬಹುಶಃ ಕೆಲವು ವಾರಗಳು ಅಥವಾ ತಿಂಗಳುಗಳ ಪ್ರಯತ್ನವನ್ನು, ಅಂತಿಮ ಹಂತದ ನಂಬಿಕೆಯಿಂದ ಮುಂದುವರೆಸಿದ್ದರೆ ಬಹುಶಃ ಅವರಿಗೆ ಯಶಸ್ಸು ಸಿಗುತ್ತಿತ್ತೇನೋ!. ಯಾವಾಗಲೂ ನಗುನಗುತ್ತಾ ವಿನೋದಪ್ರಿಯರಾಗಿರಿ. ಗಂಭೀರ ಹಾಗೂ ನೀರಸ ವ್ಯಕ್ತಿಗಳನ್ನ ಯಾರೂ ಇಷ್ಟಪಡುವುದಿಲ್ಲ. ಸದಾ ನಗಿಸುತ್ತಿರುವವರ ಜೊತೆಗಿರಲು ಜನ ಬಯಸುತ್ತಾರೆ. ಸಂಭಾಷಣೆಯ ಮಧ್ಯೆ ಮೋಜು ಸೇರಿಸಿ. ಇದು ಇತರರನ್ನೂ ನಿಮ್ಮ ಕಡೆ ಆಕರ್ಷಿಸುತ್ತದೆ. “ವ್ಯವಸ್ಥಿತ ವಿಧಾನದಲ್ಲಿ ಅಭಿವೃದ್ಧಿಯಾಗುವುದೇ ವ್ಯಕ್ತಿತ್ವ ಅಭಿವೃದ್ಧಿ. ವ್ಯಕ್ತಿತ್ವದಲ್ಲಿ ಸಂಯೋಜಿಸಲಾಗಿರುವ ಭಾವನೆಗಳು, ನಡವಳಿಕೆ ಹಾಗೂ ವಿಚಾರಗಳಿಂದ ಇವುಗಳಿಂದ ಒಬ್ಬರನ್ನು ವಿಶೇಷ ಮಾಡುವ ಕ್ರಿಯೆಯೇ ವ್ಯಕ್ತಿತ್ವ ಅಭಿವೃದ್ಧಿ” ಎಂದು ಪ್ರೊ. ನ್ಯಾನ್ಸಿ ಪ್ರಸನ್ನ ಜೋಸೆಫ್ ಹೇಳುತ್ತಾರೆ. ನಿಮ್ಮ ಬೂಡ್ಸುಗಳಿಗೆ ಚೆನ್ನಾಗಿ ಪಾಲಿಷ್ ಹಾಕಿ ಬಳಸಿ ಸಮಯಕ್ಕೆ ಸರಿಯಾಗಿ ಹೋಗಿ. ವಿಳಂಬ ಪ್ರವೃತ್ತಿ ಮಾಡಬೇಡಿ. ನೀವು ಭೇಟಿ ಮಾಡುವ ವ್ಯಕ್ತಿಗೆ ನೀವು ಸಮಯಕ್ಕೆ ಬಹಳ ಬೆಲೆ ಕೊಡುತ್ತೀರಿ ಎಂದು ತಿಳಿಯಬೇಕು. ಸದಾ ನಿಮ್ಮ ಮುಖದಲ್ಲಿ ಮುಗುಳ್ನಗೆಯಿರಲಿ. ಸ್ವಚ್ಛವಾಗಿ ಒಳ್ಳೆಯ ಹೇರ್ ಕಟ್ ಮಾಡಿಸಿಕೊಳ್ಳಿ. ನಾಳೆಯಿಂದ ಮಾಡುವೆ ಎಂಬುದನ್ನು ಸದಾ ಹೇಳುತ್ತಿದ್ದರೆ, ನೀವೇನೂ ಸಾಧಿಸಲಾರಿರಿ. ಬೆಳಗ್ಗೆ ೫ ಗಂಟೆಗೆ ಮುಂಚೆ ಏಳಿ. ಆಗ ನಿಮ್ಮ ಸ್ವ ಅಭಿವೃದ್ಧಿಗೆ ಹೆಚ್ಚಿನ ಸಮಯ ಸಿಗುತ್ತದೆ. ದಿನಾ ಓದಿರಿ. ಪ್ರತಿ ದಿನಾ ಕನಿಷ್ಠ ೩೦ ನಿಮಿಷಗಳ ವ್ಯಾಯಾಮ ಮಾಡಿ, ರಕ್ತ ಚಲನೆ ಸುಧಾರಿಸಿ, ಇದರಿಂದ ದೇಹದಲ್ಲಿಯ ಆಮ್ಲಜನಕದ ಹರಿಕೆ ಸುಧಾರಿಸುತ್ತದೆ. ನೀವು ಬದಲಾಗಬಹುದೆಂದೇ ಯೋಚಿಸಿ.
ನಿಮ್ಮನ್ನು ನೀವು ಅರಿಯಿರಿ. ನಿಮ್ಮ ಕೆಟ್ಟ ಚಟಗಳನ್ನು ಬಿಡಿ. ಪ್ರತಿದಿನ ನೀವು ಬೇಕಾದ ಕೆಲಸದ ಪಟ್ಟಿ ಬರೆಯಿರಿ. ಎಲ್ಲ ತಲೆಯಲ್ಲಿದ್ದರೆ ಆಗೋಲ್ಲ ನಾನು ಪ್ರತಿದಿನ, ಹಿಂದಿನ ರಾತ್ರಿ ಹಾಗೂ ಅಂದು ಮುಂಜಾನೆ, ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿಕೊಳ್ಳುತ್ತೇನೆ. ಆಯಾ ರಾತ್ರಿ ಮಾಡಿ ಮುಗಿಸಿದ ಕೆಲಸಗಳನ್ನು ಪಟ್ಟಿಯಿಂದ ತೆಗೆದು ಹಾಕಿ ಉಳಿದ ಕೆಲಸಗಳನ್ನು ಯಾಕೆ ಮಾಡಲಾಗಲಿಲ್ಲ? ಪ್ರಯತ್ನ ಮಾಡಿದ್ದರೂ ಯಾಕೆ ಮುಗಿಯಲಿಲ್ಲ? ಎಂದು ವಿಶ್ಲೇಷಿಸುತ್ತೇನೆ. ಇಂದಿನ ಉಳಿಕೆ ಕೆಲಸಗಳನ್ನು ನಾಳೆಯ ಪಟ್ಟಿಯಲ್ಲಿ ಸೇರಿಸಿ ನಾಳೆ ಅದನ್ನೂ ಮಾಡಲು ಪ್ರಯತ್ನಿಸುತ್ತೇನೆ. ನಾನೂ ಇದನ್ನೂ ಮಾಡುತ್ತೇನೆ, ಅದನ್ನೂ ಮಾಡುತ್ತೇನೆ ಎಂದು, ಹತ್ತಾರು ಕೆಲಸಗಳನ್ನು ಒಮ್ಮೆಲೇ ಹಿಡಿದರೆ, ನಮ್ಮ ಯೋಚನೆ, ಯೋಜನೆ ಪ್ರಯತ್ನ, ಅನುಷ್ಠಾನ, ಮೌಲ್ಯಮಾಪನ ಎಲ್ಲ ಹಂತಗಳಲ್ಲೂ ಯಶಸ್ಸು ಕಾಣೊಕ್ಕಾಗೋಲ್ಲ. ನಮ್ಮ ಮಿತ ಶಕ್ತಿ, ಸಂಪನ್ಮೂಲ, ಹಣ ಸಮಯ ಎಲ್ಲೆಡೆ ಹಂಚಿ ಹೋಗಿ ಯಾವ ಕೆಲಸವೂ ನಿಗದಿತ ಸಮಯಕ್ಕೆ ಮುಗಿಯುವುದಿಲ್ಲ ಎಲ್ಲ ಕಾಲು, ಅರ್ಧಂಬರ್ಧ, ಮುಕ್ಕಾಲು, ಈ ಸ್ಥಿತಿಯಲ್ಲೇ ಮುಂದುವರೆಯುತ್ತೆ. ಪ್ರಾಶಸ್ತ್ಯದ ಪಟ್ಟಿ ಪ್ರಕಾರ, ಕೆಲಸಗಳ ಆಯ್ಕೆ ಜವಾಬ್ದಾರಿ ಹೊತ್ತು ಮುಗಿಸಬೇಕು.

ಸದಾ ಟೆನ್ಶನ್ ಇರಬೇಕು:
ನನ್ನ ಪ್ರಕಾರ ಒತ್ತಡ ಇದ್ದರೇನೇ, ನಮ್ಮ ಮೆದುಳು ಚುರುಕಾಗಿ, ಇಡೀ ಮೈ-ಮನ ನಿಗದಿತ ಸಮಯದೊಳಗೆ ಆ ಕಾರ್ಯ ಮುಗಿಸಲು, ಸ್ವಪ್ರಚೋದನೆ, ವೇಗ ಕೊಡುವಿಕೆ ಎಲ್ಲ ಸೃಷ್ಟಿ ಮಾಡುತ್ತವೆ. ಬಹಳ ಜನಕ್ಕೆ, ಆತುರ-ಒತ್ತಡ ಇಲ್ಲದಿದ್ದರೆ, ನಿಧಾನವಾಗಿ ಕೆಲಸ ಮಾಡುತ್ತಾರೆ. ಅದು ಯಾವಾಗ ಬೇಕಾದರೂ ಮುಗಿಯಲಿ ಎಂಬ ತಾತ್ಸಾರ, ಬೇಜವಾಬ್ದಾರಿತನ ಇರುತ್ತದೆ. ಕಾಲ ನಿಗದಿತವಾಗಿದ್ದ ಕೆಲಸಗಳನ್ನು ನಿಗದಿತ ಕಾಲದಲ್ಲೇ ಮಾಡಿ ಮುಗಿಸಬೇಕು.

-ಎನ್.ವ್ಹಿ.ರಮೇಶ್,
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು ಆಕಾಶವಾಣಿ
ಮೊ:-೯೮೪೫೫-೬೫೨೩೮.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ